ದಕ್ಷಿಣ ಬೆಂಗಳೂರಿನಲ್ಲಿ ಚಿರತೆ ಹಿಡಿಯಲು ಬೋನುಗಳ ಅಳವಡಿಸಿದ ಅರಣ್ಯ ಇಲಾಖೆ, ರಾತ್ರಿ ಸಂಚಾರ ನಿರ್ಬಂಧಿಸಲು ನಿವಾಸಿಗಳಿಗೆ ಮನವಿ

ಚಳಿಗಾಲದಲ್ಲಿ ಚಿರತೆಗಳು ಜನ್ಮ ನೀಡುತ್ತವೆ ಎಂಬುದನ್ನು ಗಮನಿಸಬೇಕು. ಮರಿಗಳು ಮತ್ತು ಅವು ಆಹಾರಕ್ಕಾಗಿ ಅಲೆದಾಡುತ್ತವೆ. ದಶಕಗಳಿಂದ ನಗರ ಜೀವನ ಅತಿಕ್ರಮಣದಿಂದಾಗಿ ಅವುಗಳ ಆವಾಸಸ್ಥಾನಗಳು ಛಿದ್ರಗೊಂಡಿವೆ ಎಂದು ಅರಣ್ಯ ಅಧಿಕಾರಿಯೊಬ್ಬರು ಹೇಳಿದರು.

ದಕ್ಷಿಣ ಬೆಂಗಳೂರಿನಲ್ಲಿ ಚಿರತೆ ಹಿಡಿಯಲು ಬೋನುಗಳ ಅಳವಡಿಸಿದ ಅರಣ್ಯ ಇಲಾಖೆ, ರಾತ್ರಿ ಸಂಚಾರ ನಿರ್ಬಂಧಿಸಲು ನಿವಾಸಿಗಳಿಗೆ ಮನವಿ
ದಕ್ಷಿಣ ಬೆಂಗಳೂರಿನಲ್ಲಿ ಚಿರತೆ ಹಿಡಿಯಲು ಬೋನುಗಳ ಅಳವಡಿಸಿದ ಅರಣ್ಯ ಇಲಾಖೆImage Credit source: indianexpress.com
Follow us
TV9 Web
| Updated By: ಸಾಧು ಶ್ರೀನಾಥ್​

Updated on: Nov 23, 2022 | 11:26 AM

ರಾಜಧಾನಿ ಬೆಂಗಳೂರು ದಕ್ಷಿಣ ಭಾಗದ ತುರಹಳ್ಳಿ ಅರಣ್ಯ ಪ್ರದೇಶದ (Turahalli forest area) ಸಮೀಪದ ಸೋಮಪುರದಲ್ಲಿ ನವೆಂಬರ್ 19 ರಂದು ಚಿರತೆಯೊಂದು (Leopard) ಕರುವನ್ನು ಕೊಂದಿದೆ. ಇದರಿಂದ ಸ್ಥಳೀಯ ನಿವಾಸಿಗಳು ಚಿಂತಾಕ್ರಾಂತರಾಗಿದ್ದಾರೆ. ಆದರೆ ಕರ್ನಾಟಕ ಅರಣ್ಯ ಇಲಾಖೆಗೆ (Karnataka Forest department) ಆ ಚಿರತೆಯನ್ನು ಬಲೆಗೆ ಬೀಳಿಸಲು ಇನ್ನೂ ಸಾಧ್ಯವಾಗಿಲ್ಲ. ಅರಣ್ಯಾಧಿಕಾರಿಗಳು ಬೋನುಗಳು, ಪಂಜರದೊಂದಿಗೆ ಸಜ್ಜಾಗಿದ್ದಾರೆ. ಈ ಮಧ್ಯೆ, ರಾತ್ರಿಯ ವೇಳೆ ತಮ್ಮ ಸಂಚಾರಗಳನ್ನು ನಿರ್ಬಂಧಿಸಿಕೊಳ್ಳುವಂತೆ ಇಲ್ಲಿನ ನಿವಾಸಿಗಳಿಗೆ ಸೂಚಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.

ಚಿರತೆಯು ತಾನು ಸಾಯಿಸಿರುವ ಕರುವಿನ ಶವವನ್ನು ತೆಗೆದುಕೊಂಡು ಹೋಗಲು ಮರಳಿ ಬಂದರೆ ಅದು ಸಿಕ್ಕಿಬೀಳಬಹುದು ಎಂದು ನಾವು ಅದೇ ಸ್ಥಳದಲ್ಲಿ ಬೋನನ್ನು ಹಾಕಿದ್ದೇವೆ. ರಾತ್ರಿಯಲ್ಲಿ ಜನ ಸಂಚಾರ, ಚಲನವಲನವನ್ನು ನಿರ್ಬಂಧಿಸುವಂತೆ ನಾವು ನಿವಾಸಿಗಳಿಗೆ ಕೇಳಿದ್ದೇವೆ. ಚಿರತೆ ನಿರಂತರವಾಗಿ ಚಲಿಸುತ್ತಿರುತ್ತದೆ. ಅದರ ಚಲನವಲನದ ಮೇಲೆ ನಿಗಾ ಇಡುತ್ತಿದ್ದೇವೆ. ಸಮೀಪದ ಪ್ರದೇಶದಲ್ಲಿ ದಟ್ಟವಾದ ಸಸ್ಯ ಸಂಪತ್ತು ಇದೆ. ಸಾಕಷ್ಟು ಮುಂಜಾಗ್ರತೆಗಳೊಂದಿಗೆ ಎಚ್ಚರವಹಿಸಿದ್ದೇವೆ ಎಂದು ಕಗ್ಗಲಿಪುರ ವಲಯ ಅರಣ್ಯಾಧಿಕಾರಿ ಗೋವಿಂದರಾಜು ತಿಳಿಸಿದರು.

ಚಳಿಗಾಲದಲ್ಲಿ ಚಿರತೆಗಳು ಜನ್ಮ ನೀಡುತ್ತವೆ ಎಂಬುದು ಗಮನಾರ್ಹ:

“ತುರಹಳ್ಳಿ ಅರಣ್ಯವು ಈ ಹಿಂದೆ ಚಿರತೆಗಳ ತಾಣವಾಗಿತ್ತು. ಆದರೆ ಈಗ ಸಮೀಪದಲ್ಲಿ ಜನವಸತಿ ಪ್ರದೇಶಗಳು ಬಂದಿವೆ. ಈ ಅರಣ್ಯದ ಬಿಎಂ ಕಾವಲ್ ರಿಸರ್ವ್ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಂಪರ್ಕವೂ ಅತಿಕ್ರಮಣಗೊಂಡಿದೆ. ಚಳಿಗಾಲದಲ್ಲಿ ಚಿರತೆಗಳು ಜನ್ಮ ನೀಡುತ್ತವೆ ಎಂಬುದನ್ನು ಸಹ ಗಮನಿಸಬೇಕು. ಮರಿಗಳು ಮತ್ತು ಅವು ಆಹಾರಕ್ಕಾಗಿ ಅಲೆದಾಡುತ್ತವೆ. ದಶಕಗಳಿಂದ ನಗರ ಜೀವನ ಅತಿಕ್ರಮಣದಿಂದಾಗಿ ಅವುಗಳ ಆವಾಸಸ್ಥಾನಗಳು ಛಿದ್ರಗೊಂಡಿವೆ ಎಂದು ಅರಣ್ಯ ಅಧಿಕಾರಿಯೊಬ್ಬರು ಹೇಳಿದರು.

ಈ ವರ್ಷದ ಆರಂಭದಲ್ಲಿ ಯಲಹಂಕದ ರೈಲ್ ವೀಲ್ ಫ್ಯಾಕ್ಟರಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆಯೊಂದು ಸೆರೆಯಾಗಿತ್ತು. ಕಾರ್ಖಾನೆಯು ವಸತಿ ಅಪಾರ್ಟ್ಮೆಂಟ್ಗಳಿಂದ ಸುತ್ತುವರಿದಿದೆ. 2021ರಲ್ಲಿ ಬೇಗೂರಿನ ಅಪಾರ್ಟ್‌ಮೆಂಟ್‌ನಲ್ಲಿ ಚಿರತೆಯೊಂದು ಕಾಣಿಸಿಕೊಂಡಿತ್ತು. 2019ರಲ್ಲಿ ಯಲಹಂಕದ ಐಟಿಸಿ ಫ್ಯಾಕ್ಟರಿ ಆವರಣದಲ್ಲಿ ಚಿರತೆಯೊಂದು ಕಾಣಿಸಿಕೊಂಡಿತ್ತು. ಅದನ್ನು ವಶಪಡಿಸಿಕೊಂಡು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಕಳುಹಿಸಲಾಗಿದೆ. 2016ರಲ್ಲಿ ವೈಟ್‌ಫೀಲ್ಡ್‌ನಲ್ಲಿರುವ ಶಾಲಾ ಆವರಣಕ್ಕೆ ಚಿರತೆಯೊಂದು ನುಗ್ಗಿ ಆರು ಜನರ ಮೇಲೆ ದಾಳಿ ನಡೆಸಿತ್ತು.

ಇದನ್ನೂ ಓದಿ: 1985ರ ರೆಸ್ಟೋರೆಂಟ್​ ಬಿಲ್​ ನೋಡಿ ಹೌಹಾರುತ್ತಿರುವ ನೆಟ್ಟಿಗರು

ಇದನ್ನೂ ಓದಿ: ಬಲಿಷ್ಠ ಅರ್ಜೆಂಟೀನಾಗೆ ಸೋಲುಣಿಸಿದ ಸೌದಿ; ಇಡೀ ದೇಶಕ್ಕೆ ಒಂದು ದಿನ ರಜೆ ಘೋಷಿಸಿದ ದೊರೆ..!