Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಮ್ ಕಾರ್ಡ್ ಖರೀದಿಗೆ ನೀವು ನೀಡುವ ದಾಖಲೆಪತ್ರಗಳು ಹೇಗೆಲ್ಲಾ ದುರ್ಬಳಕೆ ಆಗುತ್ತಿವೆ ನೋಡಿ, ಸದ್ಯ ಖದೀಮರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ

pre-activated sims: ಕಾರುಗಳು ಇಲ್ಲಾ... ಡ್ರೈವರ್ ಗಳು ಇಲ್ಲಾ. ಅಸಲಿಗೆ ಟ್ರಿಪ್ ಗಳೂ ಇಲ್ಲಾ! ಆದ್ರೆ ಸಾಫ್ಟ್‌ವೇರ್ ನಲ್ಲಿ ಮಾತ್ರ ಟ್ರಿಪ್ ಮಾಡಿದ ರೀತಿ ಬಿಂಬಿಸಲಾಗುತಿತ್ತು! ಆದರೆ ಕಂಪನಿಗಳು ನೀಡುವ ಇನ್ಸೆಂಟಿವ್ ಪಡೆದು ವಂಚಿಸುತಿದ್ರು.

ಸಿಮ್ ಕಾರ್ಡ್ ಖರೀದಿಗೆ ನೀವು ನೀಡುವ ದಾಖಲೆಪತ್ರಗಳು ಹೇಗೆಲ್ಲಾ ದುರ್ಬಳಕೆ ಆಗುತ್ತಿವೆ ನೋಡಿ, ಸದ್ಯ ಖದೀಮರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ
ಸಿಮ್ ಕಾರ್ಡ್ ಖದೀಮರನ್ನು ಅರೆಸ್ಟ್ ಮಾಡಿರುವ ಸಿಸಿಬಿ ಪೊಲೀಸರು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 06, 2023 | 2:47 PM

ಬೆಂಗಳೂರು: ರಾಜಧಾನಿಯ ಸಿಸಿಬಿ ಪೊಲೀಸರಿಂದ (bangalore ccb police) ಪ್ರೀ ಆಕ್ಟಿವೇಟೆಡ್ ಸಿಮ್ ಕಾರ್ಡ್ (pre-activated sims) ಮೂಲಕ ಕ್ಯಾಬ್ ಆಪರೇಟಿವ್ ಸಂಸ್ಥೆಗಳಿಗೆ ವಂಚಿಸುತಿದ್ದ ಅರೋಪಿಗಳು ಅರೆಸ್ಟ್ ಆಗಿದ್ದಾರೆ. ಅರೋಪಿಗಳಿಂದ 1,055 ಸಿಮ್ ಕಾರ್ಡ್, 15 ಮೊಬೈಲ್, 4 ಲ್ಯಾಪ್ ಟಾಪ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು (miscreants) ಎರಡು ಮಾದರಿಯಲ್ಲಿ ಅಪರಾಧ ಎಸಗುತ್ತಿದ್ದರು. ಒಂದು – ಊಬರ್, ರ್ಯಾಪಿಡೊ ಆ್ಯಪ್​​ಗಳ ಲೂಪ್ ಪತ್ತೆ ಮಾಡಿಕೊಂಡಿದ್ದರು. ವಿವಿಧ ಸಿಮ್ ನಂಬರ್ ಹಾಗೂ ಆ್ಯಪ್​​ ಮೂಲಕ ಫೇಕ್ ರೇಡ್ ಗಳನ್ನು ಮಾಡಿಸುತ್ತಿದ್ದರು. ನಂತ್ರ ದಿನಕ್ಕೆ ಇಂತಿಷ್ಟು ರೇಡ್ ಗಳನ್ನು ಮಾಡಿದ್ರೆ ಇನ್ಸೆಂಟಿವ್ ಪಡೆಯುತಿದ್ರು. ಕಾರುಗಳು ಇಲ್ಲಾ… ಡ್ರೈವರ್ ಗಳು ಇಲ್ಲಾ. ಅಸಲಿಗೆ ಟ್ರಿಪ್ ಗಳೂ ಇಲ್ಲಾ! ಆದ್ರೆ ಸಾಫ್ಟ್‌ವೇರ್ ನಲ್ಲಿ ಮಾತ್ರ ಟ್ರಿಪ್ ಮಾಡಿದ ರೀತಿ ಬಿಂಬಿಸಲಾಗುತಿತ್ತು! ನಂತರ ಕಂಪನಿಗಳು ನೀಡುವ ಇನ್ಸೆಂಟಿವ್ ಗಳನ್ನು ಪಡೆದು ವಂಚಿಸುತಿದ್ರು.

ಇನ್ನು ಎರಡನೆಯ ರೀತಿ ಅಪರಾಧವೆಂದರೆ: ಸಾರ್ವಜನಿಕರು ಸಿಮ್ ಕಾರ್ಡ್ ಕೊಂಡಾಗ ನೀಡಿದ ದಾಖಲಾತಿಗಳನ್ನು ದುರ್ಬಳಕೆ ‌ಮಾಡಿಕೊಳ್ಳುತ್ತಿದ್ದರು. ಸಾರ್ವಜನಿಕರು ನೀಡಿದ ದಾಖಲಾತಿ ಮೂಲಕವೇ ಸಿಮ್ ಖರೀದಿಸುತ್ತಿದ್ದರು. ನಂತರ ಆ ಸಿಮ್ ಗಳನ್ನು ಅಕ್ರಮ ಎಸಗಲು ಬಳಕೆ ಮಾಡ್ತಿದ್ದರು. ಈ ರೀತಿ ಸಾರ್ವಜನಿಕರ ಐಡೆಂಟಿಟಿ ಮಿಸ್ ಯೂಸ್ ಮಾಡಲಾಗುತ್ತಿತ್ತು.

ಇದನ್ನೂ ಓದಿ: ಇದನ್ನೂ ಓದಿ: 40 ಸೆಕೆಂಡ್​ನಲ್ಲಿ 26 ಬಾರಿ ಕೊಚ್ಚಿ ರೌಡಿಶೀಟರ್​ ಬರ್ಬರ ಕೊಲೆ, ಸಿಸಿಟಿವಿಯಲ್ಲಿ ಸೆರೆಯಾಯ್ತು ಸಹಚರರ ಕೃತ್ಯ

ಅರೋಪಿಗಳ ಪೈಕಿ ಒರ್ವ ಫೈನಾನ್ಸ್ ಆಫೀಸ್ ನಲ್ಲಿ ಕೆಲಸ ಮಾಡ್ತಿದ್ದ… ಆತ ಹಾಗೂ ವೋಡಫೋನ್ (WI) ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಗಳು ದಾಖಲಾತಿ ಸಂಗ್ರಹಿಸಿ ಸಿಮ್ ಖರೀದಿ ಮಾಡ್ತಿದ್ರು.

ಬಂಧಿತ ಆರೋಪಿಗಳು: 1. ಮನೋಜ್ ಕುಮಾರ್ – ಟ್ರಾವಲ್ಸ್ ಕಂಪನಿಗೆ ಕಾರುಗಳು ಅಟ್ಯಾಚ್ ಮಾಡಿದ್ದ ಅರೋಪಿ, 2. ಸಚಿನ್ – ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿ ಮತ್ತು, 3. ಶಂಕರ್ – ಸಿಮ್ ಕಾರ್ಡ್ ಕಂಪನಿಯಲ್ಲಿ ಕೆಲಸ ಮಾಡಿ ಪ್ರೀ ಆಕ್ಟಿವ್ ಸಿಮ್ ನೀಡ್ತಿದ್ದವ

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:46 pm, Tue, 6 June 23

ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್