ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಿದ ಪಿಯುಸಿ ವಿದ್ಯಾರ್ಥಿಯ ಬೆರಳು ಕತ್ತರಿಸಿದ ಹಳೆ ವಿದ್ಯಾರ್ಥಿ

| Updated By: Rakesh Nayak Manchi

Updated on: Nov 12, 2023 | 5:57 PM

ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಿದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಆತನ ಬೆರಳನ್ನೇ ಕತ್ತರಿಸಿದ ಘಟನೆ ದೆಹಲಿಯ ದಕ್ಷಿಣ ದ್ವಾರಕಾದಲ್ಲಿ ನಡೆದಿದೆ. ಆರೋಪಿಗಳು ಶಾಲೆಯ ಹೊರಗೆ ಭೇಟಿಯಾಗಿ ಉದ್ಯಾನವನಕ್ಕೆ ಕರೆದೊಯ್ದ ಕೃತ್ಯ ಎಸಗಿದ್ದಾಗಿ ಹಲ್ಲೆಗೊಳಗಾದ ವಿದ್ಯಾರ್ಥಿ ಪೊಲೀಸರಿಗೆ ತಿಳಿಸಿದ್ದು, ಎಫ್​ಐಆರ್ ದಾಖಲಾಗಿದೆ.

ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಿದ ಪಿಯುಸಿ ವಿದ್ಯಾರ್ಥಿಯ ಬೆರಳು ಕತ್ತರಿಸಿದ ಹಳೆ ವಿದ್ಯಾರ್ಥಿ
ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಿದ ಪಿಯುಸಿ ವಿದ್ಯಾರ್ಥಿಯ ಬೆರಳು ಕತ್ತರಿಸಿದ ಹಳೆ ವಿದ್ಯಾರ್ಥಿ (ಸಾಂದರ್ಭಿಕ ಚಿತ್ರ)
Image Credit source: Pexels
Follow us on

ನವದೆಹಲಿ, ನ.12: ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಿದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಆತನ ಬೆರಳನ್ನೇ ಕತ್ತರಿಸಿದ ಘಟನೆ ದೆಹಲಿಯ (Delhi) ದಕ್ಷಿಣ ದ್ವಾರಕಾದಲ್ಲಿ ನಡೆದಿದೆ. ಆರೋಪಿಗಳು ಶಾಲೆಯ ಹೊರಗೆ ಭೇಟಿಯಾಗಿ ಉದ್ಯಾನವನಕ್ಕೆ ಕರೆದೊಯ್ದ ಕೃತ್ಯ ಎಸಗಿದ್ದಾಗಿ ಹಲ್ಲೆ ನಡೆಸಿದ್ದಾರೆ. ಆರೋಪಿಯು ಅದೇ ಶಾಲೆಯಲ್ಲಿ ಓದಿದ್ದು, ಈಗಾಗಲೇ ಪದವಿ ಮುಗಿಸಿದ್ದ.

ಅಕ್ಟೋಬರ್ 21 ರಂದು ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಯು ಭಯಗೊಂಡು ತನ್ನ ಪೋಷಕರಿಗೆ ವಿಷಯ ಮುಚ್ಚಿಟ್ಟು ಮೋಟಾರ್‌ಸೈಕಲ್​ನ ಚೈನ್​ಗೆ ಸಿಲುಕಿ ಚೈನ್‌ನಿಂದ ಕಟ್ ಆಗಿದ್ದಾಗಿ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಖಮ್ಮಂ: ಅಮೆರಿಕದಲ್ಲಿ ಚೂರಿ ಇರಿತಕ್ಕೊಳಗಾಗಿದ್ದ ಎಂಎಸ್ ತೆಲುಗು ವಿದ್ಯಾರ್ಥಿ ಸಾವು

ಅದಾಗ್ಯೂ, ಶುಕ್ರವಾರದಂದು ವಿದ್ಯಾರ್ಥಿಯು ತನ್ನ ಪೋಷಕರಿಗೆ ಘಟನೆ ಬಗ್ಗೆ ಬಾಯಿಬಿಟ್ಟಿದ್ದು, ಕೂಡಲೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ಯೂಷನ್ ತರಗತಿಯಲ್ಲಿ ವಿದ್ಯಾರ್ಥಿನಿಯೊಬ್ಬಳೊಂದಿಗೆ ಸ್ನೇಹ ಹೊಂದಿದ್ದನ್ನು ವಿರೋಧಿಸಿ ವಿದ್ಯಾರ್ಥಿಯ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಬೆರಳು ಕಟ್ ಮಾಡಿದ್ದಾರೆ. ಶಾಲೆಯ ಹೊರಗೆ ಭೇಟಿಯಾಗಿ ಉದ್ಯಾನವನಕ್ಕೆ ಕರೆದೊಯ್ದ ಕೃತ್ಯ ಎಸಗಿದ್ದಾನೆ ಎಂದು ವಿದ್ಯಾರ್ಥಿಯು ಪೊಲೀಸರಿಗೆ ತಿಳಿಸಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ