ಅನೈತಿಕ ಸಂಬಂಧ ಪ್ರಶ್ನಿಸಿದ್ದ ಗಂಡನನ್ನೇ ಮುಗಿಸಿದ ಪತ್ನಿ, ಪೊಲೀಸ್ ವಿಚಾರಣೆ ವೇಳೆ ಪ್ರಿಯಾಕರನನ್ನು ತಮ್ಮ ಅಂದಳು

TV9kannada Web Team

TV9kannada Web Team | Edited By: Ramesh B Jawalagera

Updated on: Nov 30, 2022 | 7:09 PM

ಮಹಿಳೆಯೊಬ್ಬಳು ಪ್ರಿಯಕರನ ಮೋಹಕ್ಕೆ ಒಳಗಾಗಿ ಕಟ್ಟಿಕೊಂಡ ಗಂಡನನ್ನೇ ಹತ್ಯೆ ಮಾಡಿದ್ದಾಳೆ. ಬಳಿಕ ದೃಶ್ಯ-2 ಸಿನಿಮಾ ರೀತಿಯಲ್ಲಿ ಕೊಲೆ ಸಾಕ್ಷ್ಯಧಾರಗಳು ಸುಳಿವು ಸಿಗದಂತೆ ಮಾಡಿದ್ದ ಮಾಯಾಂಗನೆಯ ನವರಂಗಿಯಾಟವನ್ನು ಮೊಬೈಲ್ ಹಿಡಿದುಕೊಟ್ಟಿದೆ.

ಅನೈತಿಕ ಸಂಬಂಧ ಪ್ರಶ್ನಿಸಿದ್ದ ಗಂಡನನ್ನೇ ಮುಗಿಸಿದ ಪತ್ನಿ, ಪೊಲೀಸ್ ವಿಚಾರಣೆ ವೇಳೆ ಪ್ರಿಯಾಕರನನ್ನು ತಮ್ಮ ಅಂದಳು
ಕೊಲೆ ಮಾಡಿದ ಆರೋಪಿಗಳು

ಬೆಂಗಳೂರು/ರಾಮನಗರ: ರವಿಚಂದ್ರನ್ ಅಭಿನಯದ ದೃಶ್ಯ-2 ಸಿನಿಮಾದಲ್ಲಿ ಕೊಲೆ ಮಾಡಿ ಸಾಕ್ಷ್ಯಧಾರಗಳು ಸಿಗದಂತೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವ ಸೀನ್ ಇದೆ. ಅದರಂತೆ ಇಲ್ಲೋರ್ವ ಮಹಿಳೆ(Woman) ತನ್ನ ಪ್ರಿಯರನ ಜೊತೆ ಸೇರಿ ಕಟ್ಟಿಕೊಂಡ ಗಂಡನನ್ನೇ ಹತ್ಯೆಗೈದಿದ್ದು (Husband Murder), ಬಳಿಕ ಒಂದೂ ಸುಳಿವು ಸಿಗದಂತೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಾಳೆ. ಬಳಿಕ ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಶಾಕ್ ಆಗಿದ್ದು, ದೃಶ್ಯ -2 ಸಿನಿಮಾ ರೀತಿಯಲ್ಲಿ ಕೊಲೆ ರಹಸ್ಯ ಬಯಲಾಗಿದೆ.

ಇದನ್ನೂ ಓದಿ: ಉಂಡು ಹೋದ..ಚಿನ್ನದ ಒಡವೆ ಕೊಂಡು ಹೋದ: ಮದ್ವೆ ಆಗ್ತೀನಿ ಎಂದು ಬಂದವ ವಿಧವೆ ಬಾಳಲ್ಲಿ ಚೆಲ್ಲಾಟ

ತಾಜಾ ಸುದ್ದಿ

ಮದುವೆಯಾಗಿ ಇಬ್ಬರು ಮಕ್ಕಳು ಇದ್ದರೂ ಸಹ ಜಯಲಕ್ಷ್ಮಿ ಎನ್ನುವ ಮಹಿಳೆ ಬೇರೊಬ್ಬನ ಜೊತೆ ಅನೈತಿಕ ಸಂಬಂಧ(illicit relationship) ಇಟ್ಟುಕೊಂಡಿದ್ದಳು. ಈ ವಿಚಾರಕ್ಕೆ ನವೆಂಬರ್ 26 ರ ರಾತ್ರಿ ಪತಿ ದೇಸೇಗೌಡ ಹಾಗೂ ಜಯಲಕ್ಷ್ಮಿ ನಡುವೆ ಜಗಳವಾಗಿದ್ದು, ಕೊನೆಗೆ ಜಯಲಕ್ಷ್ಮಿ ಪ್ರಿಯಕರನ ಜೊತೆ ಸೇರಿಕೊಂಡು ಬೆಂಗಳೂರಿನ ಚಿಕ್ಕಬಾಣವರ ಬಳಿಯ ಸೋಮಶೆಟ್ಟಿಹಳ್ಳಿ ಗ್ರಾಮದ ಫಾರ್ಮ್ ಹೌಸ್​ನಲ್ಲಿ ಗಂಡನನನ್ನು ಕೊಲೆ ಮಾಡಿದ್ದಾಳೆ.

ಚನ್ನಪಟ್ಟಣ ಬಳಿಯ ಕೃಷ್ಣಪುರದೊಡ್ಡಿಯ ದೇಸೇಗೌಡನನ್ನ ಜಯಲಕ್ಷ್ಮೀ ಮದುವೆಯಾಗಿದ್ದಳು. ಬಳಿಕ ದಂಪತಿ, ಬೆಂಗಳೂರು ಉತ್ತರ ತಾಲೂಕಿನ ಸೋಮಶೆಟ್ಟಿಹಳ್ಳಿಯಲ್ಲಿ ವಾಸವಿದ್ದರು. ಫಾರಂಹೌಸ್​​ನಲ್ಲಿ ಗಂಡ ಕೆಲಸ ಮಾಡ್ತಿದ್ರೆ, ಜಯಲಕ್ಷ್ಮೀ ಗಾರ್ಮೆಂಟ್ಸ್​​ಗೆ ಹೋಗುತ್ತಿದ್ದಳು. ಇಬ್ಬರು ಮಕ್ಕಳೊಟ್ಟಿಗೆ ಜೀವನ ನಡೆಯುತ್ತಿತ್ತು. ಈ ಮಧ್ಯೆ ಜಯಲಕ್ಷ್ಮೀಗೆ ಟೆಕ್ಕಿ ರಾಜೇಶ ಪರಿಚಯವಾಗಿದ್ದು, ನಂತರ ಇಬ್ಬರ ಪರಿಚಯ ಪ್ರಣಯಕ್ಕೆ ತಿರುಗಿತ್ತು.

ಗಂಡ ಇಲ್ಲದಿದ್ದಾಗ ಪ್ರಿಯಕರ ರಾಜೇಶ, ಜಯಲಕ್ಷ್ಮೀ ಮನೆಗೆ ಬಂದು ಹೋಗಿತ್ತಿದ್ದ. ಈ ವಿಚಾರ ಕೆಲವೇ ದಿನಗಳಲ್ಲಿ ದೇಸೇಗೌಡನಿಗೆ ಗೊತ್ತಾಗಿದ್ದು, ಇಬ್ಬರ ನಡುವೆ ಗಲಾಟೆ ಶುರುವಾಗಿತ್ತು.. ನವೆಂಬರ್ 26 ರ ರಾತ್ರಿ ಹೀಗೆಯೇ ಜಗಳ ಆಗಿದೆ. ಪತಿ ಬೈಯುತ್ತಿದ್ದಾಗ ಸೈಲೆಂಟಾಗೇ ಪ್ರಿಯಕರನಿಗೆ ಫೋನ್ ಮಾಡಿದ್ದಾಳೆ. ಫೋನ್​​ನಲ್ಲಿ ದೇಸೇಗೌಡನ ಮಾತು ಕೇಳಿಸಿಕೊಂಡ ರಾಜೇಶ, ಆಗಿಂದಾಗೇ ಅವರ ಮನೆಗೆ ಬಂದಿದ್ದು, ದನದ ಕೊಟ್ಟಿಗೆಯಲ್ಲಿದ್ದ ಹಗ್ಗದಿಂದ ದೇಸೇಗೌಡರ ಕತ್ತು ಬಿಗಿದು ಕೊಂದಿದ್ದಾನೆ. ನಂತರ, ಕಾರಿಗೆ ಶವ ಹಾಕ್ಕೊಂಡು ರಾಮನಗರದ ಹೈವೇ ಪಕ್ಕದ ಚರಂಡಿಗೆ ಎಸೆದಿದ್ದ.

ಕೊಲೆ ನಂತರ ಹಂತಕ ರಾಜೇಶ, ಹತ್ಯೆಗೆ ಬಳಸಿದ್ದ ವಸ್ತುಗಳನ್ನೆಲ್ಲ ಒಂದೊಂದು ಕಡೆ ಎಸೆದಿದ್ದ. ಇತ್ತ, ಜಯಲಕ್ಷ್ಮೀ ಮಾರನೇ ದಿನ ಸೋಲದೇವನಹಳ್ಳಿ ಪೊಲೀಸರಿಗೆ ಪತಿ ನಾಪತ್ತೆ ಎಂದು ದೂರು ದಾಖಲಿಸಿದ್ದಳು. ನೆಂಟರಿಗೆ ಕರೆ ಮಾಡಿ, ನಮ್ಮ ಯಜಮಾನರು ಏನಾದರೂ ಬಂದಿದ್ದಾರಾ ಅಂತ ಕೇಳಿದ್ದಳು. ಆದ್ರೆ, ಪೊಲೀಸರಿಗೆ ಸಂಶಯ ಬಂದು ಕಾಲ್​ ಡಿಟೇಲ್ಸ್ ತೆಗೆದು ನೋಡಿದಾಗ ಜಯಲಕ್ಷ್ಮೀ ನವರಂಗಿಯಾಟ ಬಟಾಬಯಲಾಗಿದೆ.

ಆದರೂ ತನ್ನ ಡ್ರಾಮಾ ಮುಂದುವರಿಸಿದ್ದ ಜಯಲಕ್ಷ್ಮೀ, ರಾಜೇಶನಿಗೆ ಹೆಚ್ಚು ಕಾಲ್ಸ್ ಹೋಗಿದ್ದು, ಯಾರವನು ಎಂದು ಪೊಲೀಸ್ರು ಪ್ರಶ್ನಿಸಿದಾಗ ಆತ ನನ್ನ ತಮ್ಮ ಅಂತ ಹೇಳಿದ್ದಾಳೆ. ರಾಜೇಶ್​ನನ್ನು ಕೇಳಿದ್ರೆ ಆಕೆ ನನ್ನ ಅಕ್ಕ ಎಂದು ಹೇಳಿದ್ದ. ಆದ್ರೆ, ಹೆಚ್ಚಿನ ವಿಚಾರಣೆ ನಡೆಸಿದಾಗ ಸತ್ಯ ಕಕ್ಕಿದ್ದಾರೆ. ಸದ್ಯ ಇದೀಗ ಇಬ್ಬರನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada