ವಾಯುವಿಹಾರಕ್ಕೆಂದು ಬಂದಿದ್ದ ಅಜ್ಜಿಯ ಮೇಲೆ ಹರಿದ ಟಿಪ್ಪರ; ಕೊಪ್ಪಳದಲ್ಲೊಂದು ಭೀಕರ ಅಪಘಾತ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 20, 2022 | 11:38 AM

ಹಳೇ ದ್ವೇಷದ ಹಿನ್ನಲೆಯಲ್ಲಿ ಯುವಕನನ್ನ ಮರ್ಡರ್ ಮಾಡಿರುವಂತಹ ಘಟನೆ ನಡೆದಿದೆ. ಟಿಪ್ಪು ನಗರದ ವಾಸಿ ಚಿಕೃಲ್ಲಾ ಖಾನ್ ( 28) ಕೊಲೆಯಾದ ಯುವಕ. ಮಾರಕಾಸ್ತ್ರಗಳಿಂದ ಆರು ಜನರ ಗುಂಪ್ಪೊಂದು ದಾಳಿ ಮಾಡಿ ಕೃತ್ಯವೆಸಗಿದ್ದಾರೆ.

ವಾಯುವಿಹಾರಕ್ಕೆಂದು ಬಂದಿದ್ದ ಅಜ್ಜಿಯ ಮೇಲೆ ಹರಿದ ಟಿಪ್ಪರ; ಕೊಪ್ಪಳದಲ್ಲೊಂದು ಭೀಕರ ಅಪಘಾತ
ಟಿಪ್ಪರ ಹರಿದು ಮೃತಪಟ್ಟ ಅಜ್ಜಿ
Follow us on

ಕೊಪ್ಪಳ: ಅಜ್ಜಿಯ ಮೇಲೆ ಟಿಪ್ಪರ (Tipper)  ಹರಿದು ಸಾವನ್ನಪ್ಪಿರುವಂತಹ ಭೀಕರ ಅಪಘಾತ ಸಂಭವಿಸಿದೆ. ಜಿಲ್ಲೆಯ ಬನ್ನಿಕಟ್ಟಿ ಏರಿಯಾ ಸಮೀಪ ಘಟನೆ ನಡೆದಿದೆ. ಅಪಘಾತದಲ್ಲಿ ಸುಸೀಲಮ್ಮ (65) ಮೃತಟ್ಟಿದ್ದಾರೆ. ತಾಯಿ ಅಪಘಾತ ಕಂಡು ಮಗ ಸದಾಶಿವ ಕಣ್ಣೀರಿಟ್ಟಿದ್ದಾರೆ. ಸದಾಶೀವ ಜಿಲ್ಲಾ ಆಸ್ಪತ್ರೆಯ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳಿಗ್ಗೆ ವಾಯುವಿಹಾರಕ್ಕೆಂದು ಸುಸಿಲಮ್ಮ ಬಂದಿದ್ದರು. ಇದೇ ವೇಳೆ ಕಾಂಕ್ರೀಟ್ ತುಂಬಿಕೊಂಡು  ಟಿಪ್ಪರ್ ಬಂದಿದೆ. ಕೆಎ 27 ಎ 8983 ನಂಬರ್​​ನ ಟಿಪ್ಪರ್ನ ಚಕ್ರದ ಕೆಳಗೆ ಸಿಲುಕಿ ಅಜ್ಜಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕೊಪ್ಪಳದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೇ ದ್ವೇಷ ಹಿನ್ನಲೆ ಯುವಕನ ಮರ್ಡರ್:

ಶಿವಮೊಗ್ಗ: ಹಳೇ ದ್ವೇಷದ ಹಿನ್ನಲೆಯಲ್ಲಿ ಯುವಕನನ್ನ ಮರ್ಡರ್ ಮಾಡಿರುವಂತಹ ಘಟನೆ ನಡೆದಿದೆ. ಟಿಪ್ಪು ನಗರದ ವಾಸಿ ಚಿಕೃಲ್ಲಾ ಖಾನ್ ( 28) ಕೊಲೆಯಾದ ಯುವಕ. ಮಾರಕಾಸ್ತ್ರಗಳಿಂದ ಆರು ಜನರ ಗುಂಪ್ಪೊಂದು ದಾಳಿ ಮಾಡಿ ಕೃತ್ಯವೆಸಗಿದ್ದಾರೆ.  ನಗರದ ಎನ್ ಟಿ ರಸ್ತೆಯ ಫಲಕ್ ಶಾದಿ ಮಹಲ್ ಬಳಿ ನಿನ್ನೆ ತಡ ರಾತ್ರಿ ಘಟನೆ ನಡೆದಿದ್ದು, ಗಾಯಗೊಂಡ ಚಿಕೃಲ್ಲಾ ಖಾನ್ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾನೆ. 6 ಜನ ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಿಲಾಗಿದ್ದು, ನಾಲ್ವರು ಹಂತಕರು ಎಸ್ಕೇಪ್ ಆಗಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಬೀಗ ಹಾಕಿದ ಮನೆಗಳ ಸರಣಿ ಕಳ್ಳತನ:

ವಿಜಯಪುರ: ಬೀಗ ಹಾಕಿದ್ದ ಮನೆಗಳ ಸರಣಿ ಕಳ್ಳತನ ನಡೆದಿರುವಂತಹ ಘಟನೆ ನಡೆದಿದೆ. ಜಿಲ್ಲೆ ಇಂಡಿ ಪಟ್ಟಣದ ಮಹಾಲಕ್ಷ್ಮಿ ನಗರದಲ್ಲಿ ಘಟನೆ ನಡೆದಿದೆ. ಬೀಗ ಹಾಕಿದ್ದ ಮೂರು ಮನೆಗಳಲ್ಲಿ ನಸುಕಿನಜಾವದಲ್ಲಿ ಕಳ್ಳರು ಕೃತ್ಯವೆಸಗಿದ್ದಾರೆ. ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಖದೀಮರು ಪರಾರಿಯಾಗಿದ್ದಾರೆ. ಎಷ್ಟು ಪ್ರಮಾಣದ ಚಿನ್ನಾಭರಣ, ನಗದು ಕಳ್ಳತನವಾಗಿದೆ ಎಂಬ ಮಾಹಿತಿ ಲಭ್ಯವಿಲ್ಲ. ಇಂಡಿ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ಸಂಭವಿಸಿದೆ.

ಇದನ್ನೂ ಓದಿ:

ಕಲರ್​ಫುಲ್​ ಹೂವುಗಳ ಡೂಡಲ್​ ಮೂಲಕ ಪರ್ಷಿಯನ್​ ಹೊಸ ವರ್ಷ ಆಚರಿಸಿದ ಗೂಗಲ್​

ಮಹಿಳೆಯ ಅಂಡಾಶಯದಲ್ಲಿ 10 ಕೆಜಿ ತೂಕದ ಗಡ್ಡೆ, ಅದರ ಮೇಲೆ ಕೂದಲು-ಹಲ್ಲು; ಭಯಾನಕ ಅನುಭವ ಬಿಚ್ಚಿಟ್ಟ ನರ್ಸ್​