ಸತ್ಯಸಾಯಿ ಜಿಲ್ಲೆ: ಅವರಿಬ್ಬರೂ ಪ್ರೀತಿಸಿದ್ದರು, ಮದುವೆ ಆಗಬೇಕಿತ್ತು, ಆದರೆ ಅಷ್ಟರಲ್ಲಿ ಅನಿರೀಕ್ಷಿತ ಟ್ವಿಸ್ಟ್!

ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಮಂಡಲದ ಷಣ್ಮುಖ ನಾಯ್ಕ್ ಮತ್ತು ಅನಂತಪುರ ಉರವಕೊಂಡ ಮಂಡಲದ ತಾಂಡಾದ ರಮಣಮ್ಮ ಪ್ರೇಮಿಗಳು. ಒಟ್ಟಿಗೆ ಇದ್ದ ನಂತರ, ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಎದ್ದಿವೆ. ರಾಜಿ ಪ್ರಯತ್ನಗಳು ನಡೆದರೂ ವಿಫಲಗೊಂಡಿವೆ. ಎರಡು ಕುಟುಂಬಗಳ ನಡುವೆ ಘರ್ಷಣೆಗಳೂ ನಡೆದಿವೆ. ಆ ನಂತರ ಇಬ್ಬರೂ ಬೇರ್ಪಟ್ಟಿದ್ದರು. ಈ ಮಧ್ಯೆ,

ಸತ್ಯಸಾಯಿ ಜಿಲ್ಲೆ: ಅವರಿಬ್ಬರೂ ಪ್ರೀತಿಸಿದ್ದರು, ಮದುವೆ ಆಗಬೇಕಿತ್ತು, ಆದರೆ ಅಷ್ಟರಲ್ಲಿ ಅನಿರೀಕ್ಷಿತ ಟ್ವಿಸ್ಟ್!
ಸತ್ಯಸಾಯಿ ಜಿಲ್ಲೆ: ಅವರಿಬ್ಬರೂ ಪ್ರೀತಿಸಿದ್ದರು, ಮದುವೆ ಆಗಬೇಕಿತ್ತು.. ಆದರೆ
Follow us
ಸಾಧು ಶ್ರೀನಾಥ್​
|

Updated on: Nov 01, 2023 | 2:22 PM

ಗುಂಟೂರು, ನವೆಂಬರ್ 1: ಕರ್ನೂಲ್ ಸರ್ಕಾರಿ ಆಸ್ಪತ್ರೆಯಲ್ಲಿ ಯುವಕನ ಅನುಮಾನಾಸ್ಪದ ಸಾವು ಸಂಚಲನ ಮೂಡಿಸಿದೆ. ಯುವಕ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ ಎಂದು ಆ ಯುವಕನ ಪ್ರೇಮಿಯ ಕಡೆಯವರು ಆರೋಪಿಸಿದರೆ, ಯುವತಿ ಹಾಗೂ ಆಕೆಯ ಕುಟುಂಬಸ್ಥರೇ ಆತನನ್ನು ಕೊಂದಿದ್ದಾರೆ ಎಂದು ಮೃತನ ಪೋಷಕರು ಅಳಲು ತೋಡಿಕೊಂಡಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಯುವಕನ ಕುಟುಂಬದವರು ಒತ್ತಾಯಿಸುತ್ತಿದ್ದಾರೆ. ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಮಂಡಲದ ನೆಲಕೋಟ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದೆ. ವಿವರಗಳಿಗೆ ಹೋಗುವುದಾದರೆ…

ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಮಂಡಲದ ನೆಲಕೋಟ ಗ್ರಾಮದ ಷಣ್ಮುಖ ನಾಯ್ಕ್ ಮತ್ತು ಅನಂತಪುರ ಜಿಲ್ಲೆಯ ಉರವಕೊಂಡ ಮಂಡಲದ ವೆಂಕಟಂ ಪಲ್ಲಿ ತಾಂಡಾದ ರಮಣಮ್ಮ ಪ್ರೇಮಿಗಳು. ಸ್ವಲ್ಪ ಸಮಯದವರೆಗೆ ಒಟ್ಟಿಗೆ ಇದ್ದ ನಂತರ, ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಎದ್ದಿವೆ. ರಾಜಿ ಪ್ರಯತ್ನಗಳು ನಡೆದರೂ ಅವು ವಿಫಲವಾದವು. ಎರಡು ಕುಟುಂಬಗಳ ನಡುವೆ ಘರ್ಷಣೆಗಳೂ ನಡೆದವು. ಆ ನಂತರ ಇಬ್ಬರೂ ಬೇರ್ಪಟ್ಟರು. ಈ ಮಧ್ಯೆ, ಕರ್ನೂಲ್ ನಲ್ಲಿ ಖಾಸಗಿ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಪ್ರಿಯತಮೆ ರಮಣಮ್ಮ ಬಳಿಗೆ, ತಿರುಪತಿಯಲ್ಲಿ ವಾಸವಿದ್ದ ಯುವಕ ಷಣ್ಮುಖ ನಾಯ್ಕ್ ಇತ್ತೀಚೆಗೆ ಬಂದಿದ್ದಾನೆ. ಏನಾಯಿತೋ ಗೊತ್ತಿಲ್ಲ, ಷಣ್ಮುಖ ನಾಯ್ಕ ಪೋಷಕರಿಗೆ ಕರೆ ಮಾಡಿದ ರಮಣಮ್ಮ ಮತ್ತು ಆಕೆಯ ಮನೆಯವರು ಷಣ್ಮುಖ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವನ ಶವ ಆಸ್ಪತ್ರೆಯಲ್ಲಿದೆ ಎಂದು ತಿಳಿಸಿದ್ದಾರೆ.

Also Read:  ಮಗನ ಮಾಜಿ ಪ್ರೇಮಿಗೆ ಪಾಠ ಕಲಿಸಿದ ತಾಯಿ.. ಬಾಕ್ಸಿಂಗ್​​​ ರಿಂಗ್ ನಲ್ಲಿ ಯಾವ ರೇಂಜ್ ಗೆ ರಿವೆಂಜ್​​ ತೀರಿಸಿಕೊಂಡರು ನೋಡಿ

ತಕ್ಷಣ ಕರ್ನೂಲಿಗೆ ಬಂದ ಷಣ್ಮುಖ ನಾಯ್ಕ ಅವರ ಪೋಷಕರ ದುಃಖತಪ್ತರಾಗಿದ್ದಾರೆ. ರಮಣಮ್ಮ ತಂದೆ-ತಾಯಿ ಸೇರಿ ನಮ್ಮ ಷಣ್ಮುಖನನ್ನು ಕೊಂದಿದ್ದಾರೆ, ಶವ ಪರೀಕ್ಷೆ ನಡೆಸಬೇಕು ಎಂದು ಮೃತನ ಸಂಬಂಧಿಕರು ಆಗ್ರಹಿಸಿದ್ದಾರೆ. ರಮಣಮ್ಮ ಮತ್ತು ಕುಟುಂಬಸ್ಥರು ಮೃತದೇಹವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲು ಸಹಿ ಹಾಕಬೇಕಿದ್ದ ರಮಣಮ್ಮ ಸದ್ಯ ತಲೆಮರೆಸಿಕೊಂಡಿದ್ದಾಳೆ ಎನ್ನಲಾಗಿದೆ. ಸಂಪೂರ್ಣ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕರ್ನೂಲ್ 3 ಟೌನ್ ಪೊಲೀಸ್ ಠಾಣೆ ಹಾಗೂ ಧರ್ಮಾವರಂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತರು ದೂರು ದಾಖಲಿಸಿದ್ದಾರೆ. ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು