ಕಾಣೆಯಾದ ಮಗಳಿಗಾಗಿ ಡಿಸಿ ಕಛೇರಿ ಎದುರು ಹೆತ್ತಮ್ಮನ ಕಣ್ಣೀರು: ವಿಷದ ಬಾಟಲ್ ಹಿಡಿದು ಮಹಿಳೆಯ ಏಕಾಂಗಿ ಹೋರಾಟ
ಕೆಪಿಎಸ್ಸಿ ಸೆಲೆಕ್ಷನ್ ಕಮಿಟಿ ಆಪೀಸರ್ ಒಬ್ಬರ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಓರ್ವ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಕಳೆದ ಎರಡು ದಿನಗಳಿಂದೆ ರೂಮಲ್ಲಿ ಮಲಗಿದ್ದ ವೇಳೆ ಯುವಕ ಸಾವನ್ನಪ್ಪಿದ್ದಾನೆ.
ಹಾಸನ: ಕಾಣೆಯಾದ ಮಗಳಿಗಾಗಿ ವಿಷದ (Poison) ಬಾಟಲ್ ಜೊತೆಗೆ ಡಿಸಿ ಕಛೇರಿ ಎದುರು ಓರ್ವ ಮಹಿಳೆ ಏಕಾಂಗಿ ಹೋರಾಟ ಮಾಡಿರುವಂತಹ ಘಟನೆ ನಡೆದಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದ ಮಹಿಳೆ, ಪ್ರೀತಿ ಪ್ರೇಮದ ಹೆಸರಿನಲ್ಲಿ ಪುಸಲಾಯಿಸಿ ಮಗಳನ್ನ ಕಿಡ್ನಾಪ್ ಮಾಡಲಾಗಿದೆ ಎಂದು ಕಗ್ಗಲಿ ಕಾವಲು ಗ್ರಾಮದ ಪವನ್ ಶೆಟ್ಟಿ ವಿರುದ್ದ ಅಪಹರಣದ ಆರೋಪ ಮಾಡಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿನಿ ಮಗಳನ್ನ ಕಿಡ್ನಾಪ್ ಮಾಡಲಾಗಿದೆ ಎಂದು ಮಹಿಳೆ ಕಣ್ಣೀರಿಟ್ಟಿದ್ದಾಳೆ. ಮಹಿಳೆ ಮನವೊಲಿಸಿದ ಶಾಸಕ ಬಾಲಕೃಷ್ಣ ವಿಷದ ಬಾಟಲ್ ವಶಕ್ಕೆ ಪಡೆದಿದ್ದಾರೆ. ಶಾಸಕರ ಕಾಲಿಗೆ ಬಿದ್ದು ಮಗಳನ್ನ ವಾಪಸ್ ಕರೆಸಿ ಎಂದು ಮಹಿಳೆ ಬೇಡಿಕೊಂಡಿದ್ದಾರೆ. ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಲಾಗಿದೆ ಎಂದು ಪೊಲೀಸ್ ಠಾಣೆ, ಮಹಿಳಾ ಆಯೋಗಕ್ಕೆ ದೂರು ನೀಡಿದ್ರು ಕ್ರಮ ಕೈಗೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಒಂದೂವರೆ ತಿಂಗಳಾದ್ರು ಮಗಳು ವಾಪಸ್ ಬಂದಿಲ್ಲ ಎಂದು ವಿಷದ ಬಾಟಲ್ ಸಮೇತ ಡಿಸಿ ಕಛೇರಿಗೆ ಮಹಿಳೆ ಬಂದಿದ್ದಾಳೆ. ಮಾಹಿತಿ ತಿಳಿದು ಮಹಿಳೆಯಿಂದ ವಿಷದ ಬಾಟಲ್ನ್ನು ಶ್ರವಣಬೆಳಗೊಳ ಕ್ಷೇತ್ರ ಶಾಸಕ ಬಾಲಕೃಷ್ಣ ವಶಕ್ಕೆ ಪಡೆದಿದ್ದಾರೆ.
ಕೆಪಿಎಸ್ಸಿ ಸೆಲೆಕ್ಷನ್ ಕಮಿಟಿ ಆಪೀಸರ್ಗೆ ಡ್ರೈವರ್ ಆಗಿದ್ದ ಯುವಕನ ಅನುಮಾನಾಸ್ಪದ ಸಾವು;
ದೇವನಹಳ್ಳಿ: ಕೆಪಿಎಸ್ಸಿ ಸೆಲೆಕ್ಷನ್ ಕಮಿಟಿ ಆಪೀಸರ್ ಒಬ್ಬರ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಓರ್ವ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಕಳೆದ ಎರಡು ದಿನಗಳಿಂದೆ ರೂಮಲ್ಲಿ ಮಲಗಿದ್ದ ವೇಳೆ ಯುವಕ ಸಾವನ್ನಪ್ಪಿದ್ದಾನೆ. ಯಲಹಂಕ ತಾಲೂಕಿನ ಶ್ರೀರಾಮನಹಳ್ಳಿ ಗ್ರಾಮದ ಹರೀಶ್ (28) ಮೃತಪಟ್ಟ ದುರ್ದೈವಿ. ಹರೀಶ್ ಕಳೆದ ಒಂದೂವರೆ ವರ್ಷದಿಂದೆ ನಿವೃತ್ತ ಜಡ್ಜ್ ಒಬ್ಬರ ಡ್ರೈವರ್ ಆಗಿ ಕೆಲಸಕ್ಕೆ ಸೇರಿದ್ದ. ನಿವೃತ್ತ ಜಡ್ಜ್ ಕೆಪಿಎಸ್ಸಿ ಸೆಲೆಕ್ಷನ್ ಕಮಿಟಿಯಲ್ಲಿ ಕೆಲಸ ನಿರ್ವಹಿಸುತ್ತಿದ್ರು. ಇವರಿಗೆ ಡ್ರೈವರ್ ಆಗಿದ್ದ ಹರೀಶ್ ಕೊಡಿಗೇಹಳ್ಳಿಯಲ್ಲಿ ರೂಂ ಮಾಡಿಕೊಂಡಿದ್ದ. ಕಳೆದ 5 ರಂದು ರೂಂನಲ್ಲಿ ಹರೀಶ್ ಮಲಗಿದ್ದಾಗ ಸಾವನ್ನಪ್ಪಿದಂತೆ ಶವ ಪತ್ತೆಯಾಗಿದೆ. ಸ್ಥಳಕ್ಕೆ ಕುಟುಂಬಸ್ಥರುಹೋಗುವ ವೇಳೆಗೆ ಶವವನ್ನ ರಾಮಯ್ಯ ಆಸ್ಪತ್ರೆಗೆ ಪೊಲೀಸರು ಶೀಪ್ಟ್ ಮಾಡಿದ್ದರು. ಇದೀಗ ಹರೀಶ್ ಸಾವಿನ ಬಗ್ಗೆ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಕೆಪಿಎಸ್ಸಿ ಸೆಲೆಕ್ಷನ್ ಕಮಿಟಿ ಆಪೀಸರ್ಗೆ ಡ್ರೈವರ್ ಆಗಿದ್ದ ಹಿನ್ನಲೆ ಪೋಷಕರು ಸಾವಿನ ಬಗ್ಗೆ ಅನುಮಾನ ಮೂಡಿದೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು, ಎನ್ಸಿಆರ್ ಹಾಕಿ ಪೊಲೀಸರು ಕೈ ತೊಳೆದುಕೊಂಡಿದ್ದಾರೆ. ಹರೀಶ್ ಸಾವಿನ ಬಗ್ಗೆ ತೀವ್ರ ಅನುಮಾನ ಹುಟ್ಟುಕೊಂಡಿದ್ದು, ಮಗನ ಸಾವಿನ ಬಗ್ಗೆ ಸಮಗ್ರ ತನಿಖೆಗೆ ಪೋಷಕರು ಆಗ್ರಹಿಸಿದ್ದಾರೆ.
ಹಾಸನ: ಮಳೆಯಿಂದ ಹಾನಿ; ಪರಿಹಾರಕ್ಕೆ ಮನವಿ
ಹಾಸನ ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಮನೆಯೊಂದರ ಗೋಡೆ ಹಾಗೂ ಮೇಲ್ಛಾವಣಿ ಕುಸಿದಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಎಂ. ಹೊಸೂರು ಗ್ರಾಮದಲ್ಲಿ ಕಳೆದ ರಾತ್ರಿ 11.30 ಸುಮಾರಿನಲ್ಲಿ ಘಟನೆ ನಡೆದಿದೆ. ಗ್ರಾಮದ ಉಮೇಶ್ ಎಂಬುವವರ ಮನೆ ಕುಸಿದು ಅವಘಡ ಸಂಭವಿಸಿದ್ದು, ಮನೆಯಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಹಾನಿಯಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಸಂತ್ರಸ್ತ ಕುಟುಂಬ ಮನವಿ ಮಾಡಿದೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.