ಬೆಂಗಳೂರಲ್ಲಿ ಬಂಧಿತ ಶಂಕಿತ ಉಗ್ರರ ಬಳಿ ಸಿಕ್ಕಿದ್ದು ವಾಕಿಟಾಕಿ ಅಲ್ಲವೇ ಅಲ್ಲಾ! ಇಲ್ಲಿದೆ ಅಸಲಿ ಕಹಾನಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 21, 2023 | 3:56 PM

ಸಿಸಿಬಿ ಪೊಲೀಸರು ಐವರು ಶಂಕಿತ ಉಗ್ರರರನ್ನು ಅರೆಸ್ಟ್ ಮಾಡಿ ಈಗಾಗಲೇ ಮೂರನೇ ದಿನವಾಗಿದೆ. ಪಿಸ್ತೂಲ್ ಸೇರಿ ಹಲವಾರು ವಸ್ತುಗಳು ಸಿಕ್ಕಿವೆ. ಜೊತೆಗೆ 4 ವಾಕಿ ಟಾಕಿಗಳು ಸಹ ಸಿಕ್ಕಿದ್ದು, ಆದರೆ ವಾಕಿ ಟಾಕಿ ಪರಿಶೀಲನೆ ವೇಳೆ ಸ್ಪೋಟಕ ಮಾಹಿತಿ ಹೊರಬಂದಿದೆ. ಸಿಕ್ಕಿರುವ ಗ್ರೆನೇಡ್​​ಗಳ ಕಥೆ ಬೆಚ್ಚಿ ಬೀಳಿಸುವಂತಿದೆ.

ಬೆಂಗಳೂರಲ್ಲಿ ಬಂಧಿತ ಶಂಕಿತ ಉಗ್ರರ ಬಳಿ ಸಿಕ್ಕಿದ್ದು ವಾಕಿಟಾಕಿ ಅಲ್ಲವೇ ಅಲ್ಲಾ! ಇಲ್ಲಿದೆ ಅಸಲಿ ಕಹಾನಿ
ವಶಪಡಿಸಿಕೊಂಡ ವಸ್ತುಗಳು
Follow us on

ಬೆಂಗಳೂರು, ಜುಲೈ 20: ಸಿಸಿಬಿ ಪೊಲೀಸರು ಐವರು ಶಂಕಿತ ಉಗ್ರರರನ್ನು (suspected terrorists) ಅರೆಸ್ಟ್ ಮಾಡಿ ಈಗಾಗಲೇ ಮೂರನೇ ದಿನವಾಗಿದೆ. ಮೊದಲ ದಿನ ಆರೋಪಿಗಳ ಬಳಿ ಪಿಸ್ತೂಲ್ ಸೇರಿ ಹಲವಾರು ವಸ್ತುಗಳು ಸಿಕ್ಕಿದ್ವು ಅದರ ಜೊತೆಗೆ 4 ವಾಕಿ ಟಾಕಿಗಳು ಸಹ ಸಿಕ್ಕಿದ್ದು, ಆದರೆ ವಾಕಿ ಟಾಕಿ ಪರಿಶೀಲನೆ ವೇಳೆ ಸ್ಪೋಟಕ ಮಾಹಿತಿ ಹೊರಬಂದಿದೆ. ಸಿಕ್ಕಿರುವ ಗ್ರೆನೇಡ್​​ಗಳ ಕಥೆ ಬೆಚ್ಚಿ ಬೀಳಿಸುವಂತಿದೆ.

ಈ ಮಾಹಿತಿ ಕೇಳಿದ ಒಂದು ಕ್ಷಣ ಎದೆ ಬಡಿತ ನಿಂತ ಹಾಗೆ ಆಗುತ್ತೆ. ಯಾಕಂದ್ರೆ ಅಷ್ಟು ಭಯಂಕರ, ಒಂದು ವೇಳೆ ಶಂಕಿತರು ಹಾಕಿದ್ದ ಪ್ಲಾನ್ ಏನಾದ್ರು ಕಾರ್ಯರೂಪಕ್ಕೆ ಬಂದುಬಿಟ್ಟಿದ್ದರೆ ಎನ್ನುವುದನ್ನು ಊಹೆ ಮಾಡಿಕೊಳ್ಳುವುದು ಸಹ ಅಸಾಧ್ಯ. ಮೊದಲ ದಿನ ಪೊಲೀಸರ ಪರಿಶೀಲನೆ ವೇಳೆ 45 ಜೀವಂತ ಗುಂಡುಗಳು, ಏಳು ಪಿಸ್ತೂಲ್, ಹದಿನೈದು ಮೊಬೈಲ್, ಇಪತ್ತಕ್ಕೂ ಹೆಚ್ಚು ಸಿಮ್ ಕಾರ್ಡ್ ಮತ್ತು ನಾಲ್ಕು ವಾಕಿಟಾಕಿ ಸಿಕ್ಕಿದ್ವು. ಆದರೆ ಅಸಲಿಗೆ ಪೊಲೀಸರಿಗೆ ಸಿಕ್ಕಿದ್ದು ಅಸಲಿ ವಾಕಿಟಾಕಿಗಳಾ? ಅಷ್ಟಕ್ಕೂ ಈ ವಾಕಿಟಾಕಿಗಳು ಏನಕ್ಕೆ ಬಳಕೆ ಮಾಡಲು ತಂದಿರಬಹುದು. ಇದರ ರೇಂಜ್ ಏನು? ಯಾವ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಿದೆ ಎಂದು ಪರಿಶೀಲನೆ ಮಾಡಿಸಲಿಕ್ಕೆ ಮುಂದಾಗಿದ್ದ ಸಿಸಿಬಿ ಅಕ್ಷರ ಸಹ ಬೆಚ್ಚಿದೆ. ಯಾಕಂದ್ರೆ ಸಿಕ್ಕಿದ್ದ ವಾಕಿ ಟಾಕಿಗಳು ಅಸಲಿಗೆ ವಾಕಿಟಾಕಿ ಅಲ್ಲವೇ ಅಲ್ಲಾ. ಅವರುಗಳು ಮಾಡಿಫೈ ಮಾಡಿದ್ದ ಐಇಡಿ ಬಾಂಬ್ ಸ್ಫೋಟಕ್ಕೆ ಬಳಸುವ ಟ್ರಿಗರ್​ಗಳು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಂಧಿತ ಶಂಕಿತ ಉಗ್ರನ ಮನೆಯಲ್ಲಿ 4 ಗ್ರೆನೇಡ್​ ಪತ್ತೆ, ಸಿಸಿಬಿ ಶಾಕ್

ಮೊದಲಿಗೆ ಪೊಲೀಸರು ವಶಕ್ಕೆ ಪಡೆದು ತಂದಾಗ ಇವುಗಳು ವಾಕಿ ಟಾಕಿಗಳು ಎಂದು ಅಂದು ಕೊಂಡಿದ್ರು, ನೋಡಲಿಕ್ಕೂ ಖಾಸಗಿ ಕಂಪನಿಗಳ ಒಳಗೆ ಬಳಕೆ ಮಾಡುವ ರೀತಿಯ ವಾಕಿಟಾಕಿ ಆಗಿದ್ದವು. ಹೀಗಾಗಿ ಇವುಗಳ ರೇಂಜ್ ಎಷ್ಟು ಎಂದು ಪರಿಶೀಲನೆ ಮಾಡಲಾಗಿದೆ. ಇಲಾಖೆಯಲ್ಲಿ ವಾಕಿಟಾಕಿ ರಿಪೇರಿ ಮಾಡುವ ವಿಭಾಗದ ಅಧಿಕಾರಿಗಳ ಮೂಲಕ ಪರಿಶೀಲನೆ ನಡೆಸಿದಾಗ ಅಸಲಿಯತ್ತು ಬಯಲಾಗಿದೆ. ನೋಡಲಿಕ್ಕೆ ವಾಕಿ ಟಾಕಿಗಳು ಆದರೆ ಇವುಗಳ ವಾಕಿ ಟಾಕಿ ಅಲ್ಲವೇ ಅಲ್ಲಾ.

ಬಾಂಬ್ ಸ್ಪೋಟ ಮಾಡಲಿಕ್ಕೆ ವೈರ್ ಲೆಸ್ ಆಗಿ ಬಳಕೆ ಮಾಡಲಿಲ್ಲೆ ಎಂದು ತಯಾರು ಮಾಡಿಕೊಂಡಿರುವ ಮಾಡಿಫೈಡ್ ಟ್ರಿಗರ್​ಗಳು ಅನ್ನೊದು. ಇದ್ರ ಜೊತಗೆ ಮುಂದಿನ ದಿನಗಳಲ್ಲಿ ಈ ಐವರ ಕಡೆಗೆ ಐಇಡಿ ಬಂದು ಸೇರುವುದು ಇತ್ತು. ಎಲ್ಲವೂ ಬಂದು ಸೇರಿ ಅವ್ರು ಅಂದು ಕೊಂಡತೆ ಆಗಿದ್ರೆ ಬೆಂಗಳೂರು 2008 ರಲ್ಲಿ ಕಂಡಿದ್ದ ಸೀರಿಯಲ್ ಬಾಂಬ್ ಬ್ಲಾಸ್ಟ್ ಅಂತಹ ಭೀಬತ್ಸ ಕೃತ್ಯವನ್ನು ಮತ್ತೆ ನೋಡಬೇಕಾಗುತ್ತಿತೇನೊ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಇತರೆ ಖೈದಿಗಳ ಜತೆ ಉಗ್ರ ನಸೀರ್ ಸಂಪರ್ಕ, ಆಂತರಿಕ ತನಿಖೆಗೆ ಆದೇಶ

ನಿನ್ನೆ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಭದ್ರಪ್ಪ ಲೇಔಟ್​ನಲ್ಲಿ ಇರುವ ಜಾಹಿದ್ ತಬ್ರೇಜ್ ನಿವಾಸದ ರೂಮ್​ನಲ್ಲಿರುವ ಅಲ್ಮೇರದ ಲಾಕರ್ ಒಳಗಿದ್ದ ನಾಲ್ಕು ಜೀವಂತ ಗ್ರೆನೇಡ್​​​ಗಳು ಇತ್ತೀಚೆಗೆ ಬೆಂಗಳೂರು ಸೇರಿದ್ವು, ಅದಕ್ಕೂ ಮೊದಲು ನೆಲಮಂಗಲ ಹೊರವಲಯದ ಅರಣ್ಯ ಪ್ರದೇಶದಲ್ಲಿ ಒಂದು ಕಡೆ ಗುಂಡಿ ತೋಡಿ ಊತಿಡಲಾಗಿತ್ತಂತೆ, ಅಲ್ಲಿ ಎಷ್ಟು ತಿಂಗಳ ಕಾಲ ಇದ್ವು ಅನ್ನೊದು ಈಗ ಗೊತ್ತಿಲ್ಲಾ, ಆದ್ರೆ ಭೂಮಿಯೊಳಗೆ ಊತಿದ್ದ ಹ್ಯಾಂಡ್ ಗ್ರೆನೇಡ್​​ಗಳು ಅಪರಿಚಿತ ವ್ಯಕ್ತಿ ಒರ್ವನ ಮೂಲಕ ಜಾಹಿದ್​​ಗೆ ತಲುಪಿದ್ವು, ಅನ್ನೊದು ಗೊತ್ತಾಗಿದೆ. ಈ ಶಂಕಿತರು ಅದೇನು ಏನು ಪ್ಲಾನ್ ಮಾಡಿ ಹೇಗೆಲ್ಲಾ ಸಾಮಾಗ್ರಿಗಳನ್ನು ಸಂಗ್ರಹ ಮಾಡಿದ್ರು. ಇನ್ನೂ ಏನು ಏನು ಸಂಗ್ರಹಿಸಲಿಕ್ಕೆ ಪ್ಲಾನ್ ಆಗಿತ್ತು ಅನ್ನೊದು ಮುಂದಿನ ತನಿಖೆಯಲ್ಲಿ ಬಯಲಾಗಬೇಕಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.