AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ತಂದೆ-ಮಗನ ಜಗಳ ಬೀಡಿಸಲು ಹೋದ ಚಿಕ್ಕಪ್ಪನ ಕೊಲೆಗೆ ಯತ್ನ!

ತಂದೆ ಮತ್ತು ಮಗ ಜಗಳ ಮಾಡುತ್ತಿರುವುದನ್ನು ಬಿಡಿಸಲು ಬಂದ ಚಿಕ್ಕಪ್ಪನನ್ನೇ ಕೊಲೆ ಮಾಡಲು ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಗಾಯಾಳುವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿಲಾಗಿದೆ.

ಚಿಕ್ಕಬಳ್ಳಾಪುರ: ತಂದೆ-ಮಗನ ಜಗಳ ಬೀಡಿಸಲು ಹೋದ ಚಿಕ್ಕಪ್ಪನ ಕೊಲೆಗೆ ಯತ್ನ!
ತಂದೆ-ಮಗನ ಜಗಳ ಬೀಡಿಸಲು ಬಂದ ಚಿಕ್ಕಪ್ಪನ ಕೊಲೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ (ಸಾಂದರ್ಭಿಕ ಚಿತ್ರ)
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: Rakesh Nayak Manchi|

Updated on:Aug 04, 2023 | 6:37 PM

Share

ಚಿಕ್ಕಬಳ್ಳಾಪುರ, ಆಗಸ್ಟ್ 4: ಹಣಕಾಸಿನ ವಿಚಾರದಲ್ಲಿ ತಂದೆ ಮಗನ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಬಂದ ಚಿಕ್ಕಪ್ಪನನ್ನೇ ಮಹಡಿ ಮೇಲಿಂದ ತಳ್ಳಿ ಕೊಲೆ ಮಾಡಲು ಯತ್ನಿಸಿದ (Murder Attempt) ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಡಿ-ಪಾಳ್ಯಾ ಗ್ರಾಮದಲ್ಲಿ ನಡೆದಿದೆ.

ಡಿ-ಪಾಳ್ಯಾ ಗ್ರಾಮದಲ್ಲಿ ನಿವೃತ್ತ ಶಿಕ್ಷಕ ನಾರಾಯಣರೆಡ್ಡಿ ಅವರಿಗೆ ಲೋಕೇಶ ಎನ್ನುವ ಮಗನಿದ್ದಾನೆ. ಲೊಕೇಶ ಹಣಕ್ಕಾಗಿ ತಂದೆಯ ಜೊತೆ ಜಗಳ ತೆಗೆದಿದ್ದಾನೆ. ಇದರಿಂದ ಭಯಗೊಂಡ ತಂದೆ ತನ್ನ ತಮ್ಮ ರಾಮರೆಡ್ಡಿಗೆ ಕರೆ ಮಾಡಿ ರಕ್ಷಣೆಗೆ ಮನವಿ ಮಾಡಿದ್ದಾನೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ರೇಷ್ಮೆಗೂಡು ಮಾರುಕಟ್ಟೆಯಲ್ಲಿ ವೈಪೈ ಇಂಟರ್​​ನೆಟ್ ಸಮಸ್ಯೆ, ರೈತರಿಂದ ಪ್ರತಿಭಟನೆ

ಕೂಡಲೇ ರಾಮರೆಡ್ಡಿ ತನ್ನ ಮಗ ಅಶೋಕ್ ಕುಮಾರ್ ಜೊತೆ ನಾರಾಯಣರೆಡ್ಡಿಯ ರಕ್ಷಣೆಗೆ ಮುಂದಾಗಿ ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಲೊಕೇಶ ತನ್ನ ಚಿಕ್ಕಪ್ಪ ರಾಮರೆಡ್ಡಿಯನ್ನು ಮೊದಲನೇ ಮಹಡಿಯಿಂದ ಕೆಳಗೆ ತಳ್ಳಿದ್ದಾನೆ.

ಘಟನೆಯಲ್ಲಿ ರಾಮರೆಡ್ಡಿ ತಲೆಗೆ ಗಾಯಗಳಾಗಿದ್ದು, ಎರಡೂ ಕೈಗಳಿಗೆ ಗಾಯವಾಗಿವೆ. ಹೀಗಾಗಿ ರಾಮರೆಡ್ಡಿ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ ಅಶೋಕ್ ಕುಮಾರ್, ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪೊಲೀಸರು ಕಲಂ 323, 325 ಐಪಿಸಿ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:35 pm, Fri, 4 August 23

Follow Us
Bheemappa Patil
Bheemappa Patil

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More