Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಇಸ್ಪೀಟ್ ಅಡ್ಡೆ ಮೇಲೆ‌ ಪೊಲೀಸರ ದಾಳಿ; 100ಕ್ಕೂ ಹೆಚ್ಚು ಆರೋಪಿಗಳು ವಶಕ್ಕೆ

ಬೆಂಗಳೂರಿನ ಬಸವೇಶ್ವರನಗರ(Basaveshwaranagara)ದಲ್ಲಿ ಇಸ್ಪೀಟ್​ ಅಡ್ಡೆ(gambling)ಮೇಲೆ ಪೊಲೀಸರು ದಾಳಿ ಮಾಡಿದ್ದು, ಕ್ಲಬ್ ಮಾಲೀಕ ಸೇರಿದಂತೆ 100ಕ್ಕೂ ಹೆಚ್ಚು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಅಡಿಗ ಎಂಬಾತ ನಡೆಸುತ್ತಿದ್ದ ಇಸ್ಪೀಟ್ ಕ್ಲಬ್ ಮೇಲೆ ವಿಜಯನಗರ ಎಸಿಪಿ ಚಂದನ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

ಬೆಂಗಳೂರಿನಲ್ಲಿ ಇಸ್ಪೀಟ್ ಅಡ್ಡೆ ಮೇಲೆ‌ ಪೊಲೀಸರ ದಾಳಿ; 100ಕ್ಕೂ ಹೆಚ್ಚು ಆರೋಪಿಗಳು ವಶಕ್ಕೆ
ಆರೋಪಿ ಬಂಧನ
Follow us
Jagadish PB
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 22, 2023 | 10:34 PM

ಬೆಂಗಳೂರು, ಡಿ.22: ಬೆಂಗಳೂರಿನ ಬಸವೇಶ್ವರನಗರ(Basaveshwaranagara)ದಲ್ಲಿ ಇಸ್ಪೀಟ್​ ಅಡ್ಡೆ(gambling)ಮೇಲೆ ಪೊಲೀಸರು ದಾಳಿ ಮಾಡಿದ್ದು, ಕ್ಲಬ್ ಮಾಲೀಕ ಸೇರಿದಂತೆ 100ಕ್ಕೂ ಹೆಚ್ಚು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಅಡಿಗ ಎಂಬಾತ ನಡೆಸುತ್ತಿದ್ದ ಇಸ್ಪೀಟ್ ಕ್ಲಬ್ ಮೇಲೆ ವಿಜಯನಗರ ಎಸಿಪಿ ಚಂದನ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಇನ್ನು ಈಗಾಗಲೇ ಹಲವು ಬಾರಿ ದಾಳಿ ನಡೆಸಿ, ಎಷ್ಟು ಸಾರಿ ಹೇಳಿದರೂ ಪದೇ ಪದೇ ಓಪನ್ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದಿದ್ದ ಹಿನ್ನಲೆ ಇಂದು ಮತ್ತೆ ರೇಡ್​ ಮಾಡಲಾಗಿದೆ. ಈ ಕುರಿತು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಸ್ತೆಯಲ್ಲೆ‌ ಬೆಂಕಿ ಹತ್ತಿ ಹೊತ್ತಿ ಉರಿದ ಓಮಿನಿ

ಉತ್ತರ ಕನ್ನಡ: ಶಿರಸಿ ತಾಲೂಕಿನ ಬನವಾಸಿ ಬಳಿ ರಸ್ತೆಯಲ್ಲಿಯೇ ಓಮಿನಿ ಹೊತ್ತಿ ಉರಿದ ಘಟನೆ ನಡೆದಿದೆ. ಅದೃಷ್ಟವಶಾತ್ ಚಾಲಕ ಚಿದಾನಂದ ಗಣಪತಿ ನಾಯ್ಕ್​ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂದು(ಡಿ.22) ಶಿರಸಿ ತಾಲೂಕಿನ ಬನವಾಸಿ-ಹರೀಶಿ ಮಾರ್ಗದ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಈ ಕುರಿತು ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ರಾಮನಗರ: ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ, ತಪ್ಪಿಸಿಕೊಳ್ಳುವ ಭರದಲ್ಲಿ ಕೆರೆಗೆ ಬಿದ್ದು ವ್ಯಕ್ತಿ ಸಾವು

ಲಾರಿ ಹರಿದು ಬೈಕ್ ಸವಾರ ಸಾವು

ಚಿಕ್ಕಬಳ್ಳಾಪುರ : ಬೈಕ್ ಮೇಲೆ ಲಾರಿ ಹರಿದ ಪರಿಣಾಮ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಯಣ್ಣಂಗೂರು ಗೇಟ್ ಬಳಿ ನಡೆದಿದೆ. ಅಪಘಾತದಲ್ಲಿ ಸವಾರ ಮೋಹನ್ (21) ಎಂಬುವವರು ಮೃತಪಟ್ಟಿದ್ದು, ಶವವನ್ನ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಇನ್ನು ಲಾರಿ ಚಾಲಕನ ವಿರುದ್ದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ