Crime News: ಕಾವೇರಿ ನದಿಯಲ್ಲಿ ಸ್ನಾನಕ್ಕೆ ತೆರಳಿದ ವಿದ್ಯಾರ್ಥಿ ಸುಳಿಗೆ ಸಿಲುಕಿ ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: May 07, 2022 | 6:34 PM

ಲಾರಿ ಬ್ರೇಕ್ ಫೇಲ್ ಆಗಿರೋ ಪರಿಣಾಮ ದಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಲಾರಿ ಕೆಳಗೆ ದ್ವಿಚಕ್ರ ವಾಹನ ಸವಾರ ಸಿಕ್ಕಿ ಹಾಕಿಕೊಂಡಿರುವಂತಹ ಘಟನೆ ನಡೆದಿದೆ.

Crime News: ಕಾವೇರಿ ನದಿಯಲ್ಲಿ ಸ್ನಾನಕ್ಕೆ ತೆರಳಿದ ವಿದ್ಯಾರ್ಥಿ ಸುಳಿಗೆ ಸಿಲುಕಿ ಸಾವು
ಸಾಂದರ್ಭಿಕ ಚಿತ್ರ
Follow us on

ಕೊಡಗು: ಕಾವೇರಿ ನದಿಯಲ್ಲಿ ಸ್ನಾನಕ್ಕೆ ತೆರಳಿದ ವಿದ್ಯಾರ್ಥಿ (Student) ಮುಳುಗಿ ಸಾವನ್ನಪದಪಿರುವಂತಹ ಘಟನೆ ಸೋಮವಾರಪೇಟೆ ತಾಲ್ಲೂಕಿನ ನೆಲ್ಲಿಹುದಿಕೇರಿ ಸಮೀಪ ನಡೆದಿದೆ. ಬರಡಿ ಗ್ರಾಮದ ಮಣಿ ಎಂಬವರ ಮಗ ಬಿಪಿನ್ (18) ಮೃತ ದುರ್ದೈವಿ. ಯುವಕರೊಂದಿಗೆ ಸ್ನಾನಕ್ಕೆ ತೆರಳಿದ ಸಂದರ್ಭ ವಿದ್ಯಾರ್ಥಿ ಸುಳಿಗೆ ಸಿಲುಕಿದ್ದಾನೆ. ಸಿದ್ಧಾಪುರ ಖಾಸಗಿ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿ ಬಿಪಿನ್. ನಾಳೆ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಾಗಿದ್ದ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೈಕ್​ಗೆ ಕಾರು ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು;

ಹಾವೇರಿ: ಎರಡು ಬೈಕ್​ಗಳಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವನಿಗೆ ಗಂಭೀರ ಗಾಯಗೊಂಡಿರುವಂತಹ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಗ್ರಾಮದ ಬಳಿ ನಡೆದಿದೆ. ಗಣೇಶ ಲಮಾಣಿ 35 ವರ್ಷ ಮತ್ತು ರಮೇಶ ಲಮಾಣಿ 40 ವರ್ಷ ಮೃತರು.
ಗಾಯಾಳು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕಾರಿನ ಟೈರ್ ಬರ್ಸ್ಟ್ ಆಗಿ ಎರಡು ಬೈಕ್​ಗಳಿಗೆ ಡಿಕ್ಕಿ ಹೊಡೆದಿದ್ದರಿಂದ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬ್ರೇಕ್​ ಫೇಲ್​ ಆಗಿ ಬೈಕ್​ ಡಿಕ್ಕಿ ಹೊಡೆದ ಲಾರಿ; ಲಾರಿ ಕೆಳಗೆ ಸಿಲುಕಿಕೊಂಡ ಬೈಕ್ ಸವಾರ

ಕೊಪ್ಪಳ: ಲಾರಿ ಬ್ರೇಕ್ ಫೇಲ್ ಆಗಿರೋ ಪರಿಣಾಮ ದಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಲಾರಿ ಕೆಳಗೆ ದ್ವಿಚಕ್ರ ವಾಹನ ಸವಾರ ಸಿಕ್ಕಿ ಹಾಕಿಕೊಂಡಿರುವಂತಹ ಘಟನೆ ನಡೆದಿದೆ. ಬಸ್ ನಿಲ್ದಾಣದ ಮುಂದೆ ಭೀಕರ ಅಪಘಾತ ಸಂಭವಿಸಿದ್ದು, ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಕ್ರದ ಕೆಳಗಡೆ ಸವಾರ ಸಿಲುಕಿದ್ದಾನೆ. ಲಾರಿ ಚಕ್ರದ ಕೆಳಗಡೆ ಸಾವು ಬದುಕಿನ ಮದ್ಯೆ ಹೋರಾಡ್ತಿದ್ದ ಸವಾರನನ್ನು ಸ್ಥಳೀಯರು ಆಟೋದಲ್ಲಿ ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಗಂಭೀರ ಗಾಯಗೊಂಡ ದ್ವಿಚಕ್ರ ವಾಹನ ಸವಾರನಿಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಪ್ಪಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕೆಪಿಎಸ್ಸಿ ಸೆಲೆಕ್ಷನ್ ಕಮಿಟಿ ಆಪೀಸರ್ಗೆ ಡ್ರೈವರ್ ಆಗಿದ್ದ ಯುವಕನ ಅನುಮಾನಾಸ್ಪದ ಸಾವು;  

ದೇವನಹಳ್ಳಿ: ಕೆಪಿಎಸ್ಸಿ ಸೆಲೆಕ್ಷನ್ ಕಮಿಟಿ ಆಪೀಸರ್ ಒಬ್ಬರ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಓರ್ವ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಕಳೆದ ಎರಡು ದಿನಗಳಿಂದೆ ರೂಮಲ್ಲಿ‌ ಮಲಗಿದ್ದ ವೇಳೆ ಯುವಕ ಸಾವನ್ನಪ್ಪಿದ್ದಾನೆ. ಯಲಹಂಕ ತಾಲೂಕಿನ ಶ್ರೀರಾಮನಹಳ್ಳಿ ಗ್ರಾಮದ ಹರೀಶ್ (28) ಮೃತಪಟ್ಟ ದುರ್ದೈವಿ. ಹರೀಶ್ ಕಳೆದ ಒಂದೂವರೆ ವರ್ಷದಿಂದೆ ನಿವೃತ್ತ ಜಡ್ಜ್ ಒಬ್ಬರ ಡ್ರೈವರ್ ಆಗಿ ಕೆಲಸಕ್ಕೆ ಸೇರಿದ್ದ. ನಿವೃತ್ತ ಜಡ್ಜ್ ಕೆಪಿಎಸ್ಸಿ ಸೆಲೆಕ್ಷನ್ ಕಮಿಟಿಯಲ್ಲಿ ಕೆಲಸ ನಿರ್ವಹಿಸುತ್ತಿದ್ರು. ಇವರಿಗೆ ಡ್ರೈವರ್ ಆಗಿದ್ದ ಹರೀಶ್ ಕೊಡಿಗೇಹಳ್ಳಿಯಲ್ಲಿ ರೂಂ ಮಾಡಿಕೊಂಡಿದ್ದ. ಕಳೆದ 5 ರಂದು ರೂಂನಲ್ಲಿ ಹರೀಶ್ ಮಲಗಿದ್ದಾಗ ಸಾವನ್ನಪ್ಪಿದಂತೆ ಶವ ಪತ್ತೆಯಾಗಿದೆ. ಸ್ಥಳಕ್ಕೆ ಕುಟುಂಬಸ್ಥರುಹೋಗುವ ವೇಳೆಗೆ ಶವವನ್ನ ರಾಮಯ್ಯ ಆಸ್ಪತ್ರೆಗೆ ಪೊಲೀಸರು ಶೀಪ್ಟ್ ಮಾಡಿದ್ದರು. ಇದೀಗ ಹರೀಶ್ ಸಾವಿನ ಬಗ್ಗೆ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಕೆಪಿಎಸ್ಸಿ ಸೆಲೆಕ್ಷನ್ ಕಮಿಟಿ ಆಪೀಸರ್ಗೆ ಡ್ರೈವರ್ ಆಗಿದ್ದ ಹಿನ್ನಲೆ ಪೋಷಕರು ಸಾವಿನ ಬಗ್ಗೆ ಅನುಮಾನ ಮೂಡಿದೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು, ಎನ್ಸಿಆರ್ ಹಾಕಿ ಪೊಲೀಸರು ಕೈ ತೊಳೆದುಕೊಂಡಿದ್ದಾರೆ. ಹರೀಶ್ ಸಾವಿನ ಬಗ್ಗೆ ತೀವ್ರ ಅನುಮಾನ ಹುಟ್ಟುಕೊಂಡಿದ್ದು, ಮಗನ ಸಾವಿನ ಬಗ್ಗೆ ಸಮಗ್ರ ತನಿಖೆಗೆ ಪೋಷಕರು ಆಗ್ರಹಿಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.