ಮೋಸ್ಟ್ ವಾಂಟೆಡ್ ಆಯ್ತಾ ಕರ್ನಾಟಕ? ಸರ್ವ ಜನಾಂಗದ ಶಾಂತಿಯ ತೋಟದ ಮೇಲೇಕೆ ಉಗ್ರರ ಕಣ್ಣು‌‌?

ಉಗ್ರರರ ಮೋಸ್ಟ್ ವಾಂಟೆಡ್ ಆಯ್ತಾ ಕರ್ನಾಟಕ? ಎಲ್ಲ ಉಗ್ರ ಸಂಘಟನೆಗಳು ಕರ್ನಾಟಕವನ್ನೇ ಟಾರ್ಗೇಟ್ ಮಾಡಿವೆಯಾ? ಸರ್ವ ಜನಾಂಗದ ಶಾಂತಿಯ ತೋಟದ ಮೇಲೆ ಯಾಕೆ ಉಗ್ರರ ಕಣ್ಣು‌‌‌‌?

ಮೋಸ್ಟ್ ವಾಂಟೆಡ್ ಆಯ್ತಾ ಕರ್ನಾಟಕ? ಸರ್ವ ಜನಾಂಗದ ಶಾಂತಿಯ ತೋಟದ ಮೇಲೇಕೆ ಉಗ್ರರ ಕಣ್ಣು‌‌?
ಸಾಂದರ್ಭಿಕ ಚಿತ್ರ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Jul 21, 2023 | 12:30 PM

ಬೆಂಗಳೂರು, (ಜುಲೈ 21): ಬೆಂಗಳೂರನ್ನೇ(Bengaluru) ಛಿದ್ರ ಮಾಡಲು ಹೊಂಚು ಹಾಕಿದ್ದ ಗ್ಯಾಂಗ್ ಅದು. ಆದ್ರೆ ಅದೃಷ್ಟವಶಾತ್ ರಕ್ತದೋಕುಳಿ ಸ್ವಲ್ಪದರಲ್ಲೇ ತಪ್ಪಿಹೋಗಿದೆ. ಐವರು ಶಂಕಿತ ಉಗ್ರರು (suspected terrorists)ಸಿಕ್ಕಿಬಿದ್ದಿದ್ದು, ಭಾರೀ ವಿಧ್ವಂಸಕ ಕೃತ್ಯ ಜಸ್ಟ್‌ ಮಿಸ್‌ ಆಗಿದೆ. ಆದ್ರೆ, ಶಂಕಿತ ಉಗ್ರರ ಹೆಜ್ಜೆಜಾಡು ಬೆನ್ನತ್ತಿ ಹೋಗುತ್ತಿರುವ ಪೊಲೀಸರಿಗೆ ಇದರ ನಂಟು ರಾಜ್ಯದ ಉದ್ದಗಲಕ್ಕೂ ಚಾಚಿರುವ ಮಾಹಿತಿ ಲಭ್ಯವಾಗಿದೆ. ಇದಕ್ಕೆ ಪೂರಕವೆಂಬಂತೆ ಚಿಕ್ಕಮಗಳೂರು ಮೂಲದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಎಂಟು ತಿಂಗಳ ಅವಧಿಯಲ್ಲಿ ಕರ್ನಾಟಕ(Karnataka) ಎರಡು ಮೇಜರ್ ಟೆರರ್ ಅಟ್ಯಾಕ್ ತಪ್ಪಿಸಿಕೊಂಡಿದೆ.

ಇದನ್ನೂ ಓದಿ: 2008ರ ಬೆಂಗಳೂರು ಸರಣಿ ಸ್ಪೋಟದ ರುವಾರಿ ನಾಸೀರ್​ನ ಮತ್ತೊಂದು ಸಂಚು ಬಯಲು

ಕಳೆದ ವರ್ಷ ನವೆಂಬರ್ ನಲ್ಲಿ ಮಂಗಳೂರಿನಲ್ಲಿ ಆಕಸ್ಮಿಕವಾಗಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿತ್ತು. ನಿಗದಿತ ಸ್ಥಳ ತಲಪುವ ಮುನ್ನವೇ ಕುಕ್ಕರ್ ಬ್ಲಾಸ್ಟ್ ಆಗಿತ್ತು. ಈ ವೇಳೆ ಐಸಿಸ್ ಸಂಘಟನೆಯ ಕೈವಾಡ ಪತ್ತೆಯಾಗಿತ್ತು. ಈಗ ಬೆಂಗಳೂರಿನಲ್ಲಿ ಗ್ರೆನೇಡ್ ಗಳ ಸಮೇತ ಶಂಕಿತ ಉಗ್ರರು ಪತ್ತೆಯಾಗಿದ್ದು, ಲಷ್ಕರ್ ಇ ತೋಯ್ಬಾ, ಸಿಮಿ ಸಂಘಟನೆ, ಜಮಾತ್ ಇ. ಇಸ್ಲಾಮಿಯ ಸಂಘಟನೆಗಳ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಉಗ್ರರರ ಮೋಸ್ಟ್ ವಾಂಟೆಡ್ ಆಯ್ತಾ ಕರ್ನಾಟಕ.? ಕರ್ನಾಟಕ ಉಗ್ರರರ ಟಾರ್ಗೇಟ್ ಆಗಲು ಪ್ರಮುಖ ಕಾರಣಗಳು ಏನು? ಸರ್ವ ಜನಾಂಗದ ಶಾಂತಿಯ ತೋಟದ ಮೇಲೆ ಯಾಕೆ ಉಗ್ರರ ಕಣ್ಣು‌‌‌‌? ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.

ಕರ್ನಾಟಕ ಉಗ್ರರರ ಟಾರ್ಗೇಟ್ ಆಗಲು ಪ್ರಮುಖ ಕಾರಣಗಳು ಏನು?

  •  ಅತಿ ಹೆಚ್ಚು ಜಿ ಎಸ್ ಟಿ ಪೇ ಮಾಡುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಇದರಿಂದ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಬಹುದು
  • ಬೆಂಗಳೂರಿಗೆ ವಿಶ್ವ ಮಾನ್ಯತೆ ಇದೆ. ಇಲ್ಲಿ ಏನಾದ್ರು ಆದ್ರೆ ಇಡೀ ವಿಶ್ವಕ್ಕೆ ಗೊತ್ತಾಗುತ್ತೆ
  • ಕರ್ನಾಟಕ ಹೆಚ್ಚು ಬಂಡವಾಳ ಹೂಡಿಕೆ ಆಕರ್ಷಿಸುವ ರಾಜ್ಯಗಳಲ್ಲಿ ಒಂದು
  • ಇಲ್ಲಿ ಯಾವುದೇ ರೀತಿಯ ಕೋಮು ಗಲಭೆಗಳು ಇಲ್ಲ
  • ಮೊದಲು ಮುಂಬೈನ ಟಾರ್ಗೇಟ್ ಮಾಡುತ್ತಿದ್ದರು. 2008 ರ ಬಳಿಕ ಅಲ್ಲಿ ಸಾಕಷ್ಟು ಅಲರ್ಟ್ ಇದೆ.
  • ಕರ್ನಾಟಕದಲ್ಲಿ ATS ಇಲ್ಲ
  •  ಹೀಗಾಗಿ ಇಲ್ಲಿ ದಾಳಿ ಸಂಯೋಜಿಸೋದು ಸುಲಭ
  • ಹಾಗೂ ಎಫೆಕ್ಟ್ ತುಂಬಾ ದೊಡ್ಡ ಮಟ್ಟದಲ್ಲಿ ಆಗುತ್ತೆ

ಹೀಗೆ ಹಲವು ಕಾರಣಗಳಿದ್ದು, ಸದ್ಯ ತನಿಖಾಧಿಕಾರಿಗಳಿಗೆ ಟಾರ್ಗೇಟ್ ಹಿಂದಿನ ಕಾರಣಗಳು ದೊಡ್ಡ ಸವಾಲಾಗಿವೆ. ಇದಕ್ಕೆ ಉತ್ತರ ಕಂಡುಕೊಳ್ಳುವಲ್ಲಿ ತನಿಖಾ ಸಂಸ್ಥೆಗಳಿಂದ ಸರ್ವ ಪ್ರಯತ್ನಗಳು ಸಹ ನಡೆದಿವೆ.

ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಉಗ್ರರು ಹೊಂಚುಹಾಕಿದ್ರು ಎನ್ನುವ ವಿಷಯ ಗೊತ್ತಾಗುತ್ತಿದ್ದಂತೆಯೇಎಲ್ಲೆಡೆ ಹೈ ಅಲರ್ಟ್ ಕೈಗೊಳ್ಳಲಾಗಿದೆ. ಮೈಸೂರಿನಲ್ಲೂ ಬಿಗಿಭದ್ರತೆ ಕೈಗೊಳ್ಳಲಾಗಿದ್ದು, ನಿನ್ನೆ ಮೈಸೂರಿನ ಅರಮನೆ ಪ್ರಾಂಗಣದಲ್ಲಿ ಪೊಲೀಸರು ತಪಾಸಣೆ ನಡೆಸಿದ್ರು. ಪ್ರವಾಸಿಗರು ಆಗಮಿಸುವ, ನಿರ್ಗಮಿಸುವ ಸ್ಥಳಗಳಲ್ಲಿ ಶ್ವಾನದಳ, ಸ್ಫೋಟಕ ಪತ್ತೆ ದಳದಿಂದ ಪರಿಶೀಲಿಸಿದ್ರು.

ಗೇಟ್​ ಬಿದ್ದು ಮಗು ಸಾವು ಕೇಸ್:​ ಈ ಬಗ್ಗೆ ತನಿಖೆ ಮಾಡ್ತೇವೆ ಎಂದ ದಿನೇಶ್
ಗೇಟ್​ ಬಿದ್ದು ಮಗು ಸಾವು ಕೇಸ್:​ ಈ ಬಗ್ಗೆ ತನಿಖೆ ಮಾಡ್ತೇವೆ ಎಂದ ದಿನೇಶ್
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ