ಕೇರಳ: ಹಿಂಬಾಲಿಸಿದಕ್ಕೆ ತನ್ನ ಮೇಲೆ ದೂರು ನೀಡಿದ ಹುಡುಗಿಯ ಮನೆಯೊಳಗೆ ಹಾವು ಎಸೆದ ವ್ಯಕ್ತಿ

|

Updated on: Aug 08, 2023 | 12:46 PM

ತನ್ನ ಮೇಲೆ ದೂರು ನೀಡಿದ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳಲು ಹುಡುಗಿಯ ಮನೆಯೊಳಗೆ ವಿಷಕಾರಿ ಹಾವೊಂದನ್ನು ಎಸೆದಿರುವ ಘಟನೆ ಕೇರಳದ ತಿರುವನಂತಪುರಂ ಜಿಲ್ಲೆಯ ಕಟ್ಟಕಡದಲ್ಲಿ ನಡೆದಿದೆ.

ಕೇರಳ: ಹಿಂಬಾಲಿಸಿದಕ್ಕೆ ತನ್ನ ಮೇಲೆ ದೂರು ನೀಡಿದ ಹುಡುಗಿಯ ಮನೆಯೊಳಗೆ ಹಾವು ಎಸೆದ ವ್ಯಕ್ತಿ
ಸಾಂದರ್ಭಿಕ ಚಿತ್ರ
Image Credit source: pexels
Follow us on

ತಿರುವನಂತಪುರಂ, ಆ.8: ಮಗಳನ್ನು ಹಿಂಬಾಲಿಸಿದಕ್ಕೆ ತನ್ನ ಮೇಲೆ ದೂರು ನೀಡಿದ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳಲು ಹುಡುಗಿಯ ಮನೆಯೊಳಗೆ ವಿಷಕಾರಿ ಹಾವೊಂದನ್ನು ಎಸೆದಿರುವ ಘಟನೆ ಕೇರಳದ (kerala) ತಿರುವನಂತಪುರಂ ಜಿಲ್ಲೆಯ ಕಟ್ಟಕಡದಲ್ಲಿ ನಡೆದಿದೆ. ಇದೀಗ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಹಾವು ಎಸೆದ ವ್ಯಕ್ತಿಯನ್ನು ಬಂಧಿಸಲಾಗಿದೆ. ರಾಜೇಂದ್ರನ್ ಎಂಬುವವರ ಮನೆಯೊಳಗೆ ವಿಷಕಾರಿ ಹಾವನ್ನು ಎಸೆದು ದ್ವೇಷ ತೀರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಕಿಚ್ಚು (30) ಎಂದು ಗುರುತಿಸಲಾಗಿದೆ.

ಪೊಲೀಸರ ವರದಿ ಪ್ರಕಾರ, ತಿರುವನಂತಪುರಂ ಜಿಲ್ಲೆಯ ಕಟ್ಟಕಡ ಮೂಲದ ರಾಜೇಂದ್ರನ್ ಎಂಬುವವರ ಮನೆಯೊಳಗೆ ಕಿಚ್ಚು ಎಂಬ ವ್ಯಕ್ತಿ ಹಾವನ್ನು ಎಸೆದಿದ್ದಾರೆ. ಈ ಹಿಂದೆ ರಾಜೇಂದ್ರನ್ ಅವರ ಮಗಳನ್ನು ಆತ ಪ್ರತಿದಿನ ಹಿಂಬಾಲಿಸುತ್ತಿದ್ದ ಎಂದು ಪೊಲೀಸ್​​ ಠಾಣೆಯಲ್ಲಿ ದೂರು ನೀಡಿದ್ದರು, ಈ ಕಾರಣಕ್ಕೆ ಆತ ರಾಜೇಂದ್ರನ್ ಮೇಲೆ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಭಾನುವಾರ ರಾತ್ರಿ ರಾಜೇಂದ್ರನ ಅವರು ಮಲಗಿರುವಾಗ ಅವರ ಕೈಗೆ ಏನೋ ಬಿದ್ದಂತಾಗಿದೆ. ಗಾಬರಿಗೊಂಡು ಎದ್ದು ನೋಡಿದಾಗ ನೆಲದ ಮೇಲೆ ವಿಷಕಾರಿ ಹಾವೊಂದು ಬಿದ್ದಿರುವುದನ್ನು ನೋಡಿ ತಕ್ಷಣ ರಾಜೇಂದ್ರನ್ ಅವರು ಮನೆಯ ಬಾಗಿಲ ಬಳಿ ನೋಡಿದಾಗ ಕಿಚ್ಚು ನಿಂತಿದ್ದಾನೆ. ರಾಜೇಂದ್ರನ್ ತನನ್ನು ನೋಡಿದ್ದಾರೆ ಎಂದು ಅರಿತು, ಆತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಕೇರಳದಲ್ಲಿ ಆರೋಪಿಯಿಂದ ಹಣ ಪಡೆದ ಆರೋಪ, ಬೆಂಗಳೂರಿನ ಇನ್ಸ್​ಪೆಕ್ಟರ್ ಸಹಿತ ನಾಲ್ವರು ಸಸ್ಪೆಂಡ್

ಹಾವನ್ನು ಕಂಡ ಮನೆಯವರು ಗಾಬರಿಗೊಂಡು ಅದನ್ನು ಕೊಂದು ಹಾಕಿದ್ದಾರೆ. ಹಾವಿನ ಮೃತದೇಹವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದು ವಿಷಕಾರಿಯೇ ಎಂದು ಪರಿಶೀಲಿಸಲಾಗುತ್ತಿದೆ. ವರದಿಯ ಪ್ರಕಾರ, ಕಿಚ್ಚು ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆತನಿಗೆ ಈ ಹಾವು ಹೇಗೆ ಸಿಕ್ಕಿದೆ ಎಂಬುದನ್ನು ಕೂಡ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್​​ ಅಧಿಕಾರಿಗಳು ತಿಳಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published On - 12:03 pm, Tue, 8 August 23