ನೆಲಮಂಗಲ: ಎರಡು ಇಸ್ಪೀಟ್​ ಗ್ಯಾಂಗ್ ನಡುವೆ ಬಡಿದಾಟ; ಓರ್ವನಿಗೆ ಚಾಕು ಇರಿತ

ಸದ್ಯ ಗಂಭೀರವಾಗಿ ಗಾಯಗೊಂಡ ಪವನ್ ಅಲಿಯಾಸ್​ ಲೈಬನನ್ನು ಹೆಸರಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ.

ನೆಲಮಂಗಲ: ಎರಡು ಇಸ್ಪೀಟ್​ ಗ್ಯಾಂಗ್ ನಡುವೆ ಬಡಿದಾಟ; ಓರ್ವನಿಗೆ ಚಾಕು ಇರಿತ
ಪವನ್(28)
Follow us
TV9 Web
| Updated By: preethi shettigar

Updated on:Mar 16, 2022 | 8:50 PM

ಬೆಂಗಳೂರು: ಎರಡು ಇಸ್ಪೀಟ್​ ಗ್ಯಾಂಗ್ ನಡುವೆ ಗಲಾಟೆಯಾಗಿದ್ದು, ಈ ವೇಳೆ ಓರ್ವನಿಗೆ ಚಾಕುವಿನಿಂದ ಇರಿದಿದ್ದಾರೆ. ಬೆಂಗಳೂರಿನ ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ ಈ ಘಟನೆ ನಡೆದಿದೆ. ಪವನ್(28) ಚಾಕುವಿನಿಂದ ಇರಿತಕ್ಕೊಳಗಾದ ವ್ಯಕ್ತಿ. ಮಲ್ಲಸಂದ್ರ ಕಿಟ್ಟಿ, ಹುರಳಿಚಿಕ್ಕನಹಳ್ಳಿ ಚೇತನ್ ಸೇರಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಏರಿಯಾ ಹಂಚಿಕೆ ಮಾಡಿಕೊಂಡು ಇಸ್ಪೀಟ್ ಆಟ (Ispit card) ಆಡುತ್ತಿದ್ದರು. ಸೋಲದೇವನಹಳ್ಳಿ, ಮಾದನಾಯಕನಹಳ್ಳಿ, ನೆಲಮಂಗಲ, ದೊಡ್ಡಬೆಳವಂಗಲ, ರಾಜಾನುಕುಂಟೆ ಠಾಣೆ ವ್ಯಾಪ್ತಿಯಲ್ಲಿ ಹಂಚಿಕೆ ಮಾಡಲಾಗಿತ್ತು. ಪವನ್ ವ್ಯಾಪ್ತಿ ಮೀರಿ ಇಸ್ಪೀಟ್ ಅಡ್ಡೆ ನಡೆಸುತ್ತಿದ್ದ  ಹೀಗಾಗಿ ಚಾಕುವಿನಿಂದ(Knife) ಹಲ್ಲೆ(Attack) ಮಾಡಲಾಗಿದೆ.

ಸದ್ಯ ಗಂಭೀರವಾಗಿ ಗಾಯಗೊಂಡ ಪವನ್ ಅಲಿಯಾಸ್​ ಲೈಬನನ್ನು ಹೆಸರಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಚಿಕ್ಕಮಗಳೂರು: ಅಪ್ಪ-ಅಮ್ಮನ ಜೊತೆ ಜಗಳವಾಡಿ ತಾವಿದ್ದ ಗುಡಿಸಲಿಗೆ ಬೆಂಕಿ ಹಚ್ಚಿದ ಕಿಡಿಗೇಡಿ

ಕಿಡಿಗೇಡಿಯೊಬ್ಬ ಅಪ್ಪ-ಅಮ್ಮನ ಜೊತೆ ಜಗಳವಾಡಿ ತಾವಿದ್ದ ಗುಡಿಸಲಿಗೆ ಬೆಂಕಿ ಹಚ್ಚಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಂಬೇಕಾಡು ಗ್ರಾಮದಲ್ಲಿ ನಡೆದಿದೆ. ದೇವರಾಜ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಯಾವಾಗಲೂ ಇತರರೊಂದಿಗೆ ಜಗಳ ಮಾಡುತ್ತಿದ್ದ 25 ವರ್ಷದ ಯುವಕ ದೇವರಾಜ್ ನಿನ್ನೆ ರಾತ್ರಿ (ಮಾರ್ಚ್​ 15) ತಂದೆ- ತಾಯಿಯ ಜೊತೆ ಗಲಾಟೆ ಮಾಡಿ, ತನ್ನ ಮನೆಗೆ ಬೆಂಕಿ ಹಚ್ಚಿದ್ದ. ಹೀಗಾಗಿ ವಿಷಯ ತಿಳಿದ ಸ್ಥಳೀಯರು 112 ಪೊಲೀಸ್ ತುರ್ತು ವಾಹನಕ್ಕೆ ಕರೆ ಮಾಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ 112 ವಾಹನ ಚಾಲಕ ತ್ರಿಮೂರ್ತಿ ಮತ್ತು ಪೇದೆ ರಘು ಭೇಟಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸ್ ಜೀಪ್ ಚಾಲಕ ತ್ರಿಮೂರ್ತಿ ಕಾಲಿಗೆ ದೇವರಾಜ್ ಪೆಟ್ರೋಲ್​ ಹಾಕಿ ಬೆಂಕಿ ಹಚ್ಚಿದ್ದಾನೆ.

ತಕ್ಷಣ ನುಗ್ಗಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಹಾಗೂ ಶೃಂಗೇರಿ ಕ್ಷೇತ್ರದ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಹೆಚ್. ಆರ್. ಜಗದೀಶ್ ಧಾವಿಸಿ, ಪೊಲೀಸ್ ಸಿಬ್ಬಂದಿ ತ್ರಿಮೂರ್ತಿ ರಕ್ಷಣೆ ಮಾಡಿದ್ದಾರೆ. ಬಳಿಕ 112 ವಾಹನವನ್ನು ಸ್ವತಃ ಚಲಾಯಿಸಿ ಗಾಯಾಳುವನ್ನು ಅದರಲ್ಲಿಯೇ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆ ಬಳಿಕ ದೇವರಾಜ್ ನನ್ನ ಹಿಡಿದು ಸ್ಥಳೀಯರು ಮರಕ್ಕೆ ಕಟ್ಟಿಹಾಕಿದ್ದಾರೆ.

ಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಕೊಪ್ಪ ಠಾಣಾಧಿಕಾರಿ ಶ್ರೀನಾಥ್ ರೆಡ್ಡಿಯವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ:

ನರ್ಸ್ ಸಮವಸ್ತ್ರದಲ್ಲಿ ಬಂದು ನವಜಾತ ಶಿಶು ಅಪಹರಣ; ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡುಮಗು ಕಳ್ಳತನ!

ಅದ್ದೂರಿ ಮದುವೆಯಾಗಲು ಬ್ಯಾಂಕ್​ನಲ್ಲಿ ಕೋಟ್ಯಂತರ ರೂ. ಕಳ್ಳತನ ಮಾಡಿದ್ದ ಆರೋಪಿಗಳು ಅರೆಸ್ಟ್!

Published On - 8:36 pm, Wed, 16 March 22