Bengaluru News: ಅವಧಿ ಮೀರಿದ ದಿನ ಬಳಕೆ ವಸ್ತು ಮಾರಾಟ ಮಾಡುತ್ತಿದ್ದವನ ಬಂಧನ; 50 ಲಕ್ಷ ರೂ. ವಸ್ತುಗಳು ವಶಕ್ಕೆ
ಬೆಂಗಳೂರಿನ ಡಿಜೆ ಹಳ್ಳಿಯ ಶ್ಯಾಂಪುರ ಮುಖ್ಯರಸ್ತೆಯಲ್ಲಿ ಅಂಗಡಿ ಇಟ್ಟಿದ್ದ ಸಿದ್ದಿಕ್ ಅಹಮದ್ ಪಾಷಾ ಎಂಬಾತ ಅವಧಿ ಮೀರಿದ ದಿನ ಬಳಕೆ ವಸ್ತುಗಳ ಮಾರಾಟ ಮಾಡುತ್ತಿದ್ದ. ಇದರ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಅವಧಿ ಮೀರಿದ ದಿನ ಬಳಕೆ ವಸ್ತುಗಳ ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಸಿಸಿಬಿ ಪೊಲೀಸ(CCB Police)ರು ಬಂಧಿಸಿದ್ದಾರೆ. ಡಿಜೆ ಹಳ್ಳಿ(DJ Halli)ಯ ಶ್ಯಾಂಪುರ ಮುಖ್ಯರಸ್ತೆಯಲ್ಲಿ ಅಂಗಡಿ ಇಟ್ಟಿದ್ದ ಸಿದ್ದಿಕ್ ಅಹಮದ್ ಪಾಷಾ ಬಂಧನಕ್ಕೊಳಗಾದ ಆರೋಪಿ. ಬಂಧಿತನಿಂದ 50 ಲಕ್ಷ ಬೆಲೆಬಾಳುವ ಅವಧಿ ಮೀರಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇತ ತನ್ನ ಅಂಗಡಿಯಲ್ಲಿ ಅವಧಿ ಮೀರಿದ ಆಹಾರ ಮತ್ತು ಮಕ್ಕಳ ಪದಾರ್ಥಗಳನ್ನ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಈ ಕುರಿತು ಖಚಿತ ಮಾಹಿತಿ ತಿಳಿದು ಸಿಸಿಬಿ ಪೊಲೀಸರು ಅಂಗಡಿ ಮೇಲೆ ದಾಳಿ ಮಾಡಿದ್ದರು.
ಸಿಸಿಬಿ ದಾಳಿ ವೇಳೆ ಅಂಗಡಿಯಲ್ಲಿ ಬಾಲ ಕಾರ್ಮಿಕರು ಪತ್ತೆ
ಇನ್ನು ಇತ ಶಿಡ್ಲಘಟ್ಟದ ವೇರ್ಹೌಸ್ನಿಂದ ದಿನ ಬಳಕೆ ಪದಾರ್ಥಗಳಾದ ದಿನಸಿ ಪದಾರ್ಥಗಳು, ಸೋಪು, ತಂಪು ಪಾನೀಯ ಬಿಸ್ಕೇಟ್, ಕೇಕ್ , ಅಡುಗೆ ಎಣ್ಣೆ ಸೇರಿದಂತೆ ಸೌಂದರ್ಯ ವರ್ಧಕಗಳನ್ನ ತಂದು ಮಾರಾಟ ಮಾಡುತ್ತಿದ್ದ. ಇನ್ನು ಆಸಾಮಿ, ನಿಗದಿತ ಬೆಲೆಗೆ 10 ಪರ್ಸೆಂಟ್ ಹಣ ನೀಡಿ ಸರಕು ಖರೀದಿಸುತ್ತಿದ್ದ. ಇದರಿಂದ ಗ್ರಾಹಕರಿಗಾಗುವ ತೊಂದರೆಯ ಅರಿವೇ ಇಲ್ಲದೆ ಮಾರಾಟ ಮಾಡುತ್ತಿದ್ದ ಆರೋಪಿ ವಿರುದ್ಧ ಇದೀಗ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಪೊಲೀಸ್ ಇನ್ಸ್ಪೆಕ್ಟರ್ ಹೆಸರಿನಲ್ಲಿ ನಕಲಿ ಖಾತೆ ತೆರೆದ ಕಿರಾತಕರು, ಹಣ ವಸೂಲಿಗೆ ಯತ್ನ
ನಂದಿನಿ ಲೇಔಟ್ ಪೊಲೀಸರಿಂದ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿ ಅರೆಸ್ಟ್
ಬೆಂಗಳೂರು: ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಚಂದ್ರಕಾಂತ್ ಅಲಿಯಾಸ್ ಗುಂಡಾ ಬಂಧಿತ ಆರೋಪಿ. ಬಂಧಿತನಿಂದ 13 ದ್ವಿಚಕ್ರ ವಾಹನ, ಒಂದು ಆಟೋವನ್ನ ಸೇರಿ ಬರೊಬ್ಬರಿ 8.5ಲಕ್ಷ ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಈ ಆರೋಪಿಯ ಬಂಧನದಿಂದ 14 ಪ್ರಕರಣ ಪತ್ತಯಾಗಿದೆ. ನಂದಿನಿ ಲೇಔಟ್, ವಿಜಯನಗರ, ಹೆಬ್ಬಾಳ, ಬಾಗಲಗುಂಟೆ ಸೇರಿದಂತೆ ಎಂಟಕ್ಕೂ ಹೆಚ್ಚು ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಇತ ಈ ಮುಂಚೆ ಜೈಲಿಗೆ ಹೋಗಿ ಬಂದಿದ್ದ. ಹೊರ ಬಂದು ಮತ್ತೆ ಕಳ್ಳತನಕ್ಕೆ ಮುಂದಾಗಿದ್ದ ಇತನನ್ನ ಸದ್ಯ ಪೊಲೀಸರು ಬಂಧಿಸಿದ್ದಾರೆ.
ನಗರದಲ್ಲಿ ಸರಗಳ್ಳತನ ಮಾಡ್ತಿದ್ದ ಕುಖ್ಯಾತ ಕಳ್ಳರ ಬಂಧನ
ಬೆಂಗಳೂರು: ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳರನ್ನ ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ರಫೀಕ್, ತೌಫಿಕ್ ಬಂಧಿತ ಆರೋಪಿಗಳು. ಬಂಧಿತರಿಂದ ಮೂರು ಲಕ್ಷ ಮೌಲ್ಯದ 40ಗ್ರಾಂ ಚಿನ್ನದ ಗಟ್ಟಿ ಜಪ್ತಿ ಮಾಡಲಾಗಿದೆ. ಸದ್ಯ ಪೊಲೀಸರು ಆರೋಪಿಗಳನ್ನ ಬಂಧಿಸಿ ಮತ್ತೆ ಜೈಲಿಗೆ ಕಳಿಸಿದ್ದಾರೆ. ಈ ಕುರಿತು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ