ಬೆಂಗಳೂರು: ಡಿವೈಡರ್ ಮೇಲೆ ಲಾರಿ ಹಾರಿಸಿದ ಚಾಲಕ, ಮುಂದೆ ಬರುತ್ತಿದ್ದ ಬೈಕ್​ಗೆ ಡಿಕ್ಕಿ; ಸವಾರ ಗಂಭೀರ

ಲಾರಿ ಚಾಲಕನ ಅವಾಂತರದಿಂದಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುವಂತಾಗಿದೆ. ಡಿವೈಡರ್ ಮೇಲೆ ಹಾರಿ ಮುಂದೆ ಬರುತ್ತಿದ್ದ ಬೈಕ್​ಗೆ ಲಾರಿ ಡಿಕ್ಕಿ ಹೊಡೆದ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಕುಡಿದು ಲಾರಿ ಚಲಾಯಿಸಿ ಅಪಘಾತ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಅಪಘಾತವಾದ ಬಳಿಕ ಲಾರಿ ಚಾಲಕ ಪರಾರಿಯಾಗಿದೆ.

ಬೆಂಗಳೂರು: ಡಿವೈಡರ್ ಮೇಲೆ ಲಾರಿ ಹಾರಿಸಿದ ಚಾಲಕ, ಮುಂದೆ ಬರುತ್ತಿದ್ದ ಬೈಕ್​ಗೆ ಡಿಕ್ಕಿ; ಸವಾರ ಗಂಭೀರ
ಸಾಂದರ್ಭಿಕ ಚಿತ್ರ
Edited By:

Updated on: Jan 25, 2024 | 6:54 AM

ಬೆಂಗಳೂರು, ಜ.25: ಲಾರಿ ಚಾಲಕನ ಅವಾಂತರದಿಂದಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುವಂತಾಗಿದೆ. ಡಿವೈಡರ್ ಮೇಲೆ ಹಾರಿ ಮುಂದೆ ಬರುತ್ತಿದ್ದ ಬೈಕ್​ಗೆ ಲಾರಿ ಡಿಕ್ಕಿ ಹೊಡೆದ ಘಟನೆ ಬೆಂಗಳೂರು (Bengaluru) ನಗರದಲ್ಲಿ ತಡರಾತ್ರಿ ನಡೆದಿದೆ. ಕುಡಿದು ಲಾರಿ ಚಲಾಯಿಸಿ ಅಪಘಾತ (Accident) ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಅಪಘಾತವಾದ ಬಳಿಕ ಲಾರಿ ಚಾಲಕ ಪರಾರಿಯಾಗಿದೆ.

ಟಾಟಾ ಇನ್ಸ್ಟಿಟ್ಯೂಟ್ ಬಳಿ ರಾತ್ರಿ 12 ಗಂಟೆ ಸುಮಾರಿಗೆ ಯಶವಂತಪುರದಿಂದ ಬರುತಿದ್ದ ಲಾರಿಯ ಚಾಲಕ ಡಿವೈಡರ್ ಹಾರಿಸಿ ಮಲ್ಲೇಶ್ವರಂ ಕಡೆಯಿಂದ ಬರುತಿದ್ದ ಬೈಕ್​ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತಕ್ಕೊಳಗಾದ ಬೈಕ್ ಚಾಲಕನ ಮುಖ ಹಾಗೂ ದೇಹದ ಕೆಲ ಭಾಗಗಳಲ್ಲಿ ರಕ್ತಗಾಯ‌ಗಳಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರು- ಸೇಲಂ‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ; ಮೂವರು ಧಾರುಣ ಸಾವು

ಲಾರಿಯ ವೇಗದ ಚಾಲನೆ ನಡುವೆ ಮುಂದೆ ಬರುತಿದ್ದ ಎರಡು ಕಾರುಗಳು ಅಪಘಾತದಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿವೆ. ಕುಡಿದು ಲಾರಿ ಚಲಾಯಿಸಿ ಅಪಘಾತ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಅಪಘಾತವಾದ ಬಳಿಕ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ಯಶವಂತಪುರ ಸಂಚಾರಿ ಠಾಣಾ ಪೊಲೀಸರು, ಲಾರಿ ವಶಕ್ಕೆ ಪಡೆದು ಚಾಲಕನ ಮಾಹಿತಿ ಕಲೆಹಾಕುತ್ತಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ