ಬ್ರೆಜಿಲ್: ತನ್ನಿಂದ ಬೇರ್ಪಟ್ಟಿದ್ದಕ್ಕೆ ಅವನು ತನ್ನ ಮಗುವಿನ ತಾಯಿಯೂ ಆಗಿದ್ದ 20 ರ ಪ್ರಾಯದ ಗರ್ಲ್​ಫ್ರೆಂಡ್​ಳನ್ನು ಗುಂಡಿಟ್ಟು ಕೊಂದನೇ?

ತಮ್ಮ ಮಗಳು ಬೇರ್ಪಡಲು ಬಯಸುವುದಾಗಿ ಅಲೆಸ್ಸಾಂಡ್ರೆಗೆ ತಿಳಿಸಿದ ನಂತರ ಅವನು ಅವಳನ್ನು ತನ್ನ ಮನೆಯಲ್ಲಿ ಕೂಡಿಹಾಕಿ ಮನೆಗೆ ಬೀಗ ಜಡಿಯುತ್ತಿದ್ದ ಎಂದು ಜೆನ್ನಿಫರ್ ಅಮ್ಮ ಹೇಳಿಕೊಂಡಿದ್ದಾರೆ.

ಬ್ರೆಜಿಲ್: ತನ್ನಿಂದ ಬೇರ್ಪಟ್ಟಿದ್ದಕ್ಕೆ ಅವನು ತನ್ನ ಮಗುವಿನ ತಾಯಿಯೂ ಆಗಿದ್ದ 20 ರ ಪ್ರಾಯದ ಗರ್ಲ್​ಫ್ರೆಂಡ್​ಳನ್ನು ಗುಂಡಿಟ್ಟು ಕೊಂದನೇ?
ಜೆನ್ನಿಫರ್ ಕ್ರಿಸ್ಟಿನಾ ಡಾಸ್ ಸ್ಯಾಂಟೋಸ್ ಮೊರೀರಾ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 29, 2022 | 8:02 AM

ಬ್ರೆಜಿಲ್ ನಲ್ಲಿ ಬಸ್ ಗಾಗಿ ಕಾಯುತ್ತಿದ್ದ ಒಬ್ಬ 20-ವರ್ಷದ ತರುಣಿಯನ್ನು ಗುಂಡಿಟ್ಟು ಕೊಲ್ಲಲಾಗಿದ್ದು ಅವಳ ಮಾಜಿ ಪ್ರಿಯಕರನೇ ಹತ್ಯೆಗೈದಿದ್ದಾನೆಂದು ಶಂಕಿಸಲಾಗಿದೆ. ಸಾವೋ ಪಾಲೊ ನಗರದ ಅವೆನಿಡಾ ರಗೇಬ್ ಚೋಫಿ ಎಂಬಲ್ಲಿ ಜೆನ್ನಿಫರ್ ಕ್ರಿಸ್ಟಿನಾ ಡಾಸ್ ಸ್ಯಾಂಟೋಸ್ ಮೊರೀರಾಳನ್ನು ಅಕ್ಟೋಬರ್ 20 ರ ಬೆಳಗಿನ ಜಾವ ಕೊಲೆ ಮಾಡಲಾಗಿದೆ. ಜೆನ್ನಿಫರ್ ಕೆಲಸಕ್ಕೆ ತನ್ನ ಕಚೇರಿಗೆ ತೆರಳಲು ಸಾರ್ವಜನಿಕ ಸಾರಿಗೆ ಬಸ್ ಗಾಗಿ ಕಾಯುತ್ತಿದ್ದಾಗ ಅವಳ ಮೇಲೆ ಗುಂಡು ಹಾರಿಸಲಾಗಿದೆ. ಕೊಲೆ ನಡೆದ ಮರುದಿನವೇ ಅವಳ ಎಕ್ಸ್ -ಬಾಯ್ ಫ್ರೆಂಡ್ 35-ವರ್ಷ-ವಯಸ್ಸಿನ ಅಲೆಸ್ಸಾಂಡ್ರೆ ಗಾರ್ಸಿಯಾ ಡ ಸಿಲ್ವಾನನ್ನ ಪೊಲೀಸರು ಬಂಧಿಸಿದರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಜೆನ್ನಿಫರ್ ತನ್ನ ಸಹೊದ್ಯೋಗಿಗಳ ಜೊತೆ ಮೆಟ್ಟಿಲುಗಳ ಹಾಗೆ ಕಾಣುವ ಸ್ಥಳದಲ್ಲಿ ಕೂತಿರುವುದು ಮತ್ತು ಅಲೆಸ್ಸಾಂಡ್ರೆ ಅವಳ ಹಿಂಭಾಗದಿಂದ ಹೊಂಚು ಹಾಕುತ್ತಾ ಬರುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಂತರ ಅವನು ಜೆನ್ನಿಫರ್ ಳತ್ತ ಸಾಗಿ ಅವಳ ಮೇಲೆ 5 ಬಾರಿ ಗುಂಡು ಹಾರಿಸುವುದು ಸಹ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗುಂಡಿನ ದಾಳಿಯ ನಂತರ ಅವಳನ್ನು ಸಂತ ಮರ್ಸಿಲೀನಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಕೆಲವೇ ನಿಮಿಷಗಳ ಕಾಲ ಸಾವಿನೊಂದಿಗೆ ಹೋರಾಡಿ ಅವಳು ಕೊನೆಯುಸಿರೆಳೆಯುತ್ತಾಳೆ.

ಜೆನ್ನಿಫರ್ ತನ್ನೊಂದಿಗಿನ ಸಂಬಂಧವನ್ನು ಕೊನೆಗಾಣಿಸಿದ್ದಾಳೆ ಎಂಬ ಅಂಶವನ್ನು ಅಂಗೀಕರಿಸಲು ಅಲೆಸ್ಸಾಂಡ್ರೆ ಸಿದ್ಧವೇ ಇರಲಿಲ್ಲ ಎಂದು ಅವಳ ಕುಟುಂಬ ಹೇಳಿದೆ. ಹಾಗಾಗೇ, ಅವನು ಜೆನ್ನಿಫರ್ ಮತ್ತು ಅವಳ ಎರಡು ಮಕ್ಕಳಿಗೆ-ಇದರಲ್ಲಿ ಒಂದು 9-ತಿಂಗಳು ಅವನಿಗೆ ಹುಟ್ಟಿದ್ದು, ಬೆದರಿಕೆಗಳನ್ನು ಒಡ್ಡಲಾರಂಭಿಸಿದ್ದ.

ಘಟನೆಯ ಬಗ್ಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತಾಡಿದ ಪೊಲೀಸ್ ಬಾತ್ಮೀದಾರ ಲಿಯಾನಾರ್ಡೊ ರೆಸೆಂಡೆ, ‘ಇದಕ್ಕೂ ಮೊದಲು ಅವನು ಜೆನ್ನಿಫರ್ ಳಿಗೆ ಜೀವ ಬೆದರಿಕೆ ಒಡ್ಡಿದ್ದ. ಆಗ ಆಕೆ ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ್ದಳು. ನಾವು ತನಿಖೆ ನಡೆಸಿ ಆಕೆಗೆ ಭದ್ರತೆ ಒದಗಿಸುವ ಅವಶ್ಯಕತೆಯಿದೆ ಎನ್ನುವುದನ್ನು ಮನಗಂಡು ಅದಕ್ಕಾಗಿ ನ್ಯಾಯಾಲಯದ ಮೊರೆಹೊಕ್ಕೆವು.’

ನ್ಯಾಯಾಧೀಶರು ಆಕೆಗೆ ಭದ್ರತೆ ಒದಗಿಸುವ ಆದೇಶ ನೀಡಿದರು. ಅಷ್ಟಾಗಿಯೂ ಅವನಲ್ಲಿ ಜೆನ್ನಿಫರ್ ವಿರುದ್ಧ ದ್ವೇಷದ ದಳ್ಳುರಿ ಯಾವಮಟ್ಟಿಗೆ ಉರಿಯುತ್ತಿದ್ದೆಂದರೆ, ಸಮಯ ಸಾಧಿಸಿ ಅವಳನ್ನು ಕೊಂದೇಬಿಟ್ಟ,’ ಎಂದು ರೆಸೆಂಡೆ ಹೇಳಿದ್ದಾರೆ.

ಅವರಿಬ್ಬರ ನಡುವಿನ ಸಂಬಂಧ ಕೊನೆಗೊಳ್ಳುವ ಹಂತಕ್ಕೆ ಬಂದಾಗ ತನ್ನ ಮಗಳಿಗೆ ಅಲೆಸ್ಸಾಂಡ್ರೆ ಬಗ್ಗೆ ವಿಪರೀತ ಭಯ ಹುಟ್ಟಿಕೊಳ್ಳಲಾರಂಭಿಸಿತ್ತು ಎಂದು ಜೆನ್ನಿಫರ್ ತಾಯಿ ಡೆಬೋರಾ ಕ್ರಿಸ್ಟಿನಾ ವಿಕ್ಟರ್ ಸ್ಯಾಂಟೋಸ್ ಹೇಳಿದ್ದಾರೆ.

‘ಅವರ ಸಂಬಂಧ ಶುರುವಾದ ಆರಂಭಿಕ ದಿನಗಳಲ್ಲಿ, ಅವನು ಚೆನ್ನಾಗೇ ಇದ್ದ. ಆದರೆ ನಂತರದ ದಿನಗಳಲ್ಲಿ ಅವಳೊಂದಿಗೆ ಮತ್ತು ನಮ್ಮೆಲ್ಲರೊಂದಿಗೆ ಅವನು ಒರಟಾಗಿ ವರ್ತಿಸಲಾರಂಭಿಸಿದ್ದ ಮತ್ತು ಹಿಂಸಾ ಪ್ರವೃತ್ತಿ ಪ್ರದರ್ಶಿಸಲಾರಂಭಿಸಿದ್ದ,’ ಎಂದು ಸ್ಯಾಂಟೋಸ್ ಹೇಳಿದ್ದಾರೆ.

‘ನನ್ನ ಮಗಳ ಮೇಲೆ ದೈಹಿಕ ಹಲ್ಲೆ ಮಾಡುತ್ತಿದ್ದರಿಂದ ಅವಳು ವಿಪರೀತ ಹೆದರುತ್ತಿದ್ದಳು. ಅದಕ್ಕಾಗಿಯೇ ಸಂಬಂಧವನ್ನು ಕೊನೆಗೊಳಿಸುವ ನಿರ್ಧಾರಕ್ಕೆ ಬಂದಳು.’

‘ಅವಳಿಗೆ ಬದುಕು ಬದುಕಾಗಿರಲಿಲ್ಲ ಅದೊಂದು ದುಸ್ವಪ್ನವಾಗಿತ್ತು,’ ಅಂತ ಅವರು ಹೇಳಿದ್ದಾರೆ.

ತಮ್ಮ ಮಗಳು ಬೇರ್ಪಡಲು ಬಯಸುವುದಾಗಿ ಅಲೆಸ್ಸಾಂಡ್ರೆಗೆ ತಿಳಿಸಿದ ನಂತರ ಅವನು ಅವಳನ್ನು ತನ್ನ ಮನೆಯಲ್ಲಿ ಕೂಡಿಹಾಕಿ ಮನೆಗೆ ಬೀಗ ಜಡಿಯುತ್ತಿದ್ದ ಎಂದು ಜೆನ್ನಿಫರ್ ಅಮ್ಮ ಹೇಳಿಕೊಂಡಿದ್ದಾರೆ.

ಬೇರ್ಪಡುವ ವಿಷಯವನ್ನು ಜೆನ್ನಿಫರ್ ಹೇಳಿದಾಗ ಅಲೆಸ್ಸಾಂಡ್ರೆ ಅವಳ ಎದೆಗೆ ಬಂದೂಕನ್ನಿಟ್ಟು ಹೆದರಿಸಿದ್ದ ಮತ್ತು ತನ್ನನ್ನೂ ಕೊಂದು ಬಿಡುವ ಬೆದರಿಕೆ ಹಾಕಿದ್ದ ಎಂದು ಸ್ಯಾಂಟೋಸ್ ಹೇಳಿದ್ದಾರೆ.

‘ಸುಮಾರು ಮೂರು ತಿಂಗಳ ಹಿಂದೆ ಅವನಿಂದ ಬೇರ್ಪಟ್ಟರೂ ನನ್ನ ಮಗಳು ಪ್ರತಿದಿನ ಭಯದ ನೆರಳಲ್ಲಿ ಬದುಕುತ್ತಿದ್ದಳು,’ ಎಂದು ಅವರು ಹೇಳಿದ್ದಾರೆ.

ಮಗಳು ಈಗ ಸತ್ತಿರುವುದರಿಂದ ತಮ್ಮ 9-ತಿಂಗಳು ಪ್ರಾಯದ ಮೊಮ್ಮಗಳ ಕಸ್ಟಡಿ ಪಡೆಯುವ ಪ್ರಯತ್ನ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.

ಸ್ಯಾಂಟೋಸ್ ಮೊರೀರಾ ಕುಟುಂಬದ ಇತರ ಸದಸ್ಯರು, ನೆಂಟರು ಹಾಗೂ ಆಪ್ತರು ಕುಟುಂಬಕ್ಕೆ ಬೆಂಬಲ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ. ಜೆನ್ನಿಫರ್ ಕಸಿನ್ ಕ್ಲೇಟನ್ ಮಾರ್ಟಿನ್ ನನ್ನು ಸಹ ಅಲೆಸ್ಸಾಂಡ್ರೆ ಕೊಲ್ಲುವ ಬೆದರಿಕೆ ಹಾಕಿದ್ದಾನಂತೆ.

‘ಅವಳು ಕೇವಲ ನನ್ನ ಕಸಿನ್ ಆಗಿರಲಿಲ್ಲ, ನನ್ನ ಒಡಹುಟ್ಟಿದ ತಂಗಿಯಂತಿದ್ದಳು. ಅವಳಿಗೆ ನ್ಯಾಯ ಸಿಗುವಂತಾಗಲು ನಾವು ಖಂಡಿತ ಹೋರಾಡುತ್ತೇವೆ. ಬಹಳ ಅಮಾಯಕವಾಗಿ ಅವಳು ತನ್ನ ಪ್ರಾಣ ಕಳೆದುಕೊಂಡಳು. ಅವಳ ಸಾವಿನಿಂದಾಗಿ ಎರಡು ಚಿಕ್ಕ ಚಿಕ್ಕ ಮಕ್ಕಳು ಅನಾಥವಾಗಿವೆ ಅಂತ ಕ್ಲೇಟನ್ ಮಾರ್ಟಿನ್ ಹೇಳಿದ್ದಾನೆ.

ಪ್ರಕರಣದ ತನಿಖೆ ಜಾರಿಯಲ್ಲಿದೆ.

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ