Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದ್ದೂರಿ ಮದುವೆಯಾಗಲು ಬ್ಯಾಂಕ್​ನಲ್ಲಿ ಕೋಟ್ಯಂತರ ರೂ. ಕಳ್ಳತನ ಮಾಡಿದ್ದ ಆರೋಪಿಗಳು ಅರೆಸ್ಟ್!

ಬ್ಯಾಂಕ್ ಸಿಬ್ಬಂದಿ ಬಸವರಾಜ ಗೆಳೆಯರೊಂದಿಗೆ ಸೇರಿಕೊಂಡು ಕಳ್ಳತನ ಮಾಡಿದ್ದ. ಅದ್ಧೂರಿಯಾಗಿ ಮದುವೆಯಾಗಲು ಕಳ್ಳತನ ಮಾಡಿದ್ದ. ನಂತರ ಕದ್ದ ಹಣ ಹಾಗೂ ಚಿನ್ನಾಭರಣವನ್ನು ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿದ್ದ.

ಅದ್ದೂರಿ ಮದುವೆಯಾಗಲು ಬ್ಯಾಂಕ್​ನಲ್ಲಿ ಕೋಟ್ಯಂತರ ರೂ. ಕಳ್ಳತನ ಮಾಡಿದ್ದ ಆರೋಪಿಗಳು ಅರೆಸ್ಟ್!
ಬಂಧಿತ ಆರೋಪಿಗಳು
Follow us
TV9 Web
| Updated By: sandhya thejappa

Updated on:Mar 14, 2022 | 4:41 PM

ಬೆಳಗಾವಿ: ಕೋಟ್ಯಂತರ ರೂಪಾಯಿ ಕಳ್ಳತನ (Theft) ಮಾಡಿದ್ದ ಆರೋಪಿಗಳನ್ನ ಮುರಗೋಡ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ಬಸವರಾಜ ಹುಣಶಿಕಟ್ಟಿ(30), ಸಂತೋಷ್ ಕಂಬಾರ(31), ಗಿರೀಶ್ ಬೆಳವಲ(26) ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರಿಂದ 4.37 ಕೋಟಿ, 1.63 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಆರೋಪಿಗಳು ಮಾ.6ರಂದು ಮುರಗೋಡ ಡಿಸಿಸಿ ಬ್ಯಾಂಕ್​ನಲ್ಲಿ (DCC Bank) ಕಳ್ಳತನ ಮಾಡಿದ್ದರು. ನಕಲಿ ಕೀ ಬಳಸಿ ಬ್ಯಾಂಕ್ ಸಿಬ್ಬಂದಿ ಬಸವರಾಜ ಕಳ್ಳತನ ಮಾಡಿದ್ದ.

ಬ್ಯಾಂಕ್ ಸಿಬ್ಬಂದಿ ಬಸವರಾಜ ಗೆಳೆಯರೊಂದಿಗೆ ಸೇರಿಕೊಂಡು ಕಳ್ಳತನ ಮಾಡಿದ್ದ. ಅದ್ಧೂರಿಯಾಗಿ ಮದುವೆಯಾಗಲು ಕಳ್ಳತನ ಮಾಡಿದ್ದ. ನಂತರ ಕದ್ದ ಹಣ ಹಾಗೂ ಚಿನ್ನಾಭರಣವನ್ನು ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿದ್ದ. ಸದ್ಯ ಹಣ, ಚಿನ್ನಾಭರಣವನ್ನು ಮುರಗೋಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬ್ಯಾಂಕ್ ಸಿಬ್ಬಂದಿ ಬಸವರಾಜ ದೇವರ ಹೆಸರಲ್ಲಿ ಒಂದಿಷ್ಟು ಚಿನ್ನ, ಹಣ ತಿಜೋರಿಯಲ್ಲಿ ಬಿಟ್ಟು ಉಳಿದ ಹಣ ಕಳ್ಳತನ ಮಾಡಿದ್ದ. ಮುರಗೋಡ ಮಹಾಂತಜ್ಜನ ತಿಜೋರಿ ಖಾಲಿ ಇರಬಾರದು ಅಂತಾ ಸ್ವಲ್ಪ ಹಣ ಬಿಟ್ಟಿದ್ದ.  ಬ್ಯಾಂಕ್‌ನ ಲಾಕರ್‌ನಲ್ಲಿ ಒಟ್ಟು 124 ಬ್ಯಾಗ್‌ನಲ್ಲಿ 4 ಕೋಟಿಗೂ ಹೆಚ್ಚು ಹಣ ಇತ್ತು. ಈ ಪೈಕಿ 17 ಬ್ಯಾಗ್ ಬಿಟ್ಟು ಉಳಿದ ಬ್ಯಾಗ್‌ಗಳನ್ನು ಆರೋಪಿ ಕ್ಲರ್ಕ್ ಎಗರಿಸಿದ್ದ. ನಕಲಿ ಕೀ ಬಳಸಿ ಈ ಕೃತ್ಯ ಎಸಗಿದ್ದ.

ಕೃತ್ಯಕ್ಕೆ ತನ್ನ ಹೊಲದಲ್ಲಿ ಕೆಲಸ ಮಾಡುವ ಓರ್ವ, ಗ್ಯಾರೇಜ್ಜ್​ನಲ್ಲಿದ್ದ ಗೆಳೆಯನ ಸಹಾಯ ಪಡೆದಿದ್ದ. ಪ್ಲಾಸ್ಟಿಕ್‌ನಲ್ಲಿ ಹಣದ ಬಂಡಲ್ ಕಟ್ಟಿ ಮಣ್ಣಲ್ಲಿ ಹೂತಾಕಿ ಅದರ ಮೇಲೆ ನೀರು ಹಾಯಿಸಿದ್ದ. ಬಳಿಕ ಮಾರನೇ ದಿನ ಬ್ಯಾಂಕ್ ಬಳಿ ಬಂದು ಗೊತ್ತಿಲ್ಲದಂತೆ ವರ್ತಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ವೃದ್ಧ ದಂಪತಿಗೆ ಡ್ಯಾಗರ್​ನಿಂದ ಇರಿದು ರಾಬರಿಗೆ ಯತ್ನ: ಬೆಂಗಳೂರು: ವೃದ್ಧ ದಂಪತಿಗೆ ಡ್ಯಾಗರ್​ನಿಂದ ಇರಿದು ರಾಬರಿಗೆ ಯತ್ನಿಸಿರುವ ಘಟನೆ ಮಾರ್ಚ್ 12ರಂದು ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ನಡೆದಿದೆ. ಏಕಾಂಗಿಯಾಗಿ ವೃದ್ಧೆ ಮನೆಯಲ್ಲಿದ್ದಾಗ ಚಾಕುವಿನಿಂದ ಇರಿದು ಚಿನ್ನಾಭರಣ ದೋಚಿದ್ದರು. ಚಿನ್ನಾಭರಣ ದೋಚಿ ಹೊರ ಬರುವಾಗ ವೃದ್ಧ ಮನೆಗೆ ಬಂದಿದ್ದರು. ಈ ವೇಳೆ ಆರೋಪಿ ಷಣ್ಮುಗಂನನ್ನು ವೃದ್ಧ ಹಿಡಿದುಕೊಂಡಿದ್ದರು. ಈ ವೇಳೆ ಆರೋಪಿ ಷಣ್ಮುಗಂ ವೃದ್ಧನ ಬೆನ್ನಿಗೂ ಡ್ಯಾಗರ್ನಿಂದ ಇರಿದಿದ್ದ. ಬಳಿಕ ಸ್ಥಳೀಯರು ಬಂದು ಆರೋಪಿಯನ್ನು ಹಿಡಿದರು. ನಂತರ ಪೊಲೀಸರಿಗೆ ಒಪ್ಪಿಸಿದ್ದರು.

ಲಕ್ಷ್ಮೀ(63), ರಾಮಾನುಜಾಚಾರ್ಯ(65)ಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ

ಉಕ್ರೇನ್ ರಕ್ಷಣೆಗೆ ನೆರವಾಗದಿದ್ದರೆ ನಿಮ್ಮ ಮೇಲೆಯೂ ದಾಳಿ ನಡೆಯುತ್ತೆ: ನ್ಯಾಟೊಗೆ ಝೆಲೆನ್​ಸ್ಕಿ ಎಚ್ಚರಿಕೆ

Whatsapp: ವಾಟ್ಸ್​ಆ್ಯಪ್​ನಲ್ಲಿ ಹೆಚ್ಚಾಗುತ್ತಿದೆ ಸ್ಕ್ಯಾಮ್: ಫೇಕ್ ಮೆಸೇಜ್​ಗಳನ್ನು ಈಗ ನೀವೇ ಪತ್ತೆ ಹಚ್ಚಿ

Published On - 8:42 am, Mon, 14 March 22