Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಹೋದರಿಗೆ ಫಿಕ್ಸ್ ಆಗಿದ್ದ ಸಂಬಂಧವನ್ನ ಹಾಳು ಮಾಡಿದ್ದ ಸಂಬಂಧಿ ಯುವಕನನ್ನು ಕೊಚ್ಚಿಕೊಂದರು 

ಅಷ್ಟಕ್ಕೂ ಈ ಹನುಮಂತ್ರಾಯನ ಕೊಲೆ ನಡೆಯೋಕೆ ಕಾರಣವಾದ್ರು ಏನು ಅಂದ್ರೆ ತಂಗಿಯ ಸಂಬಂಧ ಮುರಿದು ಬಿತ್ತು ಎನ್ನುವ ಒಂದೆ ಒಂದು ಕಾರಣ.. ಹನುಮಂತ್ರಾಯನ ತಂದೆ ಹೊನ್ನಪ್ಪಗೆ ನಾಲ್ಕು ಜನ ಮಕ್ಕಳಿದ್ದಾರೆ. ಹನುಮಂತ್ರಾಯ ಹಿರಿಯ ಮಗ ಇನ್ನಿಬ್ಬರು ಹೆಣ್ಣು ಮಕ್ಕಳು ಇನ್ನೋರ್ವ ಕಿರಿಯ ಮಗ ಇದ್ದಾನೆ‌. ಅರ್ಧ ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಾ ಕುರಿಗಳನ್ನ ಹಾಕಿಕೊಂಡು ಜೀವನ ಸಾಗಿಸುತ್ತಿದ್ದ.

ಸಹೋದರಿಗೆ ಫಿಕ್ಸ್ ಆಗಿದ್ದ ಸಂಬಂಧವನ್ನ ಹಾಳು ಮಾಡಿದ್ದ ಸಂಬಂಧಿ ಯುವಕನನ್ನು ಕೊಚ್ಚಿಕೊಂದರು 
ಸಹೋದರಿಗೆ ಫಿಕ್ಸ್ ಆಗಿದ್ದ ಸಂಬಂಧವನ್ನ ಹಾಳು ಮಾಡಿದ್ದ ಸಂಬಂಧಿ ಯುವಕನನ್ನು ಕೊಚ್ಚಿಕೊಂದರು
Follow us
ಅಮೀನ್​ ಸಾಬ್​
| Updated By: ಸಾಧು ಶ್ರೀನಾಥ್​

Updated on: Dec 05, 2023 | 10:16 AM

ಅವರಿಬ್ಬರೂ ಸಂಬಂಧಿಕರೆ ಆಗಬೇಕು.. ಇಬ್ಬರ ಮಧ್ಯೆ ಒಳ್ಳೆಯ ಸ್ನೇಹ ಕೂಡ ಇತ್ತು. ಆದ್ರೆ ಸಹೋದರಿಗೆ (Sister) ಫಿಕ್ಸ್ ಆಗಿದ್ದ ಸಂಬಂಧವನ್ನ ( Relative) ಹಾಳು ಮಾಡಿದ್ದ ಎನ್ನುವ ಕಾರಣಕ್ಕ ಇಬ್ಬರ ಮಧ್ಯೆ ವೈಮನಸ್ಸು ಶುರುವಾಗಿತ್ತು. ಕೊನೆಗೆ ಇಡೀ ಕುಟುಂಬ ಸಮೇತರಾಗಿ ಸಂಬಂಧ ಹಾಳು ಮಾಡಿದವನ ಮನೆಗೆ ಕೇಳಲು ಹೋದಾಗ ಅಲ್ಲಿ ಬೇರೆದ್ದೆಯೇ ನಡೆದಿದೆ.. ಬೆಳ್ಳಂಬೆಳಗ್ಗೆ ಗ್ರಾಮ ಬೆಚ್ಚಿಬೀಳುವ ಹಾಗೆ ಕೊಲೆ (Murder) ನಡೆದು ಹೋಗಿದೆ. ಅಷ್ಟಕ್ಕೂ ಕೊಲೆಗೆ ಕಾರಣವಾದ್ರು ಏನು ಅಂತೀರಾ? ಈ ಸ್ಟೋರಿ ನೋಡಿ. ಸಹೋದರ ಸಂಬಂಧಿಯಿಂದಲೇ ಯುವಕ ಕೊಲೆ.. ತಂಗಿಯ ನಿಶ್ಚಿತಾರ್ಥ (Marriage) ಮುರಿದು ಹಾಕಿದವನ ಮನೆಗೆ ಕೇಳಲು ಹೋಗಿದ್ದ ಅಣ್ಣನ ಕೊಲೆ.. ಕೊಲೆಗೆ ಬೆಚ್ಚಿ ಬಿದ್ದ ಕುಗ್ರಾಮ.. ಯಸ್ ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಡಕೂರ ಗ್ರಾಮದಲ್ಲಿ (Nadkoor village, Surpur taluk, Yadgiri ).

ಹೌದು ನಿನ್ನೆ ಈ ಗ್ರಾಮದಲ್ಲಿ ಇಡೀ ಗ್ರಾಮವೇ ಬೆಚ್ಚಿ ಬೀಳುವ ಘಟನೆಯೊಂದು ನಡೆದು ಹೋಗಿದೆ. 22 ವರ್ಷದ ಹನುಮಂತ್ರಾಯ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದು ಹೋಗಿದೆ. ಮಚ್ಚಿನಿಂದ ಹೊಟ್ಟೆ ಮತ್ತು ಎದೆ ಭಾಗಕ್ಕೆ ಕೊಚ್ಚಲಾಗಿತ್ತು. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಯುವಕ ಹನುಮಂತ್ರಾಯನ್ನ ಕೂಡಲೇ ಕುಟುಂಬಸ್ಥರು ಸ್ಥಳೀಯ ಕೆಂಭಾವಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಆದ್ರೆ ರಕ್ತಸ್ರಾವ ಹೆಚ್ಚಾಗುತ್ತಿದ್ದ ಕಾರಣಕ್ಕೆ ವೈದ್ಯರು ಕಲಬುರ್ಗಿಗೆ ಕರೆದೊಯ್ಯಲು ಸೂಚಿಸಿದ್ದಾರೆ. ಕುಟುಂಬಸ್ಥರು ಹನುಮಂತ್ರಾಯನನ್ನ ಕಲಬುರ್ಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಮಧ್ಯಾಹ್ನದ ವೇಳೆಗೆ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ರು. ಆದ್ರೆ ‌ನಿನ್ನೆ ಸಂಜೆ ವೇಳೆ ಯುವಕ ಹನುಮಂತ್ರಾಯ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಇವತ್ತು ಗ್ರಾಮಕ್ಕೆ ಶವವನ್ನ ತಂದಿದ್ದಕ್ಕೆ ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮನೆಯ ಹಿರಿ ಮಗನನ್ನ ಕಳೆದುಕೊಂಡ ಕುಟುಂಬಸ್ಥರು ಕಣ್ಣೀರು ಹಾಕ್ತಾಯಿದ್ರು. ಇದ್ದಕ್ಕೆ ಕಾರಣ ಆ ಏಕೈಕ ವ್ಯಕ್ತಿ.. ಇದೇ ಗ್ರಾಮದ ಮಂಜುನಾಥ ಅನ್ನೋದು ಇಡೀ ಗ್ರಾಮಸ್ಥರಿಗೆ ಗೊತ್ತಾಗಿದೆ.

ಅಷ್ಟಕ್ಕೂ ಈ ಹನುಮಂತ್ರಾಯನ ಕೊಲೆ ನಡೆಯೋಕೆ ಕಾರಣವಾದ್ರು ಏನು ಅಂದ್ರೆ ತಂಗಿಯ ಸಂಬಂಧ ಮುರಿದು ಬಿತ್ತು ಎನ್ನುವ ಒಂದೆ ಒಂದು ಕಾರಣ.. ಹನುಮಂತ್ರಾಯನ ತಂದೆ ಹೊನ್ನಪ್ಪಗೆ ನಾಲ್ಕು ಜನ ಮಕ್ಕಳಿದ್ದಾರೆ. ಹನುಮಂತ್ರಾಯ ಹಿರಿಯ ಮಗ ಇನ್ನಿಬ್ಬರು ಹೆಣ್ಣು ಮಕ್ಕಳು ಇನ್ನೋರ್ವ ಕಿರಿಯ ಮಗ ಇದ್ದಾನೆ‌. ಅರ್ಧ ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಾ ಕುರಿಗಳನ್ನ ಹಾಕಿಕೊಂಡು ಜೀವನ ಸಾಗಿಸುತ್ತಿದ್ದ.

ಕೆಲ ವರ್ಷಗಳ ಹಿಂದೆ ಓರ್ವ ಮಗಳ ಮದುವೆಯನ್ನ ಹೊನ್ನಪ್ಪ ಮಾಡಿದ್ದ. ಇನ್ನೋರ್ವ ಮಗಳ ಮದುವೆಯನ್ನ ಮಾಡೋಕೆ ಸಿದ್ದತೆ ಮಾಡಿಕೊಂಡಿದ್ದ. ಇದೆ ಕಾರಣಕ್ಕೆ ಎರಡನೇ ಮಗಳನ್ನ ವಿಜಯಪುರ ಜಿಲ್ಲೆಯ ಮೂಲದ ಯುವಕನ ಜೊತೆಗೆ ಫಿಕ್ಸ್ ಮಾಡಿದ್ದ. ಇನ್ನು ಕೊಲೆಯಾದ ಮಗ ಹನುಮಂತ್ರಾಯ ಕುರಿಗಳನ್ನ ಸಾಕುವ ಕೆಲಸ ಮಾಡಿಕೊಂಡು ತಂದೆಗೆ ಸಹಕಾರಿಯಾಗಿದ್ದ.

ಇತ್ತ ಹನುಮಂತ್ರಾಯನನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಮಂಜುನಾಥ ಹನುಮಂತ್ರಾಯಗೆ ಅತ್ತೆಯ ಮಗನಾಗಬೇಕು. ಹನುಮಂತ್ರಾಯ ನ ಎರಡನೇ ಸಹೋದರಿಯನ್ನ ವಿಜಯಪುರ ಮೂಲದ ಯುವಕನ ಜೊತೆ ನಿಶ್ಚಿತಾರ್ಥ ಆಗಿದ್ದನ್ನ ಮಂಜುನಾಥಗೆ ಸಹಿಸಿಕೊಳ್ಳಲು ಆಗ್ತಾಯಿರಲಿಲ್ಲ. ಇದೆ ಕಾರಣಕ್ಕೆ ಮಂಜುನಾಥ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನಿಗೆ ಫೋನ್ ಮಾಡಿ ಆಕೆ ಸರಿಯಿಲ್ಲ, ಮದುವೆ ಆಗಬೇಡ ಅಂತ‌ ನಾನಾ ರೀತಿಯ ಸುಳ್ಳಗಳನ್ನ ಹೇಳಿದ್ದಾನಂತೆ‌.

Also read:   ಪೊಲೀಸರ ಸೋಗಿನಲ್ಲಿ ಬಂದು ಉದ್ಯಮಿ ಮನೆಯಲ್ಲಿದ್ದ 700 ಗ್ರಾಂ ಚಿನ್ನಾಭರಣ, 60 ಲಕ್ಷ ನಗದು ದರೋಡೆ ಮಾಡಿದ ಖದೀಮರು

ಇದೆ ಕಾರಣಕ್ಕೆ ಯುವಕ ತನ್ನ ನಿಶ್ಚಿತಾರ್ಥವನ್ನ ಮುರಿದಿದ್ದಾನೆ. ನಿಶ್ಚಿತಾರ್ಥ ಆಗಿದ್ದನ್ನ ಕ್ಯಾನ್ಸಲ್ ಆಗಿದ್ದಕ್ಕೆ ಹನುಮಂತ್ರಾಯ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಜೊತೆಗೆ ನಿಶ್ಚಿತಾರ್ಥ ಮುರಿದ ಯುವಕ ಹನುಮಂತ್ರಾಯ ಮನೆಗೆ ಬಂದು ಮಂಜುನಾಥನೇ ಈ ರೀತಿ ಹೇಳಿದ್ದಾನೆ ಅಂತ ಹೇಳಿದ್ದ.

ಇದೆ ಕಾರಣಕ್ಕೆ ಹನುಮಂತ್ರಾಯ ಕುಟುಂಬಸ್ಥರು ಮಂಜುನಾಥ ಮನೆಗೆ ಹೋಗಿ ಯಾಕೆ ಈ ರೀತಿ ಮಾಡಿದಿಯಾ ಅಂತ ಕೇಳಲು ಹೋಗಿದ್ದಾರೆ. ಇದೆ ವೇಳೆ ಮಾತಿಗೆ ಮಾತು ಬೆಳದು ಜಗಳ ಆಗಿದೆ. ಕೊನೆಗೆ ಮಂಜುನಾಥ ಮನೆಯಲ್ಲಿದ್ದ ಮಚ್ಚು ತಂದು ಹನುಮಂತ್ರಾಯನ ಎದೆ ಮತ್ತು ಹೊಟ್ಟೆಗೆ ಬಲವಾಗಿ ಹೊಡೆದಿದ್ದಾನೆ. ಮಂಜುನಾಥ ಅಲ್ಲದೆ ಕುಟುಂಬಸ್ಥರು ಸೇರಿ ಹನುಮಂತ್ರಾಯನ ಕುಟುಂಬಸ್ಥರ ಮೇಲೆಯೂ ಹಲ್ಲೆ ಮಾಡಿದ್ದಾರೆ. ಇನ್ನು ರಕ್ತದ ಮಡುವಿನಲ್ಲಿದ್ದ ಹನುಮಂತ್ರಾಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡ್ಲೆ ಕೆಂಭಾವಿ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ನಡೆದ ಬಳಿಕ ಆರೋಪಿಗಳು ತಲೆ ಮರಿಸಿಕೊಂಡಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ
ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ
Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ
Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ
Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ