ತನ್ನ 17-ತಿಂಗಳ ಮಗುವನ್ನು ಮನೆ ಒರೆಸುವ ಬಟ್ಟ್ಟೆಯಿಂದ ಉಸಿರುಗಟ್ಟಿಸಿ ಕೊಂದ ಅಮೇರಿಕನ್ ಮಹಿಳೆಯೊಬ್ಬಳಿಗೆ ಅಲ್ಲಿನ ಕೋರ್ಟೊಂದು ಅಜೀವ ಕಾರಾಗೃಹವಾಸದ ಶಿಕ್ಷೆ ವಿಧಿಸಿದೆ. ನ್ಯೂ ಜೆರ್ಸಿಯ 45-ವರ್ಷ-ವಯಸ್ಸಿನ ಹೀದರ್ ರೆನಾಲ್ಡ್ಸ್ ಳಿಗೆ (Heather Reynolds) 2018ರಲ್ಲಿ ತನ್ನ ಮಗು ಏಕ್ಸೆಲ್ ರಿನಾಡ್ಸ್ಟ್ ನನ್ನು (Axel Reynolds) ಕೊಂದ ಅಪರಾಧದಲ್ಲಿ ಶಿಕ್ಷೆ ವಿಧಿಸಲಾಗಿದೆ. ಅವಳು ಮಗುವನ್ನು ಕೊಂದ ಹಂತಕಿ ಎಂದು ಜುಲೈನಲ್ಲೇ ಸಾಬೀತಾಗಿದ್ದರೂ ಶಿಕ್ಷೆಯ ಪ್ರಮಾಣವನ್ನು ಮೂರೂವರೆ ತಿಂಗಳು ನಂತರ ಪ್ರಕಟಿಸಲಾಗಿದೆ. ಶಿಕ್ಷೆಯ ಅವಧಿಯಲ್ಲಿ ರೆನಾಲ್ಡ್ಸ್ ಗೆ ಪರೋಲ್ (parole) ಸಿಗುವ ಸಾಧ್ಯತೆಯನ್ನು ತಳ್ಳಿ ಹಾಕಲಾಗಿದೆ.
ಕೊಲೆಯ ಜೊತೆಗೆ ಮಿಥಾಂಫಿಟಮೈನ್ ಹೆಸರಿನ ಡ್ರಗ್ ಅನ್ನು ಜೊತೆಯಲ್ಲಿಟ್ಟುಕೊಂಡು ಮಗುವಿನ ಜೀವಕ್ಕೆ ಅಪಾಯವೊಡ್ಡಿದ ಅಪರಾಧದಲ್ಲೂ ನ್ಯಾಯಾಧೀಶ ಗ್ವೆಂಡೊಲಿನ್ ಬ್ಲ್ಯೂ ರೆನಾಲ್ಡ್ಸ್ ಗೆ ಶಿಕ್ಷೆ ವಿಧಿಸಿದ್ದಾರೆ. ವಿಚಾರಣೆ ಕುರಿತು ಮಾಧ್ಯಮಗಳೊಂದಿಗೆ ಮಾತಾಡಿದ ಕಾಮ್ಡೆನ್ ಕೌಂಟಿ ಪ್ರಾಸಿಕ್ಯೂಟರ್ ಆಫೀಸ್ ಮುಖ್ಯಸ್ಥ ಪೀಟರ್ ಗಲ್ಲಾಘೇರ್ ಅವರು, ‘ಈ ಪ್ರಕರಣಕ್ಕೆ ಇಷ್ಟೆಲ್ಲ ಸಮಯ ಮತ್ತು ಮಹತ್ವ ನೀಡಿದ ಜ್ಯೂರಿಗೆ ನಾವು ಆಭಾರಿಯಾಗಿದ್ದೇವೆ,’ ಅಂತ ಹೇಳಿದರು.
‘ರೆನಾಲ್ಡ್ಸ್ ಳ ಶಿಕ್ಷೆ ಪ್ರಕಟಿಸುವ ಮೊದಲು ನ್ಯಾಯಾಧೀಶ ಬ್ಲ್ಯೂ ಅವರು ಸಂತ್ರಸ್ತ ಮಗುವಿನ ಕುಟುಂಬದ ಸದಸ್ಯರ ಜೊತೆ ಮಾತಾಡಿ, ಅವಳು ಎಸಗಿರುವ ಹೀನ ಅಪರಾಧ ಅವರ ಬದುಕುಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂದು ಕೇಳಿದರು,’ ಎಂದು ಕಾಮ್ಡೆನ್ ಕೌಂಟಿ ಪ್ರಾಸಿಕ್ಯೂಟರ್ ಗ್ರೇಸ್ ಮೆಕುಲ್ಲೆ ಯವರ ಕಚೇರಿಯಿಂದ ಬಿಡುಗಡೆಯಾಗಿರುವ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಜೀವಾವಧಿ ಶಿಕ್ಷೆಯ ಜೊತೆಗೆ ರೆನಾಲ್ಡ್ಸ್ ಗೆ ಪರೋಲ್ ನೀಡದಿರಲು ಕೋರ್ಟ್ ಆದೇಶ ನೀಡಿದೆ. ಈ ಶಿಕ್ಷೆಯಲ್ಲದೆ, ಮಿಥಾಂಫಿಟಮೈನ್ ಡ್ರಗ್ ತನ್ನೊಂದಿಗೆ ಇಟ್ಟುಕೊಂಡು ಮಗುವಿನ ಆರೋಗ್ಯವನ್ನು ಅಪಾಯಕ್ಕೊಡ್ಡಿದ ಅಪರಾಧದಲ್ಲಿ ಅವಳಿಗೆ 8 ವರ್ಷ ಮತ್ತು ನಿಷೇಧಿತ ಡ್ರಗ್ಸ್ ಹೊಂದಿದ್ದಕ್ಕೆ 4 ವರ್ಷಗಳ ಶಿಕ್ಷೆಯನ್ನು ಅವಳಿಗೆ ವಿಧಿಸಲಾಗಿದೆ, ಎಂದು ಪ್ರಕಟಣೆ ತಿಳಿಸಿದೆ.
ರಿನಾಲ್ಡ್ಸ್ ಮನೆಯೊರೆಸುವ ಬಟ್ಟೆಯನ್ನು ತನ್ನ ಮಗುವಿನ ಮೂಗು ಮತ್ತು ಬಾಯಿಗೆ ಅಡ್ಡವಿಟ್ಟು ಉಸಿರುಗಟ್ಟಿಸಿ ಕೊಂದಿದ್ದಾಳೆ ಎಂದು ಕಾಮ್ಡೆನ್ ಕೌಂಟಿ ಪ್ರಾಸಿಕ್ಯೂಟರ್ ಗಳು ಹೇಳಿದ್ದಾರೆ.
ಮೇ 10, 2018ರಂದು ರಿನಾಲ್ಡ್ಸ್ ನ್ಯೂ ಜೆರ್ಸಿಯ ಸಿಕ್ವಿಲ್ಲೆಯಲ್ಲಿರುವ ತನ್ನ ಮನೆಯಿಂದ ಮಗುವನ್ನು ಎತ್ತಿಕೊಂಡು ಹೆಲ್ಪ್ ಹೆಲ್ಪ್ ಅನ್ನುತ್ತಾ ಹೊರಗೋಡಿ ಬಂದಿದ್ದಾಳೆ. ತುರ್ತು ಸೇವೆಗಳು ಅಲ್ಲಿಗೆ ಆಗಮಿಸಿದಾಗ ಮಗು ಮನೆ ಮುಂದಿನ ಗಾರ್ಡನಲ್ಲಿತ್ತು ಮತ್ತು ಪ್ರತಿಕ್ರಿಯಿಸುವುದನ್ನು ನಿಲ್ಲಿಸಿತ್ತು.
ಚಿಕ್ಕ ಹುಡುಗನ ದೇಹದಲ್ಲಿ ಐಸೊಪ್ರೊಪಿಲ್ ಆಲ್ಕೋಹಾಲ್ ಕುರುಹುಗಳು ಕಂಡುಬಂದ ನಂತರ, ಕೌಂಟಿಯ ವೈದ್ಯ ಡಾ. ಜೆರಾಲ್ಡ್ ಫೀಗಿನ್, ನರಹತ್ಯೆ ಮಾಡುವ ರೀತಿಯಲ್ಲಿ ಉಸಿರುಗಟ್ಟ್ಟಿಸುವ ಮೂಲಕ ಮಗುವನ್ನು ಕೊಲ್ಲಲಾಗಿದೆ ಎಂದು ವರದಿ ನೀಡಿದರು.
ನ್ಯಾಯಾಲಯದ ದಾಖಲೆಗಳ ಪ್ರಕಾರ, ಬಾಲಕನ ಬಾಯಿ ಮತ್ತು ಮೂಗಿನ ಸುತ್ತ ಮೂಗೇಟುಗಳಿದ್ದವು ಮತ್ತು ಉಸಿರುಗಟ್ಟಿಸಲು ಬಳಸಿದ ಮನೆ ಒರೆಸುವ ಬಟ್ಟೆಯಲ್ಲಿ ರಾಸಾಯನಿಕದ ಅಂಶ ಪತ್ತೆಯಾಗಿದ್ದು ಎಂದು ವರದಿಯಾಗಿದೆ.
ಅಷ್ಟಾಗಿಯೂ ರೆನಾಲ್ಡ್ಸ್ ತುರ್ತು ಸೇವೆಗಳ ತಂಡಕ್ಕೆ ತನ್ನ ಮಗ ವಿಷವೇನಾದರೂ ಸೇವಿಸಿರಬಹುದು ಎಂದು ಹೇಳಿದ್ದಳಂತೆ. ಆದರೆ ಆಕೆಯ ಮಗ ಸತ್ತು ಬಹಳ ಸಮಯವಾಗಿದೆ ಎಂದು ಅವರು ಹೇಳಿದಾಗ, ರೆನಾಲ್ಡ್ಸ್ ತನ್ನ ವರಸೆಯನ್ನು ಬದಲಾಯಿಸಿದ್ದಾಳೆ.
ಪ್ರಾಸಿಕ್ಯೂಟರ್‌ಗಳು ರೆನಾಲ್ಡ್ಸ್ ಮೇಲೆ ಆರೋಪಗಳನ್ನು ಮಾಡುವ ಮೊದಲು ಅವಳು ವೈದ್ಯರ ಬಳಿ ಹೋಗಿ ‘ಇದು ಅನುಮಾನಾಸ್ಪದ ಸಾವಲ್ಲ. ನಾನೇನೂ ತಪ್ಪು ಮಾಡಿಲ್ಲ’ ಎಂದಿದ್ದಳಂತೆ.
ಮಗುವಿನ ಕೊಲೆಯಾಗುವ ಹಿಂದಿನ ರಾತ್ರಿ ರೆನಾಲ್ಡ್ಸ್ ಮೆಥಾಂಫೆಟಮೈನ್ ಖರೀದಿಸಿದ್ದನ್ನು ನೋಡಿದ್ದ ಕೆಲ ಪ್ರತ್ಯಕ್ಷದರ್ಶಿಗಳು ಅದನ್ನು ಪೊಲೀಸರಿಗೆ ತಿಳಿಸಿದ್ದಾರೆ. ಆಕೆಯ ಪರ್ಸ್‌ನಲ್ಲಿ ಡ್ರಗ್ ಅಂಶವನ್ನು ಕಂಡು ಬಂದ ಸಂಗತಿಯನ್ನು ಪೊಲೀಸರು ದೃಢಪಡಿಸಿದರು.
ತನ್ನ ಮಾಜಿ ಗೆಳೆಯನೊಬ್ಬ ಕೊಲ್ಲಲು ಒಬ್ಬ ವ್ಯಕ್ತಿಗೆ ಸುಪಾರಿ ನೀಡಿದ ಆರೋಪ ಕೂಡ ರೆನಾಲ್ಡ್ಸ್ ವಿರುದ್ಧ ಮಾಡಲಾಗಿತ್ತು. ಆಕೆಯ ಬಾಯ್ ಫ್ರೆಂಡ್ ಆಕ್ಸೆಲ್ ಸಾವಿನ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿದ್ದ ಎಂದು ವರದಿಯಾಗಿದೆ.
ಇನ್ನಷ್ಟು ಕ್ರೈಮ್ ಕತೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ