ಪ್ರಿಯತಮನಿಂದ ಯುವತಿ ಮೇಲೆ ರಾಡ್​ನಿಂದ ಹಲ್ಲೆ; ಆರೋಪಿ ಬಂಧನ, ಕಾರಣ ಇಲ್ಲಿದೆ ನೋಡಿ

Bengaluru News: ಕ್ಷುಲ್ಲಕ ಕಾರಣಕ್ಕೆ ಪ್ರಿಯತಮನಿಂದ ಯುವತಿ ಮೇಲೆ ರಾಡ್​​ನಿಂದ ಹೊಡೆದು ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಮೈಕೋಲೇಔಟ್​ನಲ್ಲಿ ನಡೆದಿದೆ. ಟೆಕ್ಕಿ ಸ್ನೇಹ ಚಟರ್ಜಿ(26) ಹಲ್ಲೆಗೊಳಗಾದ ಯುವತಿ.

ಪ್ರಿಯತಮನಿಂದ ಯುವತಿ ಮೇಲೆ ರಾಡ್​ನಿಂದ ಹಲ್ಲೆ; ಆರೋಪಿ ಬಂಧನ, ಕಾರಣ ಇಲ್ಲಿದೆ ನೋಡಿ
ಪ್ರಾತಿನಿಧಿಕ ಚಿತ್ರ
Follow us
Jagadisha B
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 05, 2023 | 7:22 AM

ಬೆಂಗಳೂರು, ಆ.5: ಕ್ಷುಲ್ಲಕ ಕಾರಣಕ್ಕೆ ಪ್ರಿಯತಮನಿಂದ ಯುವತಿ ಮೇಲೆ ರಾಡ್​​ನಿಂದ ಹೊಡೆದು ಹಲ್ಲೆ ಮಾಡಿದ ಘಟನೆ ಬೆಂಗಳೂರಿನ(Bengaluru) ಮೈಕೋಲೇಔಟ್​ನಲ್ಲಿ ನಡೆದಿದೆ. ಟೆಕ್ಕಿ ಸ್ನೇಹ ಚಟರ್ಜಿ(26) ಹಲ್ಲೆಗೊಳಗಾದ ಯುವತಿ. ಟೆಕ್ಕಿಗಳಾಗಿದ್ದ ಆರೋಪಿ ಪ್ರಿಯತಮ ರವಿಕುಮಾರ್(28) ಹಾಗೂ ಸ್ನೇಹ ಇಬ್ಬರು ಇಂದಿರಾನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹೌದು, ಅದೇ ಕಂಪನಿಯಲ್ಲಿ ಸ್ನೇಹ ಇಂಟರ್ನ್​ಶಿಪ್​ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವೆ ಪರಿಚಯವಾಗಿ ಪರಸ್ಪರ ಪ್ರೀತಿಸಿದ್ದರು ಎನ್ನಲಾಗಿದೆ.

ಫೋನ್​​ ಕರೆ ಸ್ವೀಕರಿಸದ ಆರೋಪ, ಅನುಮಾನಗೊಂಡು ಹಲ್ಲೆ

ಇತ್ತೀಚೆಗೆ ಬೇರೆ ಕಂಪನಿಗೆ ಸೇರಿಕೊಂಡಿದ್ದ ಟೆಕ್ಕಿ ಸ್ನೇಹ, ರವಿಕುಮಾರ್ ಜೊತೆ ಅಂತರ ಕಾಯ್ದುಗೊಂಡಿದ್ದರು. ಈ ಹಿನ್ನಲೆ ರವಿಕುಮಾರ್​​ ಫೋನ್​​ ಕರೆಯನ್ನ ಸ್ನೇಹ ಸ್ವೀಕರಿಸದ ಕಾರಣ, ಅನುಮಾನಗೊಂಡು ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಹೌದು, ಮೈಕೋಲೇಔಟ್​​ನ ತನ್ನ ಪಿಜಿ ಬಳಿ ಆ.2ರ ಬುಧವಾರ ಮುಂಜಾನೆ 3.30ಕ್ಕೆ ಕರೆಸಿಕೊಂಡು ರಾಡ್​​ನಿಂದ ಸ್ನೇಹಳ ತಲೆಗೆ ಹೊಡೆದಿದ್ದಾನೆ. ಗಾಯಾಳು ಸ್ನೇಹಗೆ ನಿಮ್ಹಾನ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಪಿ ರವಿಕುಮಾರ್​​ನನ್ನು ಬಂಧಿಸಿ ಮೈಕೋಲೇಔಟ್ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.

ಇದನ್ನೂ ಓದಿ:ಮಂಗಳೂರಿನಲ್ಲಿ ಮುಂದುವರಿದ ನೈತಿಕ ಪೊಲೀಸ್​ಗಿರಿ; ಹಿಂದೂ ಯುವತಿಯನ್ನ ಮುಸ್ಲಿಂ ಯುವಕ ಆಟೋದಲ್ಲಿ ಕೂರಿಸಿಕೊಂಡು ಹೋಗ್ತಿದ್ದಾಗ ಹಲ್ಲೆ

ಬೀದರ್​ನ ಅರಣ್ಯ ಪ್ರದೇಶದಲ್ಲಿ ಚಿರತೆ ಸಂಚಾರ; ತಾಂಡಾ ನಿವಾಸಿಗಳಲ್ಲಿ ಆತಂಕ

ಬೀದರ್: ತಾಲೂಕಿನ ಹೊನ್ನಿಕೇರಿ ಅರಣ್ಯ ಪ್ರದೇಶದಲ್ಲಿ ಚಿರತೆ ಸಂಚರಿಸುತ್ತಿರುವುದು ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾಗಿದ್ದು, ಸುತ್ತಮುತ್ತಲಿನ ಗ್ರಾಮ ಮತ್ತು ತಾಂಡಾ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ. ಒಂದು ವಾರದ ಕ್ಯಾಮೆರಾ ಟ್ರ್ಯಾಪ್ ಚಿತ್ರಗಳನ್ನು ಪರಿಶೀಲಿಸಿದಾಗ ದೊಡ್ಡ ಚಿರತೆಯೊಂದು ಸಂಚರಿಸುತ್ತಿರುವುದು ದೃಢವಾಗಿದೆ. ಒಂದು ವರ್ಷದ ಹಿಂದೆ ತಾಲೂಕಿನ ಜನವಾಡಾ ಸಮೀಪದಲ್ಲಿ ಪಾಳು ಬಿದ್ದಿರುವ ನೀರು ಶುದ್ಧೀಕರಣ ಘಟಕದಲ್ಲಿ ಚಿರತೆ ಇರುವುದು ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮೊದಲು ಕಾಡು ಪ್ರಾಣಿಯೆಂದು ಊಹಿಸಲಾಗಿದ್ದು, ನಂತರ ಕ್ಯಾಮೆರಾ ಚಿತ್ರ ಮತ್ತು ಹೆಜ್ಜೆ ಗುರುತುಗಳಿಂದ ಮರಿ ಚಿರತೆ ಇರುವುದು ಖಚಿತವಾಗಿತ್ತು. ನಂತರ ಅರಣ್ಯ ಇಲಾಖೆಯ ಸತತ ಕಾರ್ಯಾಚರಣೆ ಬಳಿಕವೂ ಕೈಗೆ ಸಿಗದೆ ನಾಪತ್ತೆಯಾಗಿತ್ತು. ಇದೀಗ ಅದರ ಬಗ್ಗೆ ಆತಂಕ ಬೇಡ, ಎಚ್ಚರಿಕೆ ವಹಿಸಬೇಕು. ಕಾಡಿನಲ್ಲಿ ಸೌದೆ ತರಲು ಯಾರು ಹೋಗಬಾರದು, ರಾತ್ರಿ ಸಮಯದಲ್ಲಿ ಅನಗತ್ಯವಾಗಿದೆ ಸಂಚರಿಸಬಾರದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡುತ್ತಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ