ಬೆಂಗಳೂರು: ಕಳ್ಳತನ ಮಾಡಿ 15 ದಿನಗಳಲ್ಲಿ 12 ಸಾವಿರ ಕಿ.ಮೀ ಪ್ರಯಾಣ….!

| Updated By: ರಮೇಶ್ ಬಿ. ಜವಳಗೇರಾ

Updated on: Nov 20, 2024 | 6:18 PM

ಅದೊಂದು ಹದಿಹರೆಯದ ಯುವಕರ ಟೀಮ್. ಒಂದು ಅವರದ್ದೆಲ್ಲಾ ವಯಸ್ಸಿಗೆ ಮೀರಿದ ಪ್ರತಿಭೆ, ಇಪತ್ತೊಂದನೇ ವಯಸ್ಸಿಗೆ ಇಪ್ಪತೈದಕ್ಕು ಹೆಚ್ಚು ಕೇಸ್ ಮಾಡಿದ್ದವರು ಈಗ ಲಾಕ್ ಆಗಿದ್ದಾರೆ. ಮತ್ತೊಂದು ಕಡೆ ಅನರ್ಹ ವ್ಯಕ್ತಿಗಳಿಗೆ ಇಎಸ್ ಐ ಕಾರ್ಡ್ ಮಾಡಿಸಿ ಸರ್ಕಾರಕ್ಕೆ ಕೋಟ್ಯಾಂತರೂ ವಂಚಿಸಿದ್ದ ಗ್ಯಾಂಗ್ ಸಹ ಅರೆಸ್ಟ್ ಆಗಿದೆ.

ಬೆಂಗಳೂರು: ಕಳ್ಳತನ ಮಾಡಿ 15 ದಿನಗಳಲ್ಲಿ 12 ಸಾವಿರ ಕಿ.ಮೀ ಪ್ರಯಾಣ....!
Follow us on

ಬೆಂಗಳೂರು, (ನವೆಂಬರ್ 20): ದೀಪಕ್ ಅಲಿಯಾಸ್ ದೀಪು ಮತ್ತು ಪವನ್ ಅಲಿಯಾಸ್ ತಾತ , ಕೆಲ ತಿಂಗಳ ಹಿಂದೆ ಅಂದ್ರೆ ಅಕ್ಟೋಬರ್ ನಲ್ಲಿ ಮನೆಯ ಮುಂದೆ ನಿಂತಿದ್ದ ಒಂದು ಹೋಂಡಾ ಸಿಟಿ ಕಾರು ಮತ್ತು ಮನೆಯಲ್ಲಿ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ್ರು. ಬಳಿಕ ಪೊಲೀಸರು ಕೇಸ್ ದಾಖಲು ಮಾಡಿಕೊಂಡು ತನಿಖೆ ಶುರು ಮಾಡಿದ್ದರು. ಹೋಟೆಲ್ ಮತ್ತು ಲಾಡ್ಜ್ ನಲ್ಲಿ ಉಳಿದುಕೊಂಡರೆ ಪೊಲೀಸರು ಲಾಕ್ ಮಾಡ್ತಾರೆ ಎಂದು ಪ್ಲಾನ್ ಮಾಡಿದ್ದ ಆರೋಪಿಗಳು ಸುಮಾರು ಹದಿನೈದು ದಿನದಲ್ಲಿ ಹನ್ನೆರಡು ಸಾವಿರ ಕಿಮೀ ಪ್ರಯಾಣ ಮಾಡಿ ಪೊಲೀಸರ ಕೈಗೆ ಸಿಗದಂತೆ ತಿರುಗಿದ್ರಂತೆ. ಕೊನೆಗೆ ವಿದ್ಯಾರಣ್ಯ ಪುರ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಈ ಇಬ್ಬರೂ ಆರೋಪಿಗಳು ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಗಳು. ಇಬ್ಬರಿಗೂ ಇನ್ನೂ ವಯಸ್ಸು ಸುಮಾರು ಇಪತ್ತೊಂದು. ಆದ್ರೆ ಇವರುಗಳ ಮೇಲೆ ಸುಮಾರು ಇಪ್ಪತೈದು ಕೇಸ್ ದಾಖಲಾಗಿದೆ. ಈ ಆರೋಪಿಗಳು ಬೆಂಗಳೂರಿನ ಹಲವಾರು ಏರಿಯಾದಲ್ಲಿ ಸಂಜೆ ಐದು ಗಂಟೆ ಆರು ಗಂಟೆ ಸಮಯದಲ್ಲಿ ರೌಂಡ್ಸ್ ಮಾಡುತಿದ್ರು, ಆಗ ಯಾವ ಯಾವ ಮನೆಗಳು ಲೈಟ್ ಆನ್ ಆಗಿದೆ ಎಂದು ಪರಿಶೀಲನೆ ಮಾಡ್ತಿದ್ರು. ನಂತರ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಬಂದು ಯಾವ ಮನೆಯಲ್ಲಿ ಲೈಟ್ ಆನ್ ಆಗಿಯೇ ಇದೇ ಅಂತಹ ಮನೆಗಳಿಗೆ ನುಗ್ಗಿ ಬೀಗ ಹೊಡೆದು ಚಿನ್ನ ಬೆಳ್ಳಿಯನ್ನು ದೋಚಿತಿದ್ರು. ಇನ್ನೂ ಈ ಆರೋಪಿಗಳ ಬಳಿಯಿಂದ ಸುಮಾರು ಇಪತ್ತನಾಲ್ಕು ಲಕ್ಷ ಮೌಲ್ಯದ ಚಿನ್ನದ ಆಭರಣ , ಎರಡು ಕಾರು. ಆರು ಬೈಕ್ ಮೂರು ಕಜಿ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಈ ಗ್ಯಾಂಗ್ ನ ಮತ್ತೊರ್ವ ನಾಪತ್ತೆಯಾಗಿದ್ದು ಹುಡುಕಾಟ ಮಾಡ್ತಿದ್ದಾರೆ ಪೊಲೀಸರು.

ನಕಲಿ ಇಎಸ್​ಐ ಕಾರ್ಡ್ ಸೃಷ್ಟಿಸಿ ಸರ್ಕಾರಕ್ಕೆ ವಂಚನೆ: ನಾಲ್ವರು ಅರೆಸ್ಟ್​

ಬೆಂಗಳೂರು: ಇ ಎಸ್ ಐ ಮೂಲಕ ಇಪತ್ತೊಂದು ಸಾವಿರಕ್ಕೂ ಕಡಿಮೆ ಸಂಬಳ ಪಡೆಯುವ ಕಾರ್ಮಿಕರ ಆರೋಗ್ಯದ ಚಿಕಿತ್ಸೆಗಾಗಿ ಸರ್ಕಾರ ರೂಪಿಸಿರುವ ಯೋಜನೆ . ಆದ್ರೆ ಬೆಂಗಳೂರಿನಲ್ಲಿ ಅರ್ಹ ರಲ್ಲದವರಿಗೆ ಇ ಎಸ್ ಐ ಕಾರ್ಡ್ ಅನ್ನು ಮಾಡಿಸಿಕೊಟ್ಟು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದ ಆರು ಜನರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ . ಪ್ರಮುಖವಾಗಿ ರಾರಾಜಿನಗರದ ಇ ಎಸ್ ಐ ಆಸ್ಪತ್ರಯ ಸೆಕ್ಯುರಿಟಿ ಗಾರ್ಡ್ ಶ್ರೀಧರ್ ಮತ್ತು ಆತನಿಗೆ ಸಹಾಯ ಮಾಡಿದ್ದ ರಮೇಶ್ ಶಿವಲಿಂಗು ಶ್ವೇತ ಸೇರಿ ಒಟ್ಟು ಆರು ಜನರನ್ನು ಅರೆಸ್ಟ್ ಮಾಡಲಾಗಿದೆ. ಈ ಗ್ಯಾಂಗ್ ಹಲವಾರು ನಕಲಿ ಕಂಪನಿಗಳ ದಾಖಲಾತಿಗಳ್ನು ಸೃಷ್ಟಿ ಮಾಡಿಕೊಂಡು ನಂತ್ರ ಅದೇ ದಾಖಲೆಗಳನ್ನು ಬಳಸಿಕೊಂಡು ನಕಲಿ ಇ ಎಸ್ ಐ ಕಾರ್ಡ್ ಮಾಡಿಕೊಟ್ಟಿದ್ದಾರೆ.

ಈ ಗ್ಯಾಂಗ್ ಇದುವರೆಗೆ ಒಟ್ಟು 850ಕ್ಕು ಹೆಚ್ಚು ಕಾರ್ಡ್ ಮಾಡಿಕೊಟ್ಟಿದೆ, ಒಂದು ಕಾರ್ಡ್ ಮಾಡಲು ಇಪತ್ತರಿಂದ ಮೂವತ್ತು ಸಾವಿರ ಹಣ ಪಡೆದಿದ್ದಾರೆ ಜೊತೆಗೆ ಪ್ರತಿ ತಿಂಗಳು ಸಹ ಐದುನೂರು ಹಣ ಪಡೆದಿದ್ದಾರೆ. ಜೊತೆಗೆ ಇವರು ಗಳು ಕಾರ್ಡ್ ಮಾಡಿ ಇಎಸ್ ಐ ಸೌಲಭ್ಯ ಕೊಡಿಸುತ್ತಿರುವ ಕಾರಣ ನಿಜವಾದ ಫಲಾನುಭವಿಗಳಿಗೆ ಲಾಭ ಪಡೆಯಲು ಸಾದ್ಗವಾಗಿ ಜೊತಗೆ ಈ ಗ್ಯಾಂಗ್ ನ ಹಣದ ಆಸೆಯಿಂದ ಸರ್ಕಾರಕ್ಕೆ ಕೋಟ್ಯಾಂತರ ರೂ ಮೋಸವಾಗಿರುವುದು ಬೆಳಕಿಗೆ ಬಂದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.