ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ ದೇವರ ದರ್ಶನಕ್ಕೆ ಬಂದು ಸಿಕ್ಕಿಬಿದ್ದ ರೌಡಿಶೀಟರ್

ಕಡಲೆಕಾಯಿ ಪರಿಷೆಯಲ್ಲಿ ದೇವರ ದರ್ಶನಕ್ಕೆ ಬಂದಿದ್ದ ರೌಡಿಶೀಟರ್​ ಪೃಥ್ವಿ ಹಾಗೂ ಆತನ ಸಹಚರ ಭೂಷಣ್​ನನ್ನು ಬಸವನಗುಡಿ ಪೊಲೀಸರು​ ಬಂಧಿಸಿದ್ದಾರೆ.

ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ ದೇವರ ದರ್ಶನಕ್ಕೆ ಬಂದು ಸಿಕ್ಕಿಬಿದ್ದ ರೌಡಿಶೀಟರ್
TV9kannada Web Team

| Edited By: Ayesha Banu

Nov 23, 2022 | 11:45 AM


ಬೆಂಗಳೂರು: ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ ಕೊಲೆ, ಕೊಲೆ ಯತ್ನ ಸೇರಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ರೌಡಿಶೀಟರ್​​ ಪೃಥ್ವಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಡಲೆಕಾಯಿ ಪರಿಷೆಯಲ್ಲಿ ದೇವರ ದರ್ಶನಕ್ಕೆ ಬಂದಿದ್ದ ರೌಡಿಶೀಟರ್​ ಪೃಥ್ವಿ ಹಾಗೂ ಆತನ ಸಹಚರ ಭೂಷಣ್​ನನ್ನು ಬಸವನಗುಡಿ ಪೊಲೀಸರು​ ಬಂಧಿಸಿದ್ದಾರೆ.

ಪ್ರತಿವರ್ಷ ಕಡಲೆಕಾಯಿ ಪರಿಷೆಗೆ ಬಂದು ದೇವರ ದರ್ಶನ ಪಡೆಯುತಿದ್ದ ರೌಡಿಶಿಟರ್ ಪೃಥ್ವಿ ಈ ವರ್ಷ ಕೂಡ ದೇವಸ್ಥಾನಕ್ಕೆ ಬರುವುದು ಖಚಿತವಾಗಿತ್ತು. ಇದನ್ನು ತಿಳಿದಿದ್ದ ಪೊಲೀಸರು ಪೃಥ್ವಿ ಬರುತ್ತಾನೆಂದು ಹೊಂಚು ಹಾಕಿ ಕಾದು ‌ಕುಳಿತಿದ್ದರು. ಸದ್ಯ ಕಡಲೆಕಾಯಿ ಪರಿಷೆಯಲ್ಲಿ ರೌಡಿ ಶೀಟರ್ ಪೃಥ್ವಿ, ಸಹಚರ ಭೂಷಣ್​ನನ್ನು ಬಂಧಿಸಿದ್ದಾರೆ. ಬಸವನಗುಡಿ, ವಿಲ್ಸನ್ ಗಾರ್ಡನ್ ಸೇರಿ ಹಲವು ಠಾಣೆಯಲ್ಲಿ ಪೃಥ್ವಿ ವಾಂಟೆಡ್‌ ಆಗಿದ್ದ. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ 86 ರೌಡಿಶೀಟರ್​​​ಗಳ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ, ರಾಘವೇಂದ್ರನ ಮನೆಯಲ್ಲಿ ಲಾಂಗ್ ಪತ್ತೆ

ಮೀನು ಹಿಡಿಯಲು ಹೋಗಿ ಯುವಕ ಸಾವು

ತುಮಕೂರು: ತಿಪಟೂರು ತಾಲೂಕಿನ ನೋಣವಿನಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕ ನೀರುಪಾಲಾಗಿದ್ದಾನೆ. ಯೋಗೇಶ್(24)ಮೃತ ದುರ್ದೈವಿ. ನೋಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೌಚಾಲಯದಲ್ಲಿ ಬುಸಗುಟ್ಟಿದ್ದ ನಾಗಪ್ಪ

ತುಮಕೂರಿನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯ ಶೌಚಾಲಯದಲ್ಲಿ ಹಾವು ಕಾಣಿಸಿಕೊಂಡಿದ್ದು ಕಂಪನಿ ಸಿಬ್ಬಂದಿ ಭಯಭೀತರಾದ ಘಟನೆ ನಡೆದಿದೆ. ಮೋಡ ಕವಿದ ವಾತಾವರಣ ಇರುವ ಕಾರಣ ಬೆಚ್ಚಿಗೆ ಇರುವ ಸ್ಥಳಗಳಲ್ಲಿ ಹಾವುಗಳು ಅಡಗಿಕೊಳ್ಳುತ್ತಿವೆ. ಸುಮಾರು ಐದು ಅಡಿ ಉದ್ದದ ನಾಗರಹಾವನ್ನು ಉರಗ ಸಂರಕ್ಷಕ ದಿಲೀಪ್ ರಕ್ಷಣೆ ಮಾಡಿದ್ದಾರೆ.

ಬೆಳ್ಳಂಬೆಳಗ್ಗೆ ಕಾಡಾನೆ ಪ್ರತ್ಯೇಕ್ಷ

ರಾಮನಗರದ ರಾಯರದೊಡ್ಡಿ ನಗರದ ಬಳಿ ಬೋಳಪ್ಪನ ಕೆರೆಯಲ್ಲಿ ಆನೆಯೊಂದು ಪ್ರತ್ಯೇಕ್ಷವಾಗಿದೆ. ಕೆರೆಯಲ್ಲಿ ಕಾಡಾನೆ ಬೀಡುಬಿಟ್ಟಿದ್ದು ನಗರ ನಿವಾಸಿಗಳು ಆತಂಕದಲ್ಲಿದ್ದಾರೆ.


ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada