ವಕೀಲರೋರ್ವರ ಮೇಲೆ ಐವರಿಂದ ಹಲ್ಲೆ; ಆರೋಪಿಗಳನ್ನು ಬಂಧಿಸುವಂತೆ ಶಿರಸಿ ವಕೀಲರ ಸಂಘ ಆಗ್ರಹ
ಕಲ್ಲು, ಮಣ್ಣು ಇದ್ದ ಗಾಯಕ್ಕೆ ಸ್ಟಿಚ್ ಹಾಕಿ ಬ್ಯಾಂಡೇಜ್ ಸುತ್ತಿ, ಕಡಬ ಸಮುದಾಯ ಆಸ್ಪತ್ರೆ ಸಿಬ್ಬಂದಿಗಳಿಂದ ಯಡವಟ್ಟು ಆಗಿರುವಂತಹ ಘಟನೆ ನಡೆದಿದೆ. ಶಸ್ತ್ರಚಿಕಿತ್ಸೆ ಸಂದರ್ಭ 14 ಕಲ್ಲು ತುಂಡುಗಳು ಗಾಯದೊಳಗೆ ಪತ್ತೆಯಾಗಿವೆ.
ಕಾರವಾರ: ಶಿರಸಿಯಲ್ಲಿ ವಕೀಲರೋರ್ವರ ಮೇಲೆ ಹಲ್ಲೆ ನಡೆದಿರುವಂತಹ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಜೆಎಂಎಪ್ಸಿ ಕೋರ್ಟ್ ಆವರಣದಲ್ಲಿ ನಡೆದಿದೆ. ದೇವೇಂದ್ರ ನಾಯ್ಕ ದೇವನಹಳ್ಳಿ ಎಂಬ ವಕೀಲರ ಮೇಲೆ ಹಲ್ಲೆಯಾಗಿದ್ದು, ರಾಘು ಭೈಲಪ್ಪ ಹಾಗೂ ಐವರಿಂದ ಹಲ್ಲೆ ಮಾಡಲಾಗಿದೆ. ಹಲ್ಲೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ವಕೀಲರ ಮೇಲಿನ ಹಲ್ಲೆಯನ್ನು ಶಿರಸಿ ವಕೀಲರ ಸಂಘ ಖಂಡಿಸಿದ್ದು, ಆರೋಪಿಗಳನ್ನು ಶೀಘ್ರವೆ ಬಂಧಿಸುವಂತೆ ಆಗ್ರಹಿಸಿದ್ದಾರೆ. ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಎರಡು ಸ್ಕೂಟರ್ಗಳ ನಡುವೆ ಅಪಘಾತ; ಯುವತಿ ಸಾವು
ಮೈಸೂರು: ಎರಡು ಸ್ಕೂಟರ್ಗಳ ನಡುವೆ ಅಪಘಾತ ಸಂಭವಿಸಿದ್ದು, ಯುವತಿ ಸಾವನ್ನಪ್ಪಿರುವಂತಹ ಘಟನೆ ಮೈಸೂರು ಹೊರವಲಯದ ರಿಂಗ್ ರಸ್ತೆಯಲ್ಲಿ ನಡೆದಿದೆ. ಪೊಲೀಸ್ ಬಡಾವಣೆ ಮೂರನೇ ಹಂತದ ನಿವಾಸಿ ಲತಾ (24) ದುರ್ದೈವಿ. ಖಾಸಗಿ ಕಂಪನಿಯೊಂದರಲ್ಲಿ ಆರ್ಕಿಟೆಕ್ಟ್ ಆಗಿದ್ದ ಲತಾ, ಕೆಲಸಕ್ಕೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಚಲಿಸುತ್ತಿದ್ದ ಲಾರಿ ಟೈರ್ ಬ್ಲಾಸ್ಟ್
ವಿಜಯಪುರ: ಚಲಿಸುತ್ತಿದ್ದ ಲಾರಿ ಟೈರ್ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿರುವಂತಹ ಘಟನೆ ವಿಜಯಪುರ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 50ರ ಇಂಡಿ ತಾಲೂಕಿನ ಬಳ್ಳೊಳ್ಳಿ ಗ್ರಾಮದ ಬಳಿ ನಡೆದಿದೆ. ಲಾರಿ ಹಾಗೂ ಲಾರಿಯಲ್ಲಿದ್ದ ಪ್ಲಾಸ್ಟಿಕ್ ಪೈಲ್ ಗಳು ಸುಟ್ಟು ಕರಕಲಾಗಿದ್ದು, ಮಹಾರಾಷ್ಟ್ರದ ಸೊಲ್ಲಾಪುರದಿಂದ ವಿಜಯಪುರದತ್ತ ಲಾರಿ ಹೊರಟಿತ್ತು. 7 ರಿಂದ 8 ಲಕ್ಷ ಮೌಲ್ಯದ ಪ್ಲಾಸ್ಟಿಕ್ ಪೈಪುಗಳು ಹಾಗೂ ಲಾರಿ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ದಾಖಲಾಗಿದೆ.
ಮಗಳ ಅನೈತಿಕ ಸಂಬಂಧಕ್ಕೆ ತಾಯಿ ಬಲಿ
ಬೆಂಗಳೂರು: ಮಗಳ ಅನೈತಿಕ ಸಂಬಂಧಕ್ಕೆ ತಾಯಿ ಬಲಿಯಾಗಿರುವಂತಹ ಘಟನೆ ಗೋವಿಂದರಾಜ ನಗರದ ಎಸ್.ವಿ.ಜಿ ಲೇಔಟ್ನಲ್ಲಿ ನಡೆದಿದೆ. ನಂಜಮ್ಮ (52) ಕೊಲೆಯಾದ ದುರ್ದೈವಿ. ರಾಘವೇಂದ್ರ ಎಂಬಾತನಿಂದ ಕೃತ್ಯ ಎಸಗಿದ್ದು, ಮೃತಳ ಮಗಳ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆರೋಪಿ ರಾಘವೇಂದ್ರ, ಮಗಳ ನಿರ್ಧಾರವನ್ನ ತಾಯಿ ನಂಜಮ್ಮ ವಿರೋಧಿಸಿದ್ದಾಳೆ. ಅದೇ ಕಾರಣಕ್ಕೆ ಆರೋಪಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಆರೋಪಿಯ ಬಂಧನ ಮಾಡಲಾಗಿದೆ.
ಕಡಬ ಸಮುದಾಯ ಆಸ್ಪತ್ರೆ ಸಿಬ್ಬಂದಿಗಳಿಂದ ಮಹಾ ಯಡವಟ್ಟು
ಮಂಗಳೂರು: ಕಲ್ಲು, ಮಣ್ಣು ಇದ್ದ ಗಾಯಕ್ಕೆ ಸ್ಟಿಚ್ ಹಾಕಿ ಬ್ಯಾಂಡೇಜ್ ಸುತ್ತಿ, ಕಡಬ ಸಮುದಾಯ ಆಸ್ಪತ್ರೆ ಸಿಬ್ಬಂದಿಗಳಿಂದ ಯಡವಟ್ಟು ಆಗಿರುವಂತಹ ಘಟನೆ ನಡೆದಿದೆ. ಶಸ್ತ್ರಚಿಕಿತ್ಸೆ ಸಂದರ್ಭ 14 ಕಲ್ಲು ತುಂಡುಗಳು ಗಾಯದೊಳಗೆ ಪತ್ತೆಯಾಗಿವೆ. ರಸ್ತೆ ಅಪಘಾತದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಕೋಡಿಂಬಾಳ ಗ್ರಾಮದ ಪುರುಷೋತ್ತಮ, ದ್ವಿಚಕ್ರ ವಾಹನ ಸ್ಕಿಡ್ ಆಗಿ ಮೊಣಕಾಲಿಗೆ ಗಾಯವಾಗಿತ್ತು. ಗಾಯ ಶುಚಿಗೊಳಿಸದೆ ಹೊಲಿಗೆ ಹಾಕಿದ ಆಸ್ಪತ್ರೆ ಸಿಬ್ಬಂದಿಗಳು. ವಾರ ಕಳೆದರು ಗಾಯ ಗುಣವಾಗದಿದ್ದಾಗ ಡಯಗ್ನೋಸ್ಟಿಕ್ ಸೆಂಟರ್‌ನಲ್ಲಿ ಗಾಯದ ಎಕ್ಸ್ ರೇ ತೆಗಿಸಿದ ಪುರುಷೋತ್ತಮ, ತಜ್ಞ ವೈದ್ಯರ ಪರಿಶೀಲನೆ ಸಂದರ್ಭ ಗಾಯದಲ್ಲಿ ಮಣ್ಣು, ಕಲ್ಲು ಪತ್ತೆಯಾಗಿದೆ. ಶಸ್ತ್ರಚಿಕಿತ್ಸೆ ಮೂಲಕ ಗಾಯದ ಒಳಗಿದ್ದ 14 ಕಲ್ಲು ತುಂಡುಗಳನ್ನು ವೈದ್ಯರು ಹೊರತೆಗೆದಿದ್ದಾರೆ. ಆಸ್ಪತ್ರೆ ಸಿಬ್ಬಂದಿಗಳ ಎಡವಟ್ಟಿಗೆ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಕೆರೆಯಲ್ಲಿ ಈಜಲು ಹೋಗಿ ಯುವಕ ನೀರುಪಾಲು
ತುಮಕೂರು: ಕೆರೆಯಲ್ಲಿ ಈಜಲು ಹೋಗಿ ಯುವಕ ನೀರುಪಾಲಾದಂತಹ ಘಟನೆ ಜಿಲ್ಲೆ ಮಧುಗಿರಿ ತಾಲ್ಲೂಕಿನ ಸಿದ್ದಾಪುರ ಕೆರೆಯಲ್ಲಿ ನಡೆದಿದೆ. ಗುಬ್ಬಿಗೇಟ್ ನಿವಾಸಿ ಆಸೀಫ್(17)ಮೃತ ದುರ್ದೈವಿ. ಮಧುಗಿರಿ ಬಳಿಯಿರುವ ಸಿದ್ದಾಪುರದ ದರ್ಗಾಗೆ ಪೂಜೆ ಸಲ್ಲಿಸಲು ಹೋಗಿದ್ದ ಯುವಕ. ನಾಲ್ಕು ಜನ ಸ್ನೇಹಿತ ರೊಂದಿಗೆ ಕೆರೆಯಲ್ಲಿ ಈಜಲು ಹೊಗಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಮಧುಗಿರಿ ಪೊಲೀಸರು ಭೇಟಿ ನೀಡಿದ್ದಾರೆ. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಸಿಡಿಲು ಬಡಿದು ವ್ಯಕ್ತಿ ಸಾವು
ಕೋಲಾರ: ಸಿಡಿಲು ಬಡಿದು ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮಾಲೂರು ಪಟ್ಟಣದ ಮಾಲೀಕ್ ಲೇಔಟ್ನಲ್ಲಿ ನಡೆದಿದೆ. ಕಟೇರಸೊಣ್ಣಹಳ್ಳಿ ಗ್ರಾಮದ ವೆಂಕಟಸ್ವಾಮಿ(35) ಮೃತ ದುರ್ದೈವಿ. ನಿರ್ಮಾಣ ಹಂತದ ಕಟ್ಟಡದ ಮೇಲೆ ಕೆಲಸ ಮಾಡುವ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಚಾರಣಾಧೀನ ಖೈದಿ ಆಸ್ಪತ್ರೆಯಿಂದ ಪರಾರಿ
ಬಳ್ಳಾರಿ: ವಿಚಾರಣಾಧೀನ ಖೈದಿ ಆಸ್ಪತ್ರೆಯಿಂದ ಪರಾರಿಯಾಗಿರುವಂತಹ ಘಟನೆ ನಡೆದಿದೆ. ಕೊಪ್ಪಳ ಮೂಲದ ಚಂದ್ರಪ್ಪ ಆಸ್ಪತ್ರೆಯಿಂದ ಪರಾರಿಯಾದ ವಿಚಾರಣಾಧೀನ ಖೈದಿ. ಕನ್ನಾ ಕಳವು ಪ್ರಕರಣದಲ್ಲಿ ಜೈಲಿನಲ್ಲಿದ್ದ ಆರೋಪಿ. ಆರೋಗ್ಯದಲ್ಲಿ ಏರುಪೇರಾದ ಪರಿಣಾಮ ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳಿದ್ದ. ವಿಮ್ಸ್ ಆಸ್ಪತ್ರೆಯಿಂದ ಬಳ್ಳಾರಿಯ ಟಾರ್ಮಾ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಬಾತರೂಂಗೆ ಹೋಗಿ ಬರುವುದಾಗಿ ಹೇಳಿ ಖೈದಿ ಪರಾರಿಯಾಗಿದ್ದಾನೆ. ಓಡಿ ಹೋಗಿರುವ ಖೈದಿಗೆ ಪೊಲೀಸರಿಂದ ಶೋಧ ನಡೆಸಲಾಗುತ್ತಿದೆ. ಬಳ್ಳಾರಿ ಕೌಲಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.