ಪೊಲೀಸ್ ಇಲಾಖೆ ಎರವಲು ಸೇವೆ ಮೂರು ವರ್ಷಕ್ಕೆ ಸೀಮಿತ: ಅಲೋಕ್ ಮೋಹನ್ ಆದೇಶ
ಪೊಲೀಸ್ ಇಲಾಖೆ ಎರವಲು ಸೇವೆಯನ್ನು ಮೂರು ವರ್ಷಕ್ಕೆ ಸೀಮಿತಗೊಳಿಸಿ ಪೊಲೀಸ್ ಮಹಾನಿರ್ದೇಶ ಅಲೋಕ್ ಮೋಹನ್ ಆದೇಶಿಸಿದ್ದಾರೆ. ವಿಶೇಷ ಕಾರಣ ಅಥವಾ ಸಂದರ್ಭದಲ್ಲಿ ಡಿಜಿ ಐಜಿಪಿ ಕಚೇರಿ ಆದೇಶದ ಮೇರೆಗೆ ಗರಿಷ್ಠ 5 ವರ್ಷದವರೆಗೆ ವಿಸ್ತರಣೆ ಮಾಡಲಾಗುತ್ತದೆ.
ಬೆಂಗಳೂರು, ಆಗಸ್ಟ್ 4: ಪಿಎಸ್ಐ (PSI) ಮತ್ತು ಸಿಬ್ಬಂದಿ ಎರವಲು ಸೇವೆಯನ್ನು ಮೂರು ವರ್ಷಕ್ಕೆ ಸೀಮಿತಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ (Alok Mohan) ಆದೇಶ ಹೊರಡಿಸಿದ್ದಾರೆ. ಮೂರು ವರ್ಷ ಮುಗಿದ ಬಳಿಕ ಮಾತೃ ಘಟಕಕ್ಕೆ ವರ್ಗಾವಣೆ ಮಾಡಲಾಗುತ್ತದೆ.
ವಿಶೇಷ ಕಾರಣ ಅಥವಾ ಸಂದರ್ಭದಲ್ಲಿ ಡಿಜಿ ಐಜಿಪಿ ಕಚೇರಿ ಆದೇಶದ ಮೇರೆಗೆ ಗರಿಷ್ಠ 5 ವರ್ಷದವರೆಗೆ ವಿಸ್ತರಣೆ ಮಾಡಲಾಗುತ್ತದೆ. ಮಾತೃ ಘಟಕದಲ್ಲಿ ಕನಿಷ್ಠ ಎರಡು ವರ್ಷ ಕೂಲ್ ಪಿರಿಯೆಡ್ ಪೂರೈಸಬೇಕು. ಕೂಲ್ ಪಿರಿಯೆಡ್ ಪೂರೈಸದೇ ಮತ್ತೆ ಎರವಲು ಸೇವೆ ನೀಡಲು ನಿರ್ಬಂಧ ವಿಧಿಸಲಾಗಿದೆ.
ಇದನ್ನೂ ಓದಿ: PSI ನೇಮಕಾತಿ ಅಕ್ರಮ ಪ್ರಕರಣ: ಮರು ಪರೀಕ್ಷೆಯೇ ಸೂಕ್ತ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್
ಗುಪ್ತವಾರ್ತೆ, ಸಿಐಡಿ, ಅರಣ್ಯ ಘಟಕ, ಲೋಕಾಯುಕ್ತ, ಕೆಪಿಟಿಸಿಎಲ್, ಬಿಡಿಎ, ಬಿಎಂಟಿಎಫ್, ಹೈಕೋರ್ಟ್, ಕೆಎಟಿ, ಸಿಎಟಿ, ಡಿಸಿಆರ್‌ಇ ಸೇರಿ ಇತರ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುವ ಪಿಎಸ್‌ಐ ಮತ್ತು ಕೆಳ ದರ್ಜೆ ಸಿಬ್ಬಂದಿಗೆ ಈ ಆದೇಶ ಅನ್ವಯವಾಗಲಿದೆ.
ಅವಧಿ ಮೀರಿ ಮುಂದುವರಿಯುವುದು ಆಡಳಿತಾತ್ಮಕ ದೃಷ್ಟಿಯಿಂದ ಸೂಕ್ತವಲ್ಲದ ಹಿನ್ನೆಲೆ ವಿಶೇಷ ಘಟಕದಲ್ಲಿ 3 ವರ್ಷ ಅವಧಿ ಪೂರೈಸಿದ ಎಸ್‌ಐ, ಸಿಬ್ಬಂದಿ ಮಾರ್ಗಸೂಚಿ ಪಾಲನೆ ಮಾಡಬೇಕೆಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಎಲ್ಲಾ ಜಿಲ್ಲೆಯ ಎಸ್‌ಪಿ ಮತ್ತು ಪೊಲೀಸ್ ಆಯುಕ್ತರು ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ