ಆಂಧ್ರಪ್ರದೇಶ: ಮದುವೆಯಾಗಲು ನಿರಾಕರಿಸಿದ ಡೆಂಟಲ್ ವಿದ್ಯಾರ್ಥಿನಿಯನ್ನು ಅವಳ ಟೆಕ್ಕಿ ಗೆಳೆಯ ಗಂಟಲು ಸೀಳಿ ಕೊಂದುಬಿಟ್ಟನೇ?
ತಪಸ್ವಿಯ ತಂದೆತಾಯಿ ಮುಂಬೈನಲ್ಲಿ ವಾಸವಾಗಿದ್ದಾರೆ ಮತ್ತು ಅವಳು ವಿಜಯವಾಡದಲ್ಲಿರುವ ಕಾಲೇಜು ಹಾಸ್ಟೆಲ್ ನಲ್ಲಿ ವಾಸವಾಗಿದ್ದಳು. ಸುಮಾರು ಎರಡು ವರ್ಷಗಳ ಹಿಂದೆ ಅವಳಿಗೆ ಗ್ಯಾನೇಶ್ವರ್ ಪರಿಚಯ ಇನ್ ಸ್ಟಾಗ್ರಾಮ್ ಮೂಲಕ ಆಗಿತ್ತು ಮತ್ತು ಅವರ ನಡುವೆ ಬಾಂಧವ್ಯ ಬೆಸೆದಿತ್ತು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ತನ್ನಿಂದ ಬೇರ್ಪಟ್ಟು ಕೆಲವು ತಿಂಗಳುಗಳ ಬಳಿಕ ಮದುವೆ ಪ್ರಸ್ತಾಪವನ್ನು ತಿರಸ್ಕರಿಸದ ಮಾಜಿ ಗೆಳತಿ ಮತ್ತು ದಂತ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ 20-ವರ್ಷದ ಯುವತಿಯನ್ನು 26-ವರ್ಷ-ವಯಸ್ಸಿನ ಸಾಫ್ಟ್ ಇಂಜಿನೀಯರೊಬ್ಬ (software engineer) ಸರ್ಜರಿಗಳಿಗೆ ಉಪಯೋಗಿಸುವ ಚಾಕುವಿನಿಂದ (surgical knife) ಗಂಟಲು ಸೀಳಿ ಕೊಂದಿರುವನೆಂದು ಆರೋಪಿಸಲಾಗಿದೆ. ಭಯಾನಕ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ತಕ್ಕೆಲಪಾಡು (Takkelapadu) ಎಂಬಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಆರೋಪಿ ಗ್ಯಾನೇಶ್ವರ್ ನ ಕಿರುಕುಳ ತಾಳಲಾರದೆ, ಕೊಲೆಯಾಗಿರುವ ಯುವತಿ ತಪಸ್ವಿ ಸುಮಾರು 10 ದಿನಗಳಿಂದ ತನ್ನ ಒಬ್ಬ ಕ್ಲಾಸ್ ಮೇಟ್ ವಾಸಿಸಲಾರಂಭಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಕೃಷ್ಣಾ ಜಿಲ್ಲೆಯ ಕೃಷ್ಣಾಪುರಂ ನಿವಾಸಿಯಾಗಿದ್ದ ತಪಸ್ವಿ ವಿಜಯವಾಡದ ಸಿದ್ದಾರ್ಥಾ ಮೆಡಿಕಲ್ ಕಾಲೇಜಿನಲ್ಲಿ ದಂತ ವಿಜ್ಞಾನ ಪದವಿಯ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿದ್ದಳು.
‘…ವಿಜಯವಾಡದಲ್ಲಿ ಸಾಫ್ಟ್ ವೇರ್ ಇಂಜಿನೀಯರ್ ಅಗಿ ಕೆಲಸ ಮಾಡುತ್ತಿದ್ದ ಗ್ಯಾನೇಶ್ವೆರ್ ಎನ್ನುವವನನ್ನು ಬಂಧಿಸಿ ಇಂಡಿಯನ್ ಪೀನಲ್ ಕೋಡ್ 302 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ,’ ಎಂದು ಸ್ಥಳೀಯ ಅಧಿಕಾರಿ ಬಂಡಾರು ಸುರೇಶ್ ಬಾಬು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಪಸ್ವಿಯ ತಂದೆತಾಯಿ ಮುಂಬೈನಲ್ಲಿ ವಾಸವಾಗಿದ್ದಾರೆ ಮತ್ತು ಅವಳು ವಿಜಯವಾಡದಲ್ಲಿರುವ ಕಾಲೇಜು ಹಾಸ್ಟೆಲ್ ನಲ್ಲಿ ವಾಸವಾಗಿದ್ದಳು. ಸುಮಾರು ಎರಡು ವರ್ಷಗಳ ಹಿಂದೆ ಅವಳಿಗೆ ಗ್ಯಾನೇಶ್ವರ್ ಪರಿಚಯ ಇನ್ ಸ್ಟಾಗ್ರಾಮ್ ಮೂಲಕ ಆಗಿತ್ತು ಮತ್ತು ಅವರ ನಡುವೆ ಬಾಂಧವ್ಯ ಬೆಸೆದಿತ್ತು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
‘… ಸುಮಾರು 4 ತಿಂಗಳ ಹಿಂದೆ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ತಪಸ್ವಿ ಮತ್ತು ಗ್ಯಾನೇಶ್ವರ್ ನಡುವೆ ವಿರಸ ಉಂಟಾಗಿತ್ತು ಹಾಗೂ ಅವರು ಸಂಬಂಧ ಕಡಿದುಕೊಂಡಿದ್ದರು. ಅದಾದ ಮೇಲೆ ಅವನು ನಿರಂತರವಾಗಿ ತನ್ನನ್ನು ಮದುವೆಯಾಗುವಂತೆ ತಪಸ್ವಿಯನ್ನು ಪೀಡಿಸುತ್ತಾ ಕಿರುಕುಳ ನೀಡುತ್ತಿದ್ದ. ಅವನ ಹಿಂಸೆ ತಾಳಲಾರದೆ ಯವತಿಯು ಸುಮಾರು 10 ದಿನಗಳ ಹಿಂದೆ ತನ್ನ ಒಬ್ಬ ಕ್ಲಾಸ್ ಮೇಟ್ ಜೊತೆ ವಾಸ ಮಾಡತೊಡಗಿದ್ದಳು,’ ಎಂದು ಸುರೇಶ್ ಬಾಬು ಹೇಳಿದ್ದಾರೆ.
ಸೋಮವಾರ ರಾತ್ರಿ ಗ್ಯಾನೇಶ್ವರ್ ತಪಸ್ವಿ ವಾಸವಾಗಿದ್ದ ಅವಳ ಕ್ಲಾಸ್ ಮೇಟ್ ರೂಮಿಗೆ ತೆರಳಿ ಜಗಳ ಶುರುವಿಟ್ಟುಕೊಂಡಿದ್ದಾನೆ. ತಪಸ್ವಿಯ ಸಹಪಾಠಿ ಅವನನ್ನು ಶಾಂತಗೊಳಿಸುವ ಪ್ರಯತ್ನ ನಡೆಸಿದರೂ ಅವನು ಸುಮ್ಮನಾಗಿಲ್ಲ. ನಂತರ ಅವನು ತನ್ನ ಜೇಬಿನಲ್ಲಿದ್ದ ಸರ್ಜಿಕಲ್ ಚಾಕು ಹೊರತೆಗೆದು 20-ವರ್ಷದ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಅವಳ ಸಹಪಾಠಿ ನೆರೆಹೊರೆಯವರ ಸಹಾಯ ಯಾಚಿಸಲು ಹೊರಗೋಡಿದ್ದಾಳೆ.
ಒಂದಷ್ಟು ಜನರನ್ನು ಅವಳು ಜೊತೆಗೂಡಿಸಿಕೊಂಡು ವಾಪಸ್ಸಾಗುವಷ್ಟರಲ್ಲಿ ಗ್ಯಾನೇಶ್ವರ್ ಅವಳ (ತಪಸ್ವಿ) ಗಂಟಲು ಸೀಳಿ ಅವಳನ್ನು ಮತ್ತೊಂದು ರೂಮಿಗೆ ಎಳೆದೊಯ್ದು ಒಳಗಿನಿಂದ ಬೋಲ್ಟ್ ಹಾಕಿಕೊಂಡಿದ್ದ.
‘ನೆರೆಹೊರೆಯವರು ಬಾಗಿಲು ಮುರಿದು ಒಳಹೊಕ್ಕು ತನ್ನ ಕೈ ಕೊಯ್ದುಕೊಳ್ಳುವ ಪ್ರಯತ್ನದಲ್ಲಿದ್ದ ಗ್ಯಾನೇಶ್ವರ್ ನನ್ನು ಹಿಡಿದು ಪೊಲೀಸರಿಗೆ ಫೋನ್ ಮಾಡಿದ್ದಾರೆ,’ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
‘ತಪಸ್ವಿಯನ್ನು ಕೂಡಲೇ ಗುಂಟೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅವಳು ಪ್ರಾಣಬಿಟ್ಟಿದ್ದಳು. ಮರಣೋತ್ತರ ಪರೀಕ್ಷೆಗಾಗಿ ಅವಳ ದೇಹವನ್ನು ಗುಂಟೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ,’ ಮುಂದಿನ ತನಿಖೆ ಜಾರಿಯಲ್ಲಿದೆ ಎಂದು ಸುರೇಶ್ ಬಾಬು ಹೇಳಿದ್ದಾರೆ.
ಮತ್ತಷ್ಟು ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ