ಬೆಂಗಳೂರು: ಫ್ರೀ ಸ್ಕೂಲ್ ನಿರ್ಲಕ್ಷ್ಯಕ್ಕೆ ನಾಲ್ಕು ವರ್ಷದ ಮಗು ಜೀವನ್ಮರಣ ಹೋರಾಟ; ಮಹಡಿಯಿಂದ ಬಿದ್ದು ತಲೆಗೆ ಗಂಭೀರ ಗಾಯ
ಫ್ರೀ ಸ್ಕೂಲ್ ನಿರ್ಲಕ್ಷ್ಯಕ್ಕೆ ನಾಲ್ಕು ವರ್ಷದ ಕಂದಮ್ಮ ಜೀವನ್ಮರಣ ಹೋರಾಟ ನಡೆಸುತ್ತಿರುವ ಘಟನೆ ಹೆಣ್ಣೂರು(Hennur) ಪೊಲೀಸ್ ಠಾಣಾ ವ್ಯಾಪ್ತಿಯ ಚೆಲ್ಲಕೆರೆಯ ಡೆಲ್ಲಿ ಪ್ರೀ ಸ್ಕೂಲ್(Delhi pre-school)ನಲ್ಲಿ ನಡೆದಿದೆ. ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಜಿನಾ ಅನ್ನಾ ಜಿಟೋ ಎಂಬ ಮಗುವಿಗೆ ಚಿಕಿತ್ಸೆ ಮುಂದುವರೆದಿದೆ.
ಬೆಂಗಳೂರು, ಜ.24: ಫ್ರೀ ಸ್ಕೂಲ್ ನಿರ್ಲಕ್ಷ್ಯಕ್ಕೆ ನಾಲ್ಕು ವರ್ಷದ ಕಂದಮ್ಮ ಜೀವನ್ಮರಣ ಹೋರಾಟ ನಡೆಸುತ್ತಿರುವ ಘಟನೆ ಹೆಣ್ಣೂರು(Hennur) ಪೊಲೀಸ್ ಠಾಣಾ ವ್ಯಾಪ್ತಿಯ ಚೆಲ್ಲಕೆರೆಯ ಡೆಲ್ಲಿ ಪ್ರೀ ಸ್ಕೂಲ್(Delhi pre-school)ನಲ್ಲಿ ನಡೆದಿದೆ. ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಜಿನಾ ಅನ್ನಾ ಜಿಟೋ ಎಂಬ ಮಗುವಿಗೆ ಚಿಕಿತ್ಸೆ ಮುಂದುವರೆದಿದೆ. ಜನವರಿ 22 ರ ಮಧ್ಯಾಹ್ನ ಖಾಸಗಿ ಫ್ರೀ ಸ್ಕೂಲ್ (ನರ್ಸರಿ) ಮೂರನೇ ಮಹಡಿಯಿಂದ ಬಿದ್ದು ತಲೆಗೆ ತೀವ್ರ ಗಾಯವಾಗಿತ್ತು. ಈ ಹಿನ್ನಲೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಮಗು ಜಿನಾ ಚಿಂತಾಜನಕ ಸ್ಥಿತಿಯಲ್ಲಿದೆ.
ಕೇರಳದ ನಿವಾಸಿಗಳಾಗಿರುವ ಪೋಷಕರು
ಖಾಸಗಿ ಕಂಪೆನಿಯಲ್ಲಿ ಟೆಕ್ಕಿಗಳಾಗಿರುವ ಜಿನಾ ತಂದೆ ಜಿಟೋ ಟಾಮಿ ಜೋಸೆಫ್ ಮತ್ತು ತಾಯಿ ಬಿನಿಟೋ ಥಾಮಸ್, ಮೂಲತಃ ಕೇರಳದ ನಿವಾಸಿಗಳಾಗಿದ್ದಾರೆ. ಉದ್ಯೋಗದ ನಿಮಿತ್ತ ಬೆಂಗಳೂರಿನಲ್ಲಿ ಬಂದು ನೆಲೆಸಿದ್ದು, ತಮ್ಮ ಮಗುವನ್ನು ಇಲ್ಲಿನ ಖಾಸಗಿ ಸ್ಕೂಲ್ಗೆ ಸೇರಿಸಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ.
ಟಿವಿನೈನ್ ನಲ್ಲಿ ವರದಿ ಬಿತ್ತರವಾದ ಬಳಿಕ ಎಫ್ಐಆರ್ ದಾಖಲು
ಟಿವಿನೈನ್ನಲ್ಲಿ ವರದಿ ಬಿತ್ತರವಾದ ಬಳಿಕ ಅಲರ್ಟ್ ಆದ ಹೆಣ್ಣೂರು ಪೊಲೀಸರು, ಡೆಲ್ಲಿ ಫ್ರಿ ಸ್ಕೂಲ್(ನರ್ಸರಿ) ವಿರುದ್ದ ಎಫ್ ಐಆರ್ ದಾಖಲು ಮಾಡಲು ಮುಂದಾಗಿದ್ದಾರೆ. ಮಗುವಿನ ತಂದೆ ಜಿಯೋ ಟಾಮಿ ಜೋಸೆಫ್ ಅವರು ‘ವಾಸ್ತವಾಂಶ ಮರೆಮಾಡಿ, ಸರಿಯಾದ ಮಾಹಿತಿ ನೀಡದೆ, ನಿರ್ಲಕ್ಷ್ಯ ವಹಿಸಿರುವ ಫ್ರೀ ಸ್ಕೂಲ್ ವಿರುದ್ದ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:59 pm, Wed, 24 January 24