ಗದಗ, ಆ.4: ಜಿಲ್ಲೆಯ ರೋಣ(Ron)ತಾಲೂಕಿನ ಭಾಸಲಾಪೂರ ಗ್ರಾಮದಲ್ಲಿ ಆಗಸ್ಟ್ 2 ರಂದು ನಡೆದ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೊದಲು ಕೌಟುಂಬಿಕ ಕಲಹದಿಂದ ಕೊಲೆ ಮಾಡಲಾಗಿದೆಯೆಂದು ತಿಳಿದಿದ್ದ ಪೊಲೀಸರಿಗೆ. ತನಿಖೆ ವೇಳೆ ಹತ್ಯೆಗೆ ಕಾರಣವೇನೆಂಬ ಸತ್ಯಾಂಶ ಬೆಳಕಿಗೆ ಬಂದಿದೆ. ಹೌದು, ಪದೇ ಪದೇ ಅಪರಿಚಿತ ನಂಬರ್ನಿಂದ ಪತ್ನಿಗೆ ಬರುತ್ತಿದ್ದ ಕರೆಯಿಂದ ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ಪತಿ ಕೊಲೆ ಮಾಡಿದ್ದಾನೆ ಎಂದು ಗದಗ ಎಸ್ಪಿ ಬಿಎಸ್ ನೇಮಗೌಡ ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನು 15 ವರ್ಷದ ಹಿಂದೆ ಮದವೆಯಾಗಿದ್ದ ಸಂಗೀತಾ ಹಾಗೂ ಮಹೇಶ ಪಾಟೀಲ್ ದಂಪತಿಗೆ ಮೂವರು ಮಕ್ಕಳು ಕೂಡ ಇದ್ದರು. ಸುಖವಾಗಿ ಜೀವನ ನಡೆಸುತ್ತಿದ್ದ ಕುಟುಂಬದಲ್ಲಿ ಬರ ಸಿಡಿಲು ಬಡಿದಂತಾಗಿದೆ. ಒಂದು ತಿಂಗಳಿಂದ ಅಪರಿಚಿತ ನಂಬರ್ನಿಂದ ಬರುತ್ತಿದ್ದ ಕರೆಯಿಂದ ಅನುಮಾನಗೊಂಡ ಪತಿ. ಪತ್ನಿ ಸಂಗೀತಾ ಪಾಟೀಲ್ನ್ನು ಕೊಲೆ ಮಾಡಲು ಪ್ಲಾನ್ ಮಾಡಿಯೇ ಜಮೀನಿಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ನಾಲ್ಕೈದು ಬಾರಿ ಚಾಕುವಿನಿಂದ ಇರಿದು, ಆಕೆಯನ್ನ ಕೃಷಿ ಹೊಂಡಕ್ಕೆ ಹಾಕಿದ್ದ. ಈ ಘಟನೆಗೆ ಸಂಬಂಧಪಟ್ಟಂತೆ ಇದೀಗ ರೋಣ ಪೊಲೀಸರಿಂದ ಕೊಲೆ ಮಾಡಿದ ಆರೋಪಿ ಮಹೇಶ ಪಾಟೀಲ್ನನ್ನು ಬಂಧಿಸಲಾಗಿದೆ.
ಇದನ್ನೂ ಓದಿ:3 ದಿನಗಳ ಹಿಂದೆಯೇ ಕೊಲೆ..ಶವಗಳ ಜತೆಯೇ ಇದ್ದ ಟೆಕ್ಕಿ! FSL ಪರಿಶೀಲನೆ ವೇಳೆ ಹೊರಬಿತ್ತು ಭಯಾನಕ ಸತ್ಯ
ಚಾಮರಾಜನಗರ: ಉಪಕಾರಾಗೃಹದಿಂದ ತಮಿಳುನಾಡು ಸತ್ಯಮಂಗಲಂ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ವಿಚಾರಣಾಧೀನ ಕೈದಿ ಎಸ್ಕೇಪ್ ಆದ ಘಟನೆ ನಡೆದಿದೆ. ತಮಿಳುನಾಡಿನ ಹಾಸನೂರು ಬಳಿ ಟೀ ಕುಡಿಯುವಾಗ ಚಾಮರಾಜನಗರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸರಿಗೆ ಚಳ್ಳೇಹಣ್ಣು ತಿನಿಸಿ ಪರಾರಿಯಾಗಿದ್ದಾನೆ. ಸುರೇಶ(28) ಪರಾರಿಯಾದ ವಿಚಾರಣಾಧೀನ ಕೈದಿ. ಇತ ಅನೇಕ ಕಳ್ಳತನ ಪ್ರಕರಣಗಳ ಹಿನ್ನಲೆ ಚಾಮರಾಜನಗರ ಜೈಲಿನಲ್ಲಿದ್ದ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ