ಯುವತಿ ವಿಚಾರಕ್ಕೆ ಕೊಲೆಯಾದ ಯುವಕ; ಇಬ್ಬರು ಶಂಕಿತ ಆರೋಪಿಗಳ ಬಂಧನ

| Updated By: ವಿವೇಕ ಬಿರಾದಾರ

Updated on: Jul 16, 2022 | 2:46 PM

ದಾಬಾ ನಡೆಸುತ್ತಿದ್ದ ಯುವಕ ನಿನ್ನೆ ರಾತ್ರಿ (ಜುಲೈ 15) ಅನುಮಾನಸ್ಪಾದವಾಗಿ ಸಾವನ್ನಪ್ಪಿರುವ ಘಟನೆ ಯಾದಗಿರಿ ತಾಲೂಕಿನ ವರ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಯುವತಿ ವಿಚಾರಕ್ಕೆ ಕೊಲೆಯಾದ ಯುವಕ; ಇಬ್ಬರು ಶಂಕಿತ ಆರೋಪಿಗಳ ಬಂಧನ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಯುವತಿ ವಿಚಾರಕ್ಕೆ ಯುವಕ ಕೊಲೆಯಾಗಿರುವ ಘಟನೆ ಬೆಂಗಳೂರಿನ ಹಳೆ ಮದ್ರಾಸ್ ರಸ್ತೆಯ ನ್ಯೂ ಬೈಯ್ಯಪ್ಪನಹಳ್ಳಿಯಲ್ಲಿ ನಡೆದಿದೆ. ಪ್ರಜ್ವಲ್ (18) ಕೊಲೆಯಾದ ಯುವಕ. ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಇಬ್ಬರು ಶಂಕಿತ ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ದಾಬಾ ನಡೆಸುತ್ತಿದ್ದ ಯುವಕ ಅನುಮಾನಸ್ಪಾದವಾಗಿ ಸಾವು; ಕೊಲೆ ಶಂಕೆ

ಯಾದಗಿರಿ: ದಾಬಾ ನಡೆಸುತ್ತಿದ್ದ ಯುವಕ ನಿನ್ನೆ ರಾತ್ರಿ (ಜುಲೈ 15) ಅನುಮಾನಸ್ಪಾದವಾಗಿ ಸಾವನ್ನಪ್ಪಿರುವ ಘಟನೆ ಯಾದಗಿರಿ (Yadgiri) ತಾಲೂಕಿನ ವರ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. 20 ವರ್ಷದ ತಾಯಪ್ಪ ಮೃತ ಯುವಕ. ಯುವಕನ ಕುಟುಂಬಸ್ಥರು ಕೊಲೆ (Murder) ಅಂತ‌ ಆರೋಪಿಸುತ್ತಿದ್ದಾರೆ. ಮೃತ ತಾಯಪ್ಪ ತನ್ನ ಸಹೋದರ ಮಾವನ ಜೊತೆ ಸೇರಿ ದಾಬಾ ನಡೆಸುತ್ತಿದ್ದನು. ನಿನ್ನೆ (ಜುಲೈ 15) ಇಬ್ಬರು ಯುವಕರು ದಾಬಾಗೆ ಊಟ ಮಾಡಲು ಬಂದಿದ್ದರು. ಕುಡಿದ ಮತ್ತಿನಲ್ಲಿದ್ದ ಯುವಕರು ಊಟ ಮಾಡಿ ಬಿಲ್ ಕೊಡುವ ವಿಚಾರಕ್ಕೆ ಜಗಳ‌ ತೆಗೆದಿದ್ದಾರೆ.

ಈ ವೇಳೆ ಇಬ್ಬರು ಯುವಕರು ತಾಯಪ್ಪನ ಬಲ ಭಾಗದ ಕಿವಿಗೆ ಹೊಡೆದು ಕೊಲೆ‌ ಮಾಡಿರುವ ಆರೋಪ ಕೇಳಿಬರುತ್ತಿದೆ. ರವಿ ಮತ್ತು ಮಲ್ಲು ಶಂಕಿತ ಆರೋಪಿಗಳು ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಯಾದಗಿರಿ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಗ್ರಾಮಾಂತರ ಠಾಣೆಯಲ್ಲಿ ಇಬ್ಬರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ದೂದ್​ಗಂಗಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ವ್ಯಕ್ತಿ ಸಾವು

ಬೆಳಗಾವಿ: ದೂದ್​ಗಂಗಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ  ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮಾಂಗೂರು ಗ್ರಾಮದ ದೂದಗಂಗಾ ನದಿಯ ಹಿನ್ನೀರಿನಲ್ಲಿ ನಡೆದಿದೆ. ಶಿವಾಜಿ ಕೊರವಿ(55) ಸಾವನ್ನಪ್ಪಿದ್ದ ವ್ಯಕ್ತಿ. ಪೊಲೀಸರು ಸ್ಥಳೀಯರ ಸಹಾಯದಿಂದ ಶಿವಾಜಿ ಶವ ಹೊರತೆಗೆದಿದ್ದಾರೆ. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನಿನ್ನೆಯಷ್ಟೇ (ಜುಲೈ 15) ನಿಪ್ಪಾಣಿ ತಾಲೂಕಿನ ಸದಲಗಾ – ಬೋರಗಾಂವ ಬಳಿ ಡೆಡ್ಲಿ ಮೀನುಗಾರಿಕೆ ಕುರಿತಂತೆ ಟಿವಿ 9 ವರದಿ ಬಿತ್ತರಿಸಿತ್ತು. ನದಿ ಉಕ್ಕಿಹರಿಯುತ್ತಿದ್ದರು ಮುಂಜಾಗೃತಾ ಕ್ರಮವಿಲ್ಲದೆ ಸೇತುವೆ ತಡೆಗೋಡೆ ಮೇಲೆ ಮೀನು ಹಿಡಿಯುತ್ತಿದ್ದರು. ನದಿ ಪಾತ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದರೂ, ಜಿಲ್ಲಾಡಳಿತ ಸೂಚನೆಗೆ ಜನರು ಕ್ಯಾರೆ ಎನ್ನದೆ ಮೀನು ಹಿಡಿಯುತ್ತಿದ್ದರು.

Published On - 2:39 pm, Sat, 16 July 22