ಮೈಸೂರು: ಕ್ರೈಂ ಬ್ರ್ಯಾಂಚ್ ಪೊಲೀಸ್ ಎಂದು ಹಣ ವಸೂಲಿ ಮಾಡುತ್ತಿದ್ದ ಆರೋಪಿ ಅರೆಸ್ಟ್
ಈತ ತಾನೊಬ್ಬ ಕ್ರೈಂ ಬ್ರ್ಯಾಂಚ್ ಪೊಲೀಸ್ ಎಂದು ಹೇಳಿಕೊಂಡು ಜನರನ್ನು ನಂಬಿಸಿ ಹಣ ಪಡೆಯುತ್ತಿದ್ದ. ಸದ್ಯ ಆರೋಪಿ ಮಾತನ್ನು ನಂಬದ ವ್ಯಕ್ತಿಯೋರ್ವರು ದೂರು ದಾಖಲಿಸಿದ್ದು ದಿವ್ಯರಾಜ್ ಅರೆಸ್ಟ್ ಆಗಿದ್ದಾನೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಮಧುವನಹಳ್ಳಿ ನಿವಾಸಿ ದಿವ್ಯರಾಜ್ ಬಂಧಿತ ಆರೋಪಿ.
ಮೈಸೂರು, ಡಿ.30: ಕ್ರೈಂ ಬ್ರ್ಯಾಂಚ್ ಪೊಲೀಸ್ (Crime Branch Police) ಅಂತಾ ಹಣ ವಸೂಲಿ ಮಾಡುತ್ತಿದ್ದ ಆರೋಪಿಯನ್ನು ಬೈಲಕುಪ್ಪೆ ಪೊಲೀಸರು (Bylakuppe Police) ಬಂಧಿಸಿದ್ದಾರೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಮಧುವನಹಳ್ಳಿ ನಿವಾಸಿ ದಿವ್ಯರಾಜ್ ಬಂಧಿತ ಆರೋಪಿ. ಈತ ತಾನೊಬ್ಬ ಕ್ರೈಂ ಬ್ರ್ಯಾಂಚ್ ಪೊಲೀಸ್ ಎಂದು ಹೇಳಿಕೊಂಡು ಜನರನ್ನು ನಂಬಿಸಿ ಹಣ ಪಡೆಯುತ್ತಿದ್ದ. ಸದ್ಯ ಆರೋಪಿ ಮಾತನ್ನು ನಂಬದ ವ್ಯಕ್ತಿಯೋರ್ವರು ದೂರು ದಾಖಲಿಸಿದ್ದು ದಿವ್ಯರಾಜ್ ಅರೆಸ್ಟ್ ಆಗಿದ್ದಾನೆ.
ಕೊಪ್ಪ ಗ್ರಾಮದಲ್ಲಿರುವ ಆಯುರ್ವೇದಿಕ್ ಸ್ಪಾ ಮಾಲೀಕ ಪುಷ್ಪ ಕುಮಾರ್ ಅವರ ಬಳಿ ಆರೋಪಿ ದಿವ್ಯರಾಜ್ ತಾನೊಬ್ಬ ಕ್ರೈಂ ಬ್ರ್ಯಾಂಚ್ ಪೊಲೀಸ್ ಎಂದು ಹೇಳಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಪುಷ್ಪ ಕುಮಾರ್ ಅವರು ಬೈಲು ಕುಪ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ದಿವ್ಯರಾಜ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು ನಕಲಿ ಕ್ರೈಂ ಪೊಲೀಸ್ ಎಂದು ತಿಳಿದು ಬಂದ ಹಿನ್ನೆಲೆ ದಿವ್ಯರಾಜ್ ಬಂಧಿಸಲಾಗಿದೆ. ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೈದಿಗಳಿಗೆ ಗಾಂಜಾ ಸಪ್ಲೈ, ಇಬ್ಬರು ಅರೆಸ್ಟ್
ಕೈದಿಗಳಿಗೆ ಗಾಂಜಾ, ಮೊಬೈಲ್ ನೀಡಲು ಯತ್ನಿಸಿದ ಇಬ್ಬರನ್ನ ಬಂಧಿಸಲಾಗಿದೆ. ಶಿವಮೊಗ್ಗದ ಸೋಗಾನೆಯಲ್ಲಿರುವ ಸೆಂಟ್ರಲ್ ಜೈಲ್ ಬಳಿ ಇಬ್ಬರ ಸೆರೆ ಹಿಡಿಯಲಾಗಿದೆ. ಗಾಂಜಾ, ಮೊಬೈಲ್ ಪ್ಯಾಕ್ ಮಾಡಿ ಹೊರಗಿನಿಂದ ಎಸೆಯಲು ಯತ್ನಿಸಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಆರೋಪಿಗಳ ಚಲನವಲನ ಗಮನಿಸಿದ್ದ ಜೈಲು ಸಿಬ್ಬಂದಿ, ಕೂಡಲೇ ಇಬ್ಬರು ಆರೋಪಿಗಳ ಬೆನ್ನತ್ತಿ ಬಂಧಿಸಿದ್ದಾರೆ. ಬಂಧಿತರಿಂದ 29 ಗಾಂಜಾ ಪ್ಯಾಕೆಟ್, 1 ಮೊಬೈಲ್, 2 ಚಾರ್ಜರ್ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ತನ್ನ ಪ್ರೀತಿಗೆ ಅಡ್ಡ ಬಂದ ಸ್ನೇಹಿತನಿಗೆ ಮುಹೂರ್ತ: ಓರ್ವ ಆಸ್ಪತ್ರೆ ದಾಖಲು, ಇಬ್ಬರು ಅರೆಸ್ಟ್
ಬಸ್, ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ
ಕೆಎಸ್ಆರ್ಟಿಸಿ ಬಸ್ ಹಾಗೂ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಟೆಂಪೋ ಡ್ರೈವರ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಎಲೆಕೆರೆ ಹ್ಯಾಂಡ್ ಪೋಸ್ಟ್ ಬಳಿ ಘಟನೆ ನಡೆದಿದೆ. ಡಿಕ್ಕಿ ರಭಸಕ್ಕೆ ಪೆನಾಯಲ್ ಬಾಕ್ಸ್ ತುಂಬಿಕೊಂಡು ಬರ್ತಿದ್ದ ಟೆಂಪೋ ಉರುಳಿಬಿದ್ದಿತ್ತು. ಅಪಘಾತದಿಂದ ಟೆಂಪೋದಲ್ಲಿದ್ದ ಪಿನಾಯಲ್ ಬಾಕ್ಸ್ಗಳು ಚೆಲ್ಲಾಪಿಲ್ಲಿಯಾಗಿದ್ವು.
ಕೆರೆಯಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆ
ಕೆರೆಯಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಿತ್ತಾಮಂಗಲ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ. 6 ತಿಂಗಳ ಹಿಂದೆ 22 ವರ್ಷದ ರಂಜಿತಾ ನಾಪತ್ತೆಯಾಗಿದ್ದರು. ಕಲ್ಲುಪಾಳ್ಯದ ಬುದ್ಧಿಮಾಂದ್ಯೆ ರಂಜಿತಾ ಅಸ್ಥಿಪಂಜರ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ