Gruha Jyothi Scheme: ಫ್ರೀ ವಿದ್ಯುತ್ ಬಿಲ್ ನಿರೀಕ್ಷೆಯಲ್ಲಿದ್ದವರಿಗೆ ಶಾಕ್!
ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಫ್ರೀ ವಿದ್ಯುತ್ ಬಿಲ್ ನಿರೀಕ್ಷೆಯಲ್ಲಿದ್ದವರಿಗೆ ಬೆಸ್ಕಾಂ ಶಾಕ್ ಕೊಟ್ಟಿದೆ. ಇದರಿಂದ ಯೋಜನೆಗೆ ಅಪ್ಲೈ ಮಾಡಿದ್ದರೂ ಕೆಲವರಿಗೆ ಬಿಲ್ ಬಂದಿದೆ. ಇದರಿಂದ ಕೆಲ ಗ್ರಾಹಕರು ಹೊಸ ವರಸೆ ತೆಗೆದಿದ್ದಾರೆ.
ಬೆಂಗಳೂರು, (ಆಗಸ್ಟ್ 03): ಕರ್ನಾಟಕದಲ್ಲಿ (Karnataka) ಗೃಹ ಜ್ಯೋತಿ ಯೋಜನೆ (Gruha Jyothi Scheme) ಮೊನ್ನೆಯಷ್ಟೇ ಅನುಷ್ಠಾನಗೊಂಡಿದ್ದು, ಬಹುತೇಕ ಫಲಾನುಭವಿಗಳು ಫ್ರೀ ಬಿಲ್ ನಿರೀಕ್ಷೆಯಲ್ಲಿದ್ದರು. ಆದ್ರೆ ಕೆಲವರಿಗೆ ಮಾತ್ರ ಬೆಸ್ಕಾಂ ಸಿಬ್ಬಂದಿ ಬಿಲ್ ಕೈಗಿಟ್ಟಿದ್ದು ಶಾಕ್ ಆಗಿದ್ದಾರೆ. ಗೃಹ ಜ್ಯೋತಿ ಯೋಜನೆಗೆ ಅಪ್ಲೈ ಮಾಡಿದಾಗಿನಿಂದ ಕೆಲವು ಫಲಾನುಭವಿಗಳು ಉಚಿತ ಕರೆಂಟ್ ಅಂತ ಹೆಚ್ಚಾಗಿ ವಿದ್ಯುತ್ ಬಳಕೆ ಮಾಡಿದ್ದು, ಜುಲೈ ತಿಂಗಳ ಬಿಲ್ ಶೂನ್ಯ ಅಂದವರಿಗೆ 200 ಯೂನಿಟ್ ಹೆಚ್ಚುವರಿ ಬಿಲ್ ಬೆಸ್ಕಾಂ ಸಿಬ್ಬಂದಿ ಕೈಗಿಟ್ಟಿದ್ದಾರೆ. ಸರ್ಕಾರದ 200 ಯೂನಿಟ್ ಗಿಂತ ಹೆಚ್ಚಾಗಿ ಯೂನಿಟ್ ಬಳಕೆ ಹಿನ್ನಲೆ ಬಿಲ್ ನೀಡಿದ್ದು, ಈಗ ಫಲಾನುಭವಿಗಳು ಮಾತ್ರ ನಾವು ಅಷ್ಟು ಬಳಸೇ ಇಲ್ಲ ಮೀಟರ್ ಸರಿ ಇಲ್ಲ ಎಂದು ಹೊಸ ವರಸೆ ಶುರುಮಾಡಿಕೊಂಡಿದ್ದಾರಂತೆ.
ಇದನ್ನೂ ಓದಿ: ಗೃಹ ಜ್ಯೋತಿ ಯೋಜನೆಯಡಿ ಶೂನ್ಯ ವಿದ್ಯುತ್ ಬಿಲ್ ಪಡೆಯಲು ನೀವೂ ಅರ್ಹರೇ? ತಿಳಿಯುವ ವಿಧಾನ ಇಲ್ಲಿದೆ
ಮೀಟರ್ ಸರಿ ಇಲ್ಲ ಅಂತಿರೋ ಜನ!
ಕೆಲ ಫಲಾನುಭವಿಗಳು ನಮ್ಮ ಮೀಟರ್ ಸರಿ ಇಲ್ಲ. ಹೀಗಾಗಿ, ನಮಗೆ 200 ಯೂನಿಟ್ಗಿಂತ ಜಾಸ್ತಿ ಬಿಲ್ ಬಂದಿದೆ ಅಂತಿದ್ದಾರೆ. ಸರ್ಕಾರದ 200 ಗ್ಯಾರಂಟಿಗಿಂತ ಅಧಿಕ ಕರೆಂಟ್ ಬಳಕೆ ಮಾಡಿಕೊಂಡು ನಮಗೆ ಗೃಹ ಜ್ಯೋತಿ ಯೋಜನೆ ಸಿಕ್ಕಿಲ್ಲ.. ಜಿರೊ ಬಿಲ್ ಬದಲಾಗಿ ನಮಗೆ ಬಿಲ್ ಬಂದಿದೆ ಎಂದು ಕೆಲವು ಗ್ರಾಹಕರು ಹೊಸ ವರಸೆ ಶುರು ಮಾಡಿದ್ದಾರೆ. ಸರ್ಕಾರ ಗೃಹ ಜ್ಯೋತಿ ಸ್ಕೀಂನಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಸರಾಸರಿಯ ಮಾನದಂಡ ಫಿಕ್ಸ್ ಮಾಡಿದೆ. ಸರಾಸರಿ ಬಳಕೆಗೆ ಶೇ.10 ಪರ್ಸೆಂಟ್ ಹೆಚ್ಚುವರಿಗೆ ಜಿರೊ ಬಿಲ್ ನೀಡುತ್ತಿದೆ.
ಯೂನಿಟ್ ಗೆ 7 ರೂನಂತೆ ಚಾರ್ಚ್
ಸರಾಸರಿಗಿಂತ ಹೆಚ್ಚು ಬಳಕೆದಾರರಿಗೆ ಯೂನಿಟ್ ಗೆ 7 ರೂನಂತೆ ದರ ಚಾರ್ಚ್ ಮಾಡುತ್ತಿದೆ. ಆದ್ರೆ, 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿಕೊಳ್ಳುವವರಿಗೆ ಸಂಪೂರ್ಣ ಬಿಲ್ ನೀಡಲಾಗುತ್ತಿದೆ. ಆದ್ರೆ ಕೆಲವು ಗ್ರಾಹಕರು ಉಚಿತ್ ವಿದ್ಯುತ್ ಬೆನ್ನಲೆ ಕಳೆದ ತಿಂಗಳು ಎರಾಬಿರಿ ವಿದ್ಯುತ್ ಬಳಕೆ ಮಾಡಿಕೊಂಡಿದ್ದು 200 ಯೂನಿಟ್ ಕ್ರಾಸ್ ಮಾಡಿದ್ದಾರೆ. ಸರಾಸರಿ ಟಾರ್ಗೆಟ್ ದಾಟಿ 50 ರಿಂದ 70 ಯೂನಿಟ್ ಹೆಚ್ಚಾಗಿ ಬಳಸಿಕೊಂಡಿದ್ದಾರೆ. ಈಗ ಬಿಲ್ ಬರುತ್ತಿದ್ದಂತೆ ಗೃಹ ಜ್ಯೋತಿ ಉಚಿತ ಸ್ಕೀಂ ಸಿಕ್ಕಿಲ್ಲ ನಾವು ವಿದ್ಯುತ್ ಬಳಸೇ ಇಲ್ಲ. ನಮಗೆ ಸಂಪೂರ್ಣ 200 ಯೂನಿಟ್ ಬಿಲ್ ಬಂದಿದೆ ಅಂತಿದ್ದಾರಂತೆ.
ಇನ್ನು ಯೋಜನೆಯ ನೋಂದಣಿಯನ್ನು ಜುಲೈ 1 ರಂದು ಪ್ರಾರಂಭಿಸಲಾಗಿದ್ದು, ಜುಲೈ 27 ರವರೆಗೆ ನೋಂದಾಯಿಸಿಕೊಂಡವರು ಜುಲೈ ತಿಂಗಳಲ್ಲಿ ಸರಾಸರಿ ಮಿತಿಯ ಒಳಗೆ ವಿದ್ಯುತ್ ಬಳಸಿದ್ದರೆ ಅವರಿಗೆ ‘ಶೂನ್ಯ’ ಬಿಲ್ ಬರಲಿದೆ. ಜುಲೈ 27ರ ನಂತರ ನೋಂದಾಯಿಸಿಕೊಂಡವರನ್ನು ಆಗಸ್ಟ್ ಬಿಲ್ಲಿಂಗ್ಗೆ ಪರಿಗಣಿಸಲಾಗುತ್ತದೆ ಎಂದು ಸ್ವತಃ ಇಂಧನ ಸಚಿವ ಕೆಜೆ ಜಾರ್ಜ್ ಸ್ಪಷ್ಟನೆ ಕೊಟ್ಟಿದ್ದಾರೆ.
ಇನ್ನಷ್ಟು ಕರ್ನಾಟಕ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ