ಯುಎಇ ಪ್ರವಾಸದಲ್ಲಿರುವ ಧರ್ಮೇಂದ್ರ ಪ್ರಧಾನ್: ಅಬುಧಾಬಿ ಕೋಡಿಂಗ್ ಸ್ಕೂಲ್ಗೆ ಭೇಟಿ
Dharmendra Pradhan: ಧರ್ಮೇಂದ್ರ ಪ್ರಧಾನ್ 42 ಅಬುಧಾಬಿ ಕೋಡಿಂಗ್ ಸ್ಕೂಲ್ಗೆ ಭೇಟಿ ನೀಡಿ, ಅಲ್ಲಿನ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಇಲ್ಲಿನ ಮಕ್ಕಳಿಗೆ ನಾವೀನ್ಯತೆ, ಸೃಜನಶೀಲತೆ ಮತ್ತು ಪೀರ್-ಟು-ಪೀರ್ ಕಲಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಧರ್ಮೇಂದ್ರ ಪ್ರಧಾನ್ ಅವರು 42 ಅಬುಧಾಬಿ ಕೋಡಿಂಗ್ ಸ್ಕೂಲ್ ಉತ್ತಮ ಶಿಕ್ಷಣ ಹಾಗೂ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ದಾರಿಯನ್ನು ತೋರಿಸುವ ಕೆಲಸವನ್ನು ಮಾಡುತ್ತದೆ ಎಂದು ಹೇಳಿದ್ದಾರೆ.
ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಇಂದಿನಿಂದ (ನ.1) ಮೂರು ದಿನಗಳ ಕಾಲ ಯುಎಇ ಪ್ರವಾಸದಲ್ಲಿರಲಿದ್ದಾರೆ. ಈ ಭೇಟಿ ರಾಜತಾಂತ್ರಿಕವಾಗಿದ್ದು, ಹಲವು ವಿಚಾರಗಳ ಬಗ್ಗೆ ಉಭಯ ರಾಷ್ಟ್ರಗಳು ಚರ್ಚೆ ನಡೆಸಲಿದೆ. ಇನ್ನು ಧರ್ಮೇಂದ್ರ ಪ್ರಧಾನ್ ಅವರು ಈ ಭೇಟಿಯಲ್ಲಿ ಶೈಕ್ಷಣಿಕ ವಿಚಾರದ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಲಿದೆ ಎಂದು ಹೇಳಿದ್ದಾರೆ. ಸಚಿವರು ಯುಎಇ ಭೇಟಿ ನೀಡಿರುವ ಬಗ್ಗೆ ಎಕ್ಸ್ನಲ್ಲಿ (ಈ ಹಿಂದಿನ ಟ್ವಿಟರ್) ಹಂಚಿಕೊಂಡಿದ್ದಾರೆ. ಯುಎಇ ಜತೆಗೆ “ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಭಾಗವಹಿಸುವಿಕೆ, ಸಹಯೋಗ ಮತ್ತು ಪಾಲುದಾರಿಕೆಯನ್ನು ಬೆಳೆಸುವುದು ಈ ಪ್ರವಾಸದ ಪ್ರಮುಖ ಉದ್ದೇಶವಾಗಿದೆ. ಈ ಕ್ಷೇತ್ರಗಳ ಮೂಲಕ ಪರಸ್ಪರ ಲಾಭದಾಯಕ ಅವಕಾಶಗಳಿಗೆ ವೇದಿಕೆಯನ್ನು ಸೃಷ್ಟಿಸುವ ಇದರ ಗುರಿಯಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಅಂದರೆ ಯುಎಇಗೆ ಪ್ರಯಾಣಿಸುವ ಸಮಯದಲ್ಲಿ ಭೇಟಿ ನೀಡುವ ಬಗ್ಗೆ ಎಕ್ಸ್ನಲ್ಲಿ ಹಂಚಿಕೊಂಡಿದ್ದರು. ನಾನು ಮೂರು ದಿನಗಳ ಕಾಲ ಯುಎಇಗೆ ಪ್ರವಾಸ ಕೈಗೊಂಡಿದ್ದೇನೆ. ಅಲ್ಲಿ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲು ಮತ್ತು ನಮ್ಮ ಎರಡು ದೇಶಗಳ ನಡುವಿನ ಶೈಕ್ಷಣಿಕ ವಿಚಾರಗಳ ಬಗ್ಗೆ ಹಾಗೂ ಶಿಕ್ಷಣದಲ್ಲಿ ಜಾಗತಿಕವಾಗಿ ಮತ್ತು ಆಧುನೀಕ ಬೆಳವಣಿಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಈ ಚರ್ಚೆ ಭಾರತಕ್ಕೆ ಒಂದು ಒಳ್ಳೆಯ ಚೈತನ್ಯ ನೀಡಲಿದೆ ಎಂಬ ವಿಶ್ವಾಸ ನನಗೆ ಇದೆ ಎಂದು ಬರೆದುಕೊಂಡಿದ್ದರು.
ಇಂದು ಸಚಿವ ಧರ್ಮೇಂದ್ರ ಪ್ರಧಾನ್ 42 ಅಬುಧಾಬಿ ಕೋಡಿಂಗ್ ಸ್ಕೂಲ್ಗೆ ಭೇಟಿ ನೀಡಿ, ಅಲ್ಲಿನ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಇಲ್ಲಿನ ಮಕ್ಕಳಿಗೆ ನಾವೀನ್ಯತೆ, ಸೃಜನಶೀಲತೆ ಮತ್ತು ಪೀರ್-ಟು-ಪೀರ್ ಕಲಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಧರ್ಮೇಂದ್ರ ಪ್ರಧಾನ್ ಅವರು 42 ಅಬುಧಾಬಿ ಕೋಡಿಂಗ್ ಸ್ಕೂಲ್ ಉತ್ತಮ ಶಿಕ್ಷಣ ಹಾಗೂ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ದಾರಿಯನ್ನು ತೋರಿಸುವ ಕೆಲಸವನ್ನು ಮಾಡುತ್ತದೆ ಎಂದು ಹೇಳಿದ್ದಾರೆ. ಇದು 24 ಗಂಟೆಯು ಕಾರ್ಯನಿರ್ವಹಿಸುತ್ತದೆ. ಈ ಮೂಲಕ ಎಲ್ಲರೂ ಕಲಿಯಬಹುದು. ಇದು ಅನೇಕ ಉದ್ಯೋಗ ಹಾಗೂ ಉತ್ತಮ ಶಿಕ್ಷಣವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಧರ್ಮೇಂದ್ರ ಪ್ರಧಾನ್ ಟ್ವೀಟ್
Visited 42 Abu Dhabi, a coding school with deep focus on encouraging innovation, creativity and peer-to-peer learning through project-based and gamified curriculum.
A first-of-its-kind school in the GCC, @42AbuDhabi’s thrust on removing barriers to education for realising the… pic.twitter.com/HHw8rmR4pV
— Dharmendra Pradhan (@dpradhanbjp) November 1, 2023
ಇನ್ನು ಎಎನ್ಐ ಜತೆಗೆ ಮಾತನಾಡಿದ ಧರ್ಮೇಂದ್ರ ಪ್ರಧಾನ್ “ಯುಎಇ-ಭಾರತ ಸಂಬಂಧಗಳು ಇಂದು ಉತ್ತಮ ಸ್ಥಿತಿಯಲ್ಲಿವೆ. ಕಾರ್ಯತಂತ್ರದ ಪಾಲುದಾರಿಕೆಯಲ್ಲಿ, ವಿಶೇಷವಾಗಿ ಶಿಕ್ಷಣ ಮತ್ತು ಕೌಶಲ್ಯದಲ್ಲಿ, ಭಾರತ ಮತ್ತು ಯುಎಇ ಬಲವಾದ ಸಂಬಂಧವನ್ನು ಹೊಂದಿವೆ. UAE ಯಲ್ಲಿ IIT, ಮತ್ತು ಭಾರತದ ಅನೇಕ ಪ್ರಮುಖ ವಿಶ್ವವಿದ್ಯಾನಿಲಯಗಳು ಈಗಾಗಲೇ ಇಲ್ಲಿಗೆ ಬಂದಿವೆ. ಸದ್ಯದಲ್ಲಿಯೇ ಹೆಚ್ಚಿನ ವಿಶ್ವವಿದ್ಯಾಲಯಗಳು ಬರಬಹುದು. ಭಾರತದ ಪ್ರಮುಖ ರಾಷ್ಟ್ರೀಯ ಶಿಕ್ಷಣ ಮಂಡಳಿಯಾದ CBSE ಯ 100 ಕ್ಕೂ ಹೆಚ್ಚು ಶಾಲೆಗಳು UAE ನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಲ್ಲೊಂದು CBSE ಕಛೇರಿ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡಿಜಿಟಲ್ ಕೌಶಲ್ಯಗಳನ್ನು ಸುಧಾರಿಸಲು ; ಜೊತೆ ಶಿಕ್ಷಣ ಸಚಿವಾಲಯ ಪಾಲುದಾರಿಕೆ
ಇದೆ ವೇಳೆ ಧರ್ಮೇಂದ್ರ ಪ್ರಧಾನ್ ಅವರು HE Ms. ಸಾರಾ ಮುಸಲ್ಲಮ್, ಆರಂಭಿಕ ಶಿಕ್ಷಣದ ರಾಜ್ಯ ಸಚಿವರು ಮತ್ತು ಅಬುಧಾಬಿ ಶಿಕ್ಷಣ ಮತ್ತು ಜ್ಞಾನ ಇಲಾಖೆಯ (ADEK) ಅಧ್ಯಕ್ಷರನ್ನು ಕೂಡ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. UAE ನ ಶಿಕ್ಷಣ ಸಚಿವ, HE ಡಾ. ಅಹ್ಮದ್ ಅಲ್ ಫಲಾಸಿ, ಮತ್ತು ಯುಎಇ ವಿದೇಶಾಂಗ ಸಚಿವ, ಹೆಚ್ ಎಚ್ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಈ ಭೇಟಿಯಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ಅಬುಧಾಬಿಯ ಜಾಗತಿಕ ತಂತ್ರಜ್ಞಾನ ಪರಿಸರ ವ್ಯವಸ್ಥೆ ಮತ್ತು BAPS ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ನಂತರ ದುಬೈನಲ್ಲಿರುವ IIT/IIM ಹಳೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಂವಾದ ನಡೆಸಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ