ಸ್ನೇಹಿತನಿಂದ ಅಕ್ರಮ ಸಂಬಂಧದ ಬ್ಲ್ಯಾಕ್ ಮೇಲ್: 1 ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಯುವಕ ಬಲಿ
ಸ್ನೇಹಿತ ಅಂದರೆ ಸಂಬಂಧಿಗಿಂತ ಹೆಚ್ಚು. ಸಂಬಂಧಿಕರ ಬಳಿ ಮಾತ್ರವಲ್ಲದೇ ಅಪ್ಪ-ಅಮ್ಮನ ಜೊತೆ ಹಂಚಿಕೊಳ್ಳದ ಕೆಲ ವಿವಚಾರಗಳನ್ನು ಸ್ನೇಹಿತರ ಬಳಿ ಹೇಳಿಕೊಳ್ಳುತ್ತಾರೆ. ಆದ್ರೆ, ಇಲ್ಲೋರ್ವ ದ್ರೋಹಿ ಅದನ್ನೇ ಬಂಡವಾಳ ಮಾಡಿಕೊಂಡು ಸ್ನೇಹಿತ ಪರ್ಸನಲ್ ವಿಚಾರವನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಲಕ್ಷ ಲಕ್ಷಣ ಹಣ ಪೀಕಿದ್ದಾನೆ. ಕೊನೆಗೆ ಗೆಳೆಯನ ಜೀವವನ್ನೇ ಬಲಿ ಪಡೆದುಕೊಂಡಿದ್ದಾನೆ.
ಚಾಮರಾಜನಗರ, (ನವೆಂಬರ್ 30): ಒಂದು ತಿಂಗಳ ಹಿಂದೆ ಅಷ್ಟೇ ಮದುವೆಯಾಗಿದ್ದ ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದ ಕೊಳ್ಳೇಗಾಲ ತಾಲೂಕು ಕಜ್ಜಿಹುಂಡಿ ಗ್ರಾಮದಲ್ಲಿ ನಡೆದಿದೆ. ಸಂತೋಷ್ (28) ಆತ್ಮಹತ್ಯೆಗೆ ಶರಣಾದ ಯುವಕ. ಪರಸ್ತ್ರೀ ಸಂಬಂಧ ಬಹಿರಂಗಪಡಿಸುತ್ತೇನೆಂದು ಮೃತ ಸ್ನೇಹಿತನೋರ್ವ ಹಣಕ್ಕಾಗಿ ಬ್ಲ್ಕ್ಯಾಕ್ ಮೇಲ್ ಮಾಡಿದ್ದು, ಇದರಿಂದ ಮನನೊಂದು ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಸ್ನೇಹಿತ ರವಿ ಎನ್ನುವಾತ ಪರಸ್ತ್ರೀ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿರುವ ಬಗ್ಗೆ ಎಲ್ಲರಿಗೂ ತಿಳಿಸುತ್ತೇನೆಂದು ಹಣಕ್ಕಾಗಿ ಸಂತೋಷ್ಗೆ ಬ್ಲ್ಯಾಕ್‌ಮೇಲ್ ಮಾಡಿದ್ದ. ಅಲ್ಲದೇ ಬೆದರಿಸಿ 2 ಲಕ್ಷ ರೂ. ವಸೂಲಿ ಮಾಡಿದ್ದ. ಆದರೂ ಸಮ್ಮನಾಗದ ರವಿ, ಇನ್ನಷ್ಟು ಹಣ ಬೇಕೆಂದು ಮತ್ತೆ ಮತ್ತೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಇದರಿಂದ ಮನನೊಂದು ಸಂತೋಷ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ