ದೆಹಲಿ: ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಗಲಾಟೆ, ಕೊಲೆಯಲ್ಲಿ ಅಂತ್ಯ

|

Updated on: Sep 17, 2023 | 12:03 PM

ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಶನಿವಾರ ಸಂಜೆ ದೆಹಲಿಯ ಮನೆಯೊಂದಕ್ಕೆ ನುಗ್ಗಿದ ಆರು ದುಷ್ಕರ್ಮಿಗಳು ಪತ್ನಿ ಹಾಗೂ ಮಗನ ಎದುರೇ ವ್ಯಕ್ತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ, ತಪ್ಪಿಸಲು ಹೋದ ಪತ್ನಿಗೂ ಗಂಭೀರ ಗಾಯಗಳಾಗಿವೆ. ಆಗ್ನೇಯ ದೆಹಲಿಯ ಸರಿತಾ ವಿಹಾರ್ ನಿವಾಸಿಯಾಗಿರುವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ.

ದೆಹಲಿ: ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಗಲಾಟೆ, ಕೊಲೆಯಲ್ಲಿ ಅಂತ್ಯ
ದೆಹಲಿ ಪೊಲೀಸ್
Follow us on

ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಶನಿವಾರ ಸಂಜೆ ದೆಹಲಿಯ ಮನೆಯೊಂದಕ್ಕೆ ನುಗ್ಗಿದ ಆರು ದುಷ್ಕರ್ಮಿಗಳು ಪತ್ನಿ ಹಾಗೂ ಮಗನ ಎದುರೇ ವ್ಯಕ್ತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ, ತಪ್ಪಿಸಲು ಹೋದ ಪತ್ನಿಗೂ ಗಂಭೀರ ಗಾಯಗಳಾಗಿವೆ. ಆಗ್ನೇಯ ದೆಹಲಿಯ ಸರಿತಾ ವಿಹಾರ್ ನಿವಾಸಿಯಾಗಿರುವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ.

ಪೊಲೀಸರ ಪ್ರಕಾರ, ನಿನ್ನೆ ರಾತ್ರಿ 9.45 ರ ಸುಮಾರಿಗೆ ಅವರಿಗೆ ಪಿಸಿಆರ್ ಕರೆ ಬಂದಿದ್ದು, ಐದರಿಂದ ಆರು ಮಂದಿ ಬೈಕ್‌ನಲ್ಲಿ ಬಂದು ಸಂತ್ರಸ್ತೆಯ ಮನೆಗೆ ನುಗ್ಗಿ, ಅರವಿಂದ್ ಮಂಡಲ್ ಎಂಬುವವರಿಗೆ ಚೂರಿಯಿಂದ ಇರಿದಿದ್ದಾರೆ ಎಂದು ತಿಳಿಸಿದ್ದಾರೆ.
ಅರವಿಂದ್ ಮಂಡಲ್ ಸಂಜೆ ತನ್ನ ಮಗ ಆಕಾಶ್‌ನೊಂದಿಗೆ ಶಾಲೆಯಿಂದ ಹಿಂತಿರುಗಿದ್ದಾಗ ಮನೋಜ್ ಹಲ್ದರ್ ಎಂಬ ವ್ಯಕ್ತಿಯೊಂದಿಗೆ ಜಗಳವಾಡಿದ್ದರು.

ದ್ವಿಚಕ್ರ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಹಳೆ ಜಗಳವಿತ್ತು. ಆದರೆ, ನಿನ್ನೆ ಸಂಜೆ ವಿಷಯ ಬಗೆಹರಿದಿದ್ದು, ಅರವಿಂದ್ ಮನೆಗೆ ತೆರಳಿದ್ದರು. ರಾತ್ರಿ 9:30ರ ಸುಮಾರಿಗೆ ಆರು ಮಂದಿ ಅರವಿಂದ್ ಅವರ ಮನೆಗೆ ಮೋಟಾರ್ ಸೈಕಲ್‌ನಲ್ಲಿ ಆಗಮಿಸಿ ಅವರ ಮೇಲೆ ಮತ್ತು ಅವರ ಪತ್ನಿ ರೇಖಾ ಮಂಡಲ್ ಮೇಲೆ ಹಲ್ಲೆ ನಡೆಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಅರವಿಂದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮತ್ತಷ್ಟು ಓದಿ: ದೊಡ್ಡಬಳ್ಳಾಪುರ: ಕೆಲಸ ಅರಸಿ ಬಂದ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಸಾವು

ಪೊಲೀಸರು ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಿದ ಪೊಲೀಸರು ಈ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರನ್ನು ರಾಜು ಪತ್ರ, ರವಿ ಅಲಿಯಾಸ್ ಗೋಳು ಮತ್ತು ಶಂಭು ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಆರೋಪಿಗಳಾದ ವಿಜಯ್ ಮತ್ತು ಮನೋಜ್ ಪರಾರಿಯಾಗಿದ್ದಾರೆ. ಇವರೆಲ್ಲರೂ ಸರಿತಾ ವಿಹಾರದಲ್ಲಿರುವ ಪ್ರಿಯಾಂಕಾ ಕ್ಯಾಂಪ್ ನಿವಾಸಿಗಳಾಗಿದ್ದಾರೆ.

ಕುಟುಂಬವು ತಂದೆ ಗೌರಚಂದ್ ಮಂಡಲ್, ಪತ್ನಿ ರೇಖಾ ಮಂಡಲ್, 15 ವರ್ಷದ ಮಗ ಮತ್ತು ಇತರ ಸದಸ್ಯರನ್ನು ಒಳಗೊಂಡಿದೆ. ಆರೋಪಿಗಳು ಅರವಿಂದ್​ ಅವರ ಎದೆ ಹಾಗೂ ಕೈಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದರು. ಮಗ ಹೇಗೋ ಬಚ್ಚಿಟ್ಟುಕೊಂಡು ಪ್ರಾಣ ಉಳಿಸಿಕೊಂಡಿದ್ದಾನೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ