Bengaluru News: ಮಾತನಾಡಿಸುವ ನೆಪದಲ್ಲಿ ವಕೀಲನನ್ನು ಕಾರಿನಲ್ಲಿ ಕರೆದೊಯ್ದು ಹಲ್ಲೆ: ಮೂವರ ಬಂಧನ

ಬೆಂಗಳೂರಿನಲ್ಲಿ ಮಾತನಾಡಿಸುವ ನೆಪದಲ್ಲಿ ಲಾಯರ್​ನನ್ನು ಕಾರಿನಲ್ಲಿ ಕರೆದೊಯ್ದು​ ಹಲ್ಲೆ ಮಾಡಿದ ಘಟನೆ ಜುಲೈ 24ರಂದು ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮೂವರನ್ನು ವಶಕ್ಕೆ ಪಡೆಯಲಾಗಿದೆ.

Bengaluru News: ಮಾತನಾಡಿಸುವ ನೆಪದಲ್ಲಿ ವಕೀಲನನ್ನು ಕಾರಿನಲ್ಲಿ ಕರೆದೊಯ್ದು ಹಲ್ಲೆ: ಮೂವರ ಬಂಧನ
ಬಂಧಿತ ಆರೋಪಿಗಳು
Follow us
Jagadisha B
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 03, 2023 | 9:19 AM

ಬೆಂಗಳೂರು, ಆ.3: ಮಾತನಾಡಿಸುವ ನೆಪದಲ್ಲಿ ಲಾಯರ್(Lawyer)​ ಅವರನ್ನು ಕಾರಿನಲ್ಲಿ ಕರೆದೊಯ್ದು ಅವರ ಮೇಲೆ ಹಲ್ಲೆ ಮಾಡಿದ ಘಟನೆ ಜುಲೈ 24ರಂದು ಬೆಂಗಳೂರಿ(Bengaluru)ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಕೀಲ ಗಿರಿಧರ್ ಎಂಬುವವರನ್ನು ಕರೆದುಕೊಂಡು ಹೋಗಿ 8 ಜನರಿಗೆ ಬೇಲ್ ಕೊಡಿಸಬೇಕು ಜೊತೆಗೆ 5 ಲಕ್ಷ ಹಣ ತಂದುಕೊಡುವಂತೆ ಹೇಳಿ, ಬಟ್ಟೆ ಬಿಚ್ಚಿಸಿ ಒಳ ಉಡುಪಿನಲ್ಲಿ ರಾತ್ರಿಯಿಡೀ ಕೂರಿಸಿ ಹಲ್ಲೆ ಮಾಡಿದ ಆರೋಪ ಕೇಳಿಬಂದಿತ್ತು. ಇದೀಗ ವಕೀಲರ ದೂರಿನನ್ವಯ ರೌಡಿಶೀಟರ್ ರಾಜೇಶ್ ಅಲಿಯಾಸ್​ ಕೋಳಿ ರಾಜೇಶ್, ಹರ್ಷಿತ್ ಅಲಿಯಾಸ್​ ಆ್ಯಪಲ್ ಜಾನ್ ಮತ್ತು ಭರತ್ ಸೇರಿ ಮೂವರನ್ನು ಬಂಧಿಸಲಾಗಿದೆ.

ಘಟನೆ ವಿವರ

ಜುಲೈ 24 ರಂದು ಲಾಯರ್​ ಗಿರಿಧರ್ ಎಂಬುವವರನ್ನು ಮಾತನಾಡುವ ನೆಪದಲ್ಲಿ ಕತ್ರಿಗುಪ್ಪೆಯ ಆರೋಪಿ ರೌಡಿಶೀಟರ್ ರಾಜೇಶ್ ಮನೆಗೆ ವಕೀಲನ ಕಾರಿನಲ್ಲಿಯೇ ಆರೋಪಿ ಹರ್ಷಿತ್ ಅಲಿಯಾಸ್ ಆ್ಯಪಲ್ ಮತ್ತು ಗ್ಯಾಂಗ್ ಕರೆದೊಯ್ದಿದ್ದರು. ಬಳಿಕ ಜೈಲಿನಲ್ಲಿರುವ ನಮ್ಮ ಕಡೆಯ 8 ಜನರಿಗೆ ಜಾಮೀನು ಕೊಡಿಸುವಂತೆ ಬೆದರಿಕೆ ಹಾಕಿ ಬೆಳಗಿನ ಜಾವದವರೆಗೂ ಹಲ್ಲೆ ನಡೆಸಿ, 10 ಸಾವಿರ ಹಣ ಕಿತ್ತುಕೊಂಡಿದ್ದರು. ಇದನ್ನು ಪೊಲೀಸರಿಗೆ ಹೇಳಿದರೆ, ಅಥವಾ ಹಣ ಕೊಡದಿದ್ದರೆ ಕೊಲೆ ಬೆದರಿಕೆಯನ್ನು ಹಾಕಿದ್ದರಂತೆ. ಬಳಿಕ ವಕೀಲರು ಘಟನೆ ಕುರಿತು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅವರ ದೂರಿನನ್ವಯ ಇದೀಗ ಕೋಳಿ ರಾಜೇಶ್ ಸೇರಿ ಮೂವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ:ಬೆಂಗಳೂರು: ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ್ದಕ್ಕೆ ಸಹಪಾಠಿಗಳಿಂದ ಹಲ್ಲೆ; ದೂರು ದಾಖಲು

ಮಾನಸಿಕ ಅಸ್ವಸ್ಥ ಯುವಕ ಮೊಬೈಲ್ ಟವರ್ ಮೇಲೆ ನಿಂತು ಹುಚ್ಚಾಟ

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ಸತೀಶ್ ಎಂಬ ಯುವಕ ಕೆಲ ದಿನಗಳ ಹಿಂದೆ ನಗ್ನವಾಗಿ ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿ ಮಾಡಿದ್ದ. ಮಾನಸಿಕ ಅಸ್ವಸ್ಥನಾಗಿದ್ದ ಸತೀಶ್​ನನ್ನು ಆಗ ಕೆಳಗಿಳಿಸಲು ಹರ ಸಾಹಸ ಪಡಲಾಗಿತ್ತು. ಆಲಮೇಲ ಪೊಲೀಸರು ಹಾಗೂ ಗ್ರಾಮದ ಜನರು ಸತೀಶ್​ನನ್ನು ಅಂದು ಟವರ್ ಮೇಲಿಂದ ಕೆಳಗೆ ಇಳಿಸಲು ಸರ್ಕ​ಸ್​ ಮಾಡಿದ್ದರು. ಕೊನೆಗೆ ಮದ್ಯ ಹಾಗೂ ಗುಟ್ಕಾ ಕೊಡೋದಾಗಿ ಆಮೀಷವೊಡ್ಡಿ ಆತನನ್ನು ಕೆಳಗಿಸೋವಲ್ಲಿ ಯಶಸ್ವಿಯಾಗಿದ್ದರು. ನಿನ್ನೆ ಅದೇ ಮಾನಸಿಕ ಅಸ್ವಸ್ಥ ಯುವಕ ಸತೀಶ ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದ ಮೊಬೈಲ್ ಟವರ್ ಏರಿ ಮತ್ತೊಮ್ಮೆ ಆತಂಕ ಹುಟ್ಟಿಸಿದ್ದಾನೆ. ಬಳಿಕ ಸ್ಥಳಕ್ಕೆ ಆಲಮೇಲ ಪೊಲೀಸರು ಆಗಮಿಸಿದ್ದು, ಆತನನ್ನು ಕೆಳಗಿಳಿಸಲು ಮುಂದಾಗಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ