ಒಂದು ರಸಗುಲ್ಲಕ್ಕಾಗಿ ಮದುವೆ ಮನೆಯಲ್ಲಿ ಕೊಲೆಯೇ ನಡೆದುಹೋಯ್ತು!

| Updated By: ನಯನಾ ರಾಜೀವ್

Updated on: Oct 28, 2022 | 8:24 AM

ಮದುವೆ ಮನೆ ಎಂದರೆ ಹಾಗೆ ಗಂಡು-ಹೆಣ್ಣು ಎರಡೂ ಕಡೆಯವರಿಗೂ ಪ್ರತಿಷ್ಠೆಯ ಪ್ರಶ್ನೆ. ಸಣ್ಣ ಪುಟ್ಟ ವಿಚಾರಕ್ಕೆ ಎರಡೂ ಕಡೆಯವರು ಮುನಿಸಿಕೊಳ್ಳುವುದು ಸಾಮಾನ್ಯ

ಒಂದು ರಸಗುಲ್ಲಕ್ಕಾಗಿ ಮದುವೆ ಮನೆಯಲ್ಲಿ ಕೊಲೆಯೇ ನಡೆದುಹೋಯ್ತು!
Rasgulla
Follow us on

ಮದುವೆ ಮನೆ ಎಂದರೆ ಹಾಗೆ ಗಂಡು-ಹೆಣ್ಣು ಎರಡೂ ಕಡೆಯವರಿಗೂ ಪ್ರತಿಷ್ಠೆಯ ಪ್ರಶ್ನೆ. ಸಣ್ಣ ಪುಟ್ಟ ವಿಚಾರಕ್ಕೆ ಎರಡೂ ಕಡೆಯವರು ಮುನಿಸಿಕೊಳ್ಳುವುದು ಸಾಮಾನ್ಯ. ಆದರೆ ಅದಷ್ಟಕ್ಕೇ ಸೀಮಿತವಾಗಿದ್ದರೆ ತೊಂದರೆಯಿರಲಿಲ್ಲ, ಆದರೆ ಕೊಲೆಯೇ ನಡೆದುಹೋಗಿದೆ. ಖುಷಿ ಖುಷಿಯಾಗಿರಬೇಕಿದ್ದ ಮದುವೆ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.

ಒಂದು ರಸಗುಲ್ಲಕ್ಕೋಸ್ಕರ ಕೊಲೆ ನಡೆದಿದೆ. ಆಗ್ರಾದ ಮದುವೆಯಲ್ಲಿ ರಸಗುಲ್ಲಾ ವಿಚಾರವಾಗಿ ಕೊಲೆ ನಡೆದಿದೆ. ಜಿಲ್ಲೆಯ ಎತ್ಮಾದ್‌ಪುರದಲ್ಲಿ ಮದುವೆ ಸಮಾರಂಭದಲ್ಲಿ ಸಿಹಿತಿಂಡಿಗಾಗಿ ನಡೆದ ಜಗಳದಲ್ಲಿ 22 ವರ್ಷದ ಯುವಕ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಮದುವೆ ಆಗದೆ ಮೆರವಣಿಗೆ ಹಿಂತಿರುಗುವ ಪರಿಸ್ಥಿತಿ ನಿರ್ಮಾಣವಾಯಿತು.

ವಧುವಿನ ಇಡೀ ಕುಟುಂಬ ಸ್ಥಳದಿಂದ ಪರಾರಿಯಾಗಿದೆ. ಎತ್ಮಾದಪುರದ ಮೊಹಲ್ಲಾ ಶೇಖನ್‌ ನಿವಾಸಿ ಒಸ್ಮಾನ್‌ ಎಂಬವರ ಪುತ್ರಿಯರ ಮದುವೆಯಲ್ಲಿ ಸಿಹಿತಿಂಡಿ ವಿಚಾರವಾಗಿ ಜಗಳ ನಡೆದ ಘಟನೆ ವರದಿಯಾಗಿದೆ.

ರಸಗುಲ್ಲಾ ಇಲ್ಲದ ಕಾರಣಕ್ಕೆ ವರ ಮತ್ತು ವಧುವಿನ ಕಡೆಯವರ ನಡುವೆ ವಾಗ್ವಾದ ನಡೆದಿದ್ದು, ನಂತರ ಕೊಲೆಗೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಹೋಮ್‌ಲೇನ್ ಎತ್ಮಾದಪುರ ಸರ್ಕಲ್ ಆಫೀಸರ್ ರವಿಕುಮಾರ್ ಗುಪ್ತಾ ಪ್ರಕಾರ, ಸಿಹಿತಿಂಡಿಗಳ ಕೊರತೆಯ ವಿವಾದವು ದೊಡ್ಡ ಜಗಳಕ್ಕೆ ತಿರುಗಿತು.
ಇದೇ ವೇಳೆ ಅಲ್ಲಿದ್ದ ಜನರ ಮೇಲೆ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಪೊಲೀಸರ ಪ್ರಕಾರ, ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸನ್ನಿ (22) ಅವರನ್ನು ಮೊದಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಯಿತು ಮತ್ತು ನಂತರ ಆಗ್ರಾದ ಸರೋಜಿನಿ ನಾಯ್ಡು ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ, ಇದಲ್ಲದೆ, ದಾಳಿಯಲ್ಲಿ ಗಾಯಗೊಂಡ ಐವರನ್ನು ಎತ್ಮಾದಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ.

ಖಂಡೌಲಿಯ ಉದ್ಯಮಿ ವಕಾರ್ ಅವರ ಇಬ್ಬರು ಪುತ್ರರು ಇಲ್ಲಿನ ಎತ್ಮಾದ್‌ಪುರದಲ್ಲಿ ವಾಸವಾಗಿದ್ದ ಓಸ್ಮಾನ್ ಅವರ ಪುತ್ರಿಯರೊಂದಿಗೆ ವಿವಾಹವಾಗಬೇಕಿತ್ತು.

ಮದುವೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈ ವೇಳೆ ಫುಡ್ ಕೌಂಟರ್​ನಲ್ಲಿ ರಸಗುಲ್ಲಾ ನೀಡಲು ನಿರಾಕರಿಸಿದ ಕಾರಣಕ್ಕೆ ಜಗಳ ಆರಂಭಗೊಂಡು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದೇಶದ ಇತರೆ ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ