ಸುಂಕದಕಟ್ಟೆಯಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ; ಬೇರೆ ಬೇರೆ ಯುವತಿಯರಿಗೂ ಪ್ರೀತಿಸಲು ಪೀಡಿಸುತ್ತಿದ್ದ ಆರೋಪಿ ನಾಗೇಶ್

| Updated By: sandhya thejappa

Updated on: May 11, 2022 | 9:59 AM

ಎರಡು ವರ್ಷದ ಹಿಂದೆ ಮತ್ತೋರ್ವ ಯುವತಿಗೂ ಹೀಗೆ ಕಾಟ ಕೊಟ್ಟಿದ್ದನಂತೆ. ಕೊಡಿಯಾಲಂನಲ್ಲಿರುವ ತಮ್ಮ ಮನೆ ಪಕ್ಕದಲ್ಲಿದ್ದ ಯುವತಿಯನ್ನು ಪೀಡಿಸುತ್ತಿದ್ದನಂತೆ. ಆತನ ಕಾಟ ತಾಳಲಾರದೇ ಯುವತಿ ಪೋಷಕರಿಗೆ ವಿಚಾರ ತಿಳಿಸಿದ್ದಳು.

ಸುಂಕದಕಟ್ಟೆಯಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ; ಬೇರೆ ಬೇರೆ ಯುವತಿಯರಿಗೂ ಪ್ರೀತಿಸಲು ಪೀಡಿಸುತ್ತಿದ್ದ ಆರೋಪಿ ನಾಗೇಶ್
ಆರೋಪಿ ನಾಗೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ.
Follow us on

ಬೆಂಗಳೂರು: ಸುಂಕದಕಟ್ಟೆಯಲ್ಲಿ (Sunkadakatte) ಯುವತಿ ಮೇಲೆ ಆ್ಯಸಿಡ್ (Acid) ದಾಳಿ ನಡೆಸಿದ ಕೇಸ್ಗೆ ಸಂಬಂಧಿಸಿ ಪೊಲೀಸ್ ತನಿಖೆಯಲ್ಲಿ ಆರೋಪಿ ನಾಗೇಶ್ ಬಗೆಗಿನ ಭಯಾನಕ ಸತ್ಯ ಬಯಲಾಗಿದೆ. ಈ ಹಿಂದೆ ಕೂಡ ನಾಗೇಶ್ ಬೇರೆ ಬೇರೆ ಯುವತಿಯರನ್ನ ಪ್ರೀತಿಸುವಂತೆ ಕಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಾಗೇಶ್ ಮೂಲತಃ ಕೃಷ್ಣಗಿರಿ ಜಿಲ್ಲೆಯ ಕೊಡಿಯಾಲಂ ನಿವಾಸಿ. 7 ವರ್ಷದ ಹಿಂದೆ ಬೆಂಗಳೂರಿಗೆ ಬಂದು ಯುವತಿ ದೊಡ್ಡಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದ. ಪ್ರೀತಿ ಮಾಡು ಅಂತಾ ಯುವತಿಯ ಹಿಂದೆ ಬಿದ್ದಿದ್ದ. ಮನೆ ಖಾಲಿ ಮಾಡಿಸಿದ ಬಳಿಕ ತಮ್ಮ ಸ್ವಂತ ಊರು ಕೊಡಿಯಾಲಂಗೆ ಹೋಗಿದ್ದ.

ಎರಡು ವರ್ಷದ ಹಿಂದೆ ಮತ್ತೋರ್ವ ಯುವತಿಗೂ ಹೀಗೆ ಕಾಟ ಕೊಟ್ಟಿದ್ದನಂತೆ. ಕೊಡಿಯಾಲಂನಲ್ಲಿರುವ ತಮ್ಮ ಮನೆ ಪಕ್ಕದಲ್ಲಿದ್ದ ಯುವತಿಯನ್ನು ಪೀಡಿಸುತ್ತಿದ್ದನಂತೆ. ಆತನ ಕಾಟ ತಾಳಲಾರದೇ ಯುವತಿ ಪೋಷಕರಿಗೆ ವಿಚಾರ ತಿಳಿಸಿದ್ದಳು. ಯುವತಿ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂದು ಪೊಲೀಸರು ಬುದ್ಧಿ ಹೇಳಿ ಕಳುಹಿಸಿದ್ದರು. ನಂತರ ಆ ಯುವತಿಯನ್ನ ಬೇರೆ ಹುಡುಗನಿಗೆ ಮದುವೆ ಮಾಡಿಕೊಡಲಾಗಿತ್ತು. ನಂತರ ಮತ್ತೆ ಕೊಡಿಯಾಲಂ ಬಿಟ್ಟು ಬೆಂಗಳೂರಿಗೆ ಬಂದಿದ್ದ.

ಮತ್ತೆ ಬೆಂಗಳೂರಿಗೆ ಬಂದು ಅದೇ ಯುವತಿಗೆ ಪ್ರೀತಿಸುವಂತೆ ಪೀಡಿಸಿದ್ದ. ಪ್ರೀತಿ ತಿರಸ್ಕರಿಸಿದಕ್ಕೆ ಆ್ಯಸಿಡ್ ಹಾಕಿ ಪರಾರಿಯಾಗಿದ್ದಾನೆ. ನಾಗೇಶ್ ಮತ್ತಷ್ಟು ಹುಡುಗಿಯರಿಗೆ ಕಾಟ ಕೊಟ್ಟಿದ್ದಾನೆ ಎನ್ನುವ ಮಾಹಿತಿ ಕೂಡ ಸಿಕ್ಕಿದ್ದು, ಆತನ ಪತ್ತೆಗೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ರಾಜ್ಯ, ಹೊರ ರಾಜ್ಯಗಳಲ್ಲಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ದೈವ ಭಕ್ತ ಆರೋಪಿ ನಾಗೇಶ್:
ಆರೋಪಿ ನಾಗೇಶ್ ಅತೀವ ದೈವ ಭಕ್ತನಾಗಿದ್ದಾನೆ. ಧರ್ಮಸ್ಥಳ ಮತ್ತು ತಿರುಪತಿಗೆ ನಿರಂತರವಾಗಿ ಹೋಗಿ ಬರುತ್ತಿದ್ದ. ಅಲ್ಲೇ ಅಡಗಿ ಕುಳಿತಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ತಿರುಪತಿ ಸುತ್ತಮುತ್ತಲಿದ್ದ 4 ಸಾವಿರ ಲಾಡ್ಜ್ಗಳ ಶೋಧ ನಡೆಸಿದ್ದಾರೆ. ಧರ್ಮಸ್ಥಳದಲ್ಲಿ ಒಂದೇ ಒಂದು ಲಾಡ್ಜ್ ಕೂಡ ಬಿಡದೆ ಹುಡುಕಾಟ ನಡೆಸಿದ್ದಾರೆ. ಕೊಯ್ಯಮುತ್ತೂರಿನ ಈಶಾ ಫೌಂಡೇಶನ್ನಲ್ಲಿಯೂ ತಡಕಾಡಿದ್ದಾರೆ. ಸದ್ಯ ಪೊಲೀಸರ ತಂಡ ಡೆಹ್ರಡೂನ್ಗೆ ಹೋಗಿದೆ.

ನಾಗೇಶ್ ಹೋಲುವ ವ್ಯಕ್ತಿ ಕಂಡು ಡೆಹ್ರಾಡೂನ್ ಬಿಎಸ್ಎಫ್ ಯೋಧ ಪೊಲೀಸರಿಗೆ ಕರೆ ಮಾಡಿದ್ದಾರೆ. ಹೀಗಾಗಿ ಪೊಲೀಸರು ಡೆಹ್ರಡೂನ್ಗೆ ತೆರಳಿದ್ದಾರೆ. ನಾಗೇಶ್ ಮೊಬೈಲ್, ಎಟಿಎಂ ಯಾವುದನ್ನು ಬಳಸುತ್ತಿಲ್ಲ. ಸ್ನೇಹಿತರು ಕುಟುಂಬಸ್ಥರು ಯಾರ ಸಂಪರ್ಕ ಕೂಡ ಮಾಡುತ್ತಿಲ್ಲ. ಆತನ ಬಗೆಗಿನ ಒಂದೇ ಒಂದು ಮಾಹಿತಿ ಕೂಡ ಪೊಲೀಸರಿಗೆ ಇಲ್ಲ.

ಇದನ್ನೂ ಓದಿ

Kedaranath Dham: ಹವಾಮಾನ ವೈಪರೀತ್ಯದ ನಡುವೆಯೂ ಕೇದಾರನಾಥಕ್ಕೆ ಭೇಟಿ ನೀಡಿದ 80,000ಕ್ಕೂ ಹೆಚ್ಚು ಭಕ್ತರು; ವಿಡಿಯೋ ಇಲ್ಲಿದೆ

USD Vs Rupee Value: ಅಮೆರಿಕದ ಡಾಲರ್ ವಿರುದ್ಧ ರೂಪಾಯಿ ನೆಲ ಕಚ್ಚಲು ಇಲ್ಲಿವೆ ಕಾರಣಗಳು