ಬೆದರಿಕೆ ಒಡ್ಡಿ ದಂಪತಿಗಳ ಬಳಿಯಿಂದ 150 ಲಕ್ಷ ರೂ. ವಿತ್ ​ಡ್ರಾ ಮಾಡಿಸಿಕೊಂಡ ಆರೋಪಿ

| Updated By: ವಿವೇಕ ಬಿರಾದಾರ

Updated on: Dec 25, 2023 | 10:10 AM

ಪೊಲೀಸ್ ಸೋಗಿನಲ್ಲಿ ಮನೆಗೆ ನುಗ್ಗಿ ಉತ್ತರ ಭಾರತ ಮೂಲದ ದಂಪತಿಗೆ ಬೆದರಿಕೆ ಒಡ್ಡಿ 150 ಲಕ್ಷ ರೂ. ಹಣ ವಸೂಲಿ ಮಾಡಿರುವ ಘಟನೆ ಬೆಂಗಳೂರಿನ ಹೆಚ್​ಎಸ್​ಆರ್ ಲೇಔಟ್​​ನ 3ನೇ ಸೆಕ್ಷಟ್ ಫ್ಲಾಟ್​​ನಲ್ಲಿ ನಡೆದಿದೆ.

ಬೆದರಿಕೆ ಒಡ್ಡಿ ದಂಪತಿಗಳ ಬಳಿಯಿಂದ 150 ಲಕ್ಷ ರೂ. ವಿತ್ ​ಡ್ರಾ ಮಾಡಿಸಿಕೊಂಡ ಆರೋಪಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿಸೆಂಬರ್​ 25: ಪೊಲೀಸರೆಂದು (Police) ದಂಪತಿಯಿಂದ ಹಣ ವಸೂಲಿ ಮಾಡಿರುವ ಘಟನೆ ನಗರದ ಹೆಚ್​ಎಸ್​ಆರ್ ಲೇಔಟ್​​ನ (HSR Layout) 3ನೇ ಸೆಕ್ಷಟ್ ಫ್ಲಾಟ್​​ನಲ್ಲಿ ನಡೆದಿದೆ. ಉತ್ತರ ಭಾರತ ಮೂಲದ ದಂಪತಿಗಳು ವಾಸವಾಗಿದ್ದ ಫ್ಲಾಟ್​​ಗೆ ಡಿಸೆಂಬರ್ 17 ರಂದು ರಾತ್ರಿ 9:30ರ ಸುಮಾರಿಗೆ ಪೊಲೀಸರ ಸೋಗಿನಲ್ಲಿ ಆರೋಪಿ ಬಂದಿದ್ದಾನೆ. ನಂತರ ಮನೆಯಲ್ಲಿ ಗಾಂಜಾ ಇಡುತ್ತೇವೆ ಎಂದು ದಂಪತಿಗೆ ಬೆದರಿಕೆ ಹಾಕಿದ್ದಾನೆ. ಮನೆಯಲ್ಲಿನ ಬೆಲೆಬಾಳುವ ವಸ್ತುಗಳನ್ನು ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾನೆ.

ಬಳಿಕ ಮನೆ ಮಾಲಿಕ ಸಂಜೀವ್ ಭೋರಾ ಅವರನ್ನು ಕರೆದೊಯ್ದು ಎಟಿಎಂಗಳಿಂದ ಹಣ ಡ್ರಾ ಮಾಡಿಸಿದ್ದಾನೆ. ನಂತರ ಮನೆಗೆ ಬಂದು ಎಟಿಎಮ್ ಕಾರ್ಡ್ ಜೊತೆಗೆ ಸಂಜೀವ್ ಭೋರಾ ಅವರ ಪತ್ನಿಯನ್ನು ಕೂಡ ಕರೆದೊಯ್ದು ಸರ್ಜಾಪುರ ರಸ್ತೆ ಬಳಿ ಹಣ ಡ್ರಾ ಮಾಡಿಸಿದ್ದಾನೆ. ಬಳಿಕ ಮಹಿಳೆಯನ್ನು ಆಕೆಯ ಮನೆ ಬಳಿ ಬಿಟ್ಟು ಪರಾರಿಯಾಗಿದ್ದಾರೆ. ಆರೋಪಿ ಒಟ್ಟು 150 ಲಕ್ಷ ರೂ. ಅನ್ನು ಎರಡು ಮೂರು ಎಟಿಎಮ್​ಗಳಿಂದ ಡ್ರಾ ಮಾಡಿಸಿಕೊಂಡಿದ್ದಾನೆ. ಆರೋಪಿ ಬೆಳಗಿನ ಜಾವ 3 ಗಂಟೆವರೆಗೆ ದಂಪತಿ ಮನೆಯಲ್ಲಿ ಸುತ್ತಾಡಿದ್ದಾನೆ.

ಇದನ್ನೂ ಓದಿ: ಗಾಂಜಾ ಪ್ರಕರಣ ಬೇಧಿಸಲು ಹೋದ ಕರ್ನಾಟಕ ಪೊಲೀಸ್​​​ ಒಡಿಶಾದಲ್ಲಿ ಅರೆಸ್ಟ್!

ಘಟನೆ ಎರಡು ಮೂರು ದಿನಗಳ ನಂತರ ನಕಲಿ ಪೊಲೀಸ್ ‌ಎಂದು ಗೊತ್ತಾಗಿದೆ. ಕೂಡಲೆ ಮನೆ ಮಾಲೀಕ ಸಂಜೀವ್ ಭೋರಾ ಡಿಸೆಂಬರ್​ 20 ರಂದು ಹೆಚ್.ಎಸ್.ಆರ್ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಏರಿಯಾದ ಸಿಸಿ ಕ್ಯಾಮೆರಾಗಳನ್ನು ಆಧರಿಸಿ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:00 am, Mon, 25 December 23