Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಜೈಲಿನಿಂದ ಹೊರಬಂದ ಬೆನ್ನಲ್ಲೇ ರೌಡಿಶೀಟರ್​ ಕೊಲೆ: ದುಷ್ಕರ್ಮಿಗಳು ಪರಾರಿ

Bengaluru News: ಇಂದು ಸಂಜೆ ಸೆಂಟ್ರಲ್ ಜೈಲಿನಿಂದ ರಿಲೀಸ್ ಆಗಿದ್ದ ರೌಡಿಶೀಟರ್​ ಬರ್ಬರ ಕೊಲೆ ಆಗಿರುವಂತಹ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿದ್ದಾಪುರ ಮಹೇಶ್ ಕೊಲೆಯಾದ ರೌಡಿಶೀಟರ್.

Crime News: ಜೈಲಿನಿಂದ ಹೊರಬಂದ ಬೆನ್ನಲ್ಲೇ ರೌಡಿಶೀಟರ್​ ಕೊಲೆ: ದುಷ್ಕರ್ಮಿಗಳು ಪರಾರಿ
ಮೃತ ರೌಡಿಶೀಟರ್
Follow us
Prajwal Kumar NY
| Updated By: ಗಂಗಾಧರ​ ಬ. ಸಾಬೋಜಿ

Updated on:Aug 04, 2023 | 11:27 PM

ಬೆಂಗಳೂರು, ಆಗಸ್ಟ್​ 04: ಇಂದು ಸಂಜೆ ಸೆಂಟ್ರಲ್ ಜೈಲಿನಿಂದ ರಿಲೀಸ್ ಆಗಿದ್ದ ರೌಡಿಶೀಟರ್ (rowdy sheeter)​ ಬರ್ಬರ ಕೊಲೆ ಆಗಿರುವಂತಹ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿದ್ದಾಪುರ ಮಹೇಶ್ ಕೊಲೆಯಾದ ರೌಡಿಶೀಟರ್. ವಿಲ್ಸನ್‌ಗಾರ್ಡನ್ ನಾಗ, ಸಿದ್ದಾಪುರ ಮಹೇಶ್ ಮಧ್ಯೆ ದ್ವೇಷವಿತ್ತು. 2020ರಲ್ಲಿ  ಜಯನಗರದಲ್ಲಿ ನಡೆದಿದ್ದ ಮದನ್ ಕೊಲೆ ಕೇಸ್‌ನಲ್ಲಿ ಭಾಗಿಯಾಗಿ ಮಹೇಶ್​ ಜೈಲುಸೇರಿದ್ದ. ಆದರೆ ಇಂದು ಜೈಲಿನಿಂದ ಹೊರಬಂದ ಬೆನ್ನಲ್ಲೇ ಆತನನ್ನು ಹತ್ಯೆ ಮಾಡಿ, ದುಷ್ಕರ್ಮಿಗಳು ಪರಾರಿ ಆಗಿದ್ದಾರೆ.

ತಾಲೂಕು ಕಚೇರಿಯಲ್ಲಿ ಕೆಲಸ ನಿರ್ವಹಿಸ್ತಿದ್ದ ಮಹಿಳಾ ಸಿಬ್ಬಂದಿ ಆತ್ಮಹತ್ಯೆ

ತುಮಕೂರು: ತಾಲೂಕು ಕಚೇರಿಯಲ್ಲಿ ಕೆಲಸ ನಿರ್ವಹಿಸ್ತಿದ್ದ ಮಹಿಳಾ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ನಡೆದಿದೆ. ಮಧುಗಿರಿಯ ಮೇದರಹಟ್ಟಿ ನಿವಾಸಿ ಲತಾ ಮೋಹನ್(35) ಮೃತ ಮಹಿಳೆ. ತಾಲೂಕು ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿದ್ದರು.

ಇದನ್ನೂ ಓದಿ: ಕೇರಳದಲ್ಲಿ ಬೆಂಗಳೂರು ಪೊಲೀಸರನ್ನು ಆರೋಪಿಗಳೇ ಟ್ರ್ಯಾಪ್ ಮಾಡಿಸಿದ್ದು ಹೇಗೆ ಗೊತ್ತಾ?

ಕಚೇರಿಯಿಂದ ಮನೆಗೆ ಹೋದ ನಂತರ ನೇಣುಬಿಗಿದುಕೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಲತಾ ಕೊನೆಯುಸಿರೆಳೆದಿದ್ದಾರೆ. ಲತಾ ಮೋಹನ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ತಂದೆ-ಮಗನ ಜಗಳ ಬೀಡಿಸಲು ಹೋದ ಚಿಕ್ಕಪ್ಪನ ಕೊಲೆಗೆ ಯತ್ನ!

ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ನೇಣಿಗೆ ಶರಣು

ಧಾರವಾಡ: ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ನೇಣಿಗೆ ಶರಣಾಗಿರುವಂತಹ ಘಟನೆ ಧಾರವಾಡ ತಾಲೂಕಿನ‌ ಯರಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಮಂಜುನಾಥ ಅಮ್ಮಿನಬಾವಿ(34) ನೇಣಿಗೆ ಶರಣಾದ ವ್ಯಕ್ತಿ. ಮೃತ ಮಂಜುನಾಥ ಪಾರ್ಶ್ವವಾಯು ಪೀಡಿತನಾಗಿದ್ದ. ಮತ್ತೊಮ್ಮೆ ಪಾರ್ಶ್ವವಾಯು ಹೊಡೆಯುತ್ತೆಂದು ಭಯದಲ್ಲಿ ತನ್ನ ಕಾಯಿಲೆಯಿಂದ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿದ್ದಾರೆ. ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  

Published On - 10:43 pm, Fri, 4 August 23