ಬೆಂಗಳೂರಿನ 86 ರೌಡಿಶೀಟರ್ಗಳ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ, ರಾಘವೇಂದ್ರನ ಮನೆಯಲ್ಲಿ ಲಾಂಗ್ ಪತ್ತೆ
ಸಿಸಿಬಿ ದಾಳಿ ವೇಳೆ ರೌಡಿಶೀಟರ್ ಮನೆಗಳಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆ. ವಿಜಯನಗರ ರೌಡಿಶೀಟರ್ ರಾಘವೇಂದ್ರ ಮನೆಯಲ್ಲಿ ಎರಡು ಲಾಂಗ್ಗಳು ಪತ್ತೆಯಾಗಿವೆ.
ಬೆಂಗಳೂರು: ನಗರದಲ್ಲಿ 86 ರೌಡಿಶೀಟರ್ಗಳಿಗೆ ಸಿಸಿಬಿ ಪೊಲೀಸರು ಶಾಕ್ ಕೊಟ್ಟಿದ್ದಾರೆ. ರೌಡಿಸಂನಲ್ಲಿ ಆ್ಯಕ್ಟೀವ್ ಆಗಿರುವ ರೌಡಿಶೀಟರ್ ಮನೆಗಳ ಮೇಲೆ ತಡರಾತ್ರಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಎಲ್ಲಾ ವಿಭಾಗಗಳ ಠಾಣಾ ವ್ಯಾಪ್ತಿಗಳಲ್ಲಿ ಐವರು ಎಸಿಪಿ, 20 ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ನಗರದ ಪ್ರಮುಖ ರೌಡಿಶೀಟರ್ಗಳ ಮನೆಗಳ ಮೇಲೆ ರೇಡ್ ನಡೆಸಿ ಸಿಸಿಬಿ ಪರಿಶೀಲನೆ ನಡೆಸಿದೆ.
ಸೈಕಲ್ ರವಿ, ವಿಲ್ಸನ್ ಗಾರ್ಡನ್ ನಾಗನ ಮನೆ ಮೇಲೂ ದಾಳಿ ನಡೆಸಿದ್ದು ಸಿಸಿಬಿ ದಾಳಿ ವೇಳೆ ಇಬ್ಬರು ರೌಡಿಗಳು ಮನೆಗಳಲ್ಲಿ ಇರಲಿಲ್ಲ. ರೇಡ್ ವೇಳೆ ರೌಡಿಶೀಟರ್ಗಳಾದ ಕೋತಿರಾಮ, ಆರ್.ಟಿ.ನಗರದ ವೆಂಕಟೇಶ್ ಸೇರಿ 26 ರೌಡಿಶೀಟರ್ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ವಾರ್ನ್ ಮಾಡಿದ್ದಾರೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದು ಬೆಂಗಳೂರು ರೌಡಿಶೀಟರ್ಗಳಿಗೆ ಸಿಸಿಬಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ನೆಲಮಂಗಲ: ಸಿಮೆಂಟ್ ಇಟ್ಟಿಗೆಯಿಂದ ಹೊಡೆದ ದರೋಡೆಕೋರನ ಕಾಲಿಗೆ ಪೊಲೀಸರ ಗುಂಡೇಟು
ರೌಡಿಶೀಟರ್ ಮನೆಗಳಲ್ಲಿ ಮಾರಕಾಸ್ತ್ರಗಳು ಪತ್ತೆ
ಸಿಸಿಬಿ ದಾಳಿ ವೇಳೆ ರೌಡಿಶೀಟರ್ ಮನೆಗಳಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆ. ಸಿದ್ದಾಪುರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಕುಳ್ಳ ರಿಜ್ವಾನ್ ಶಿಷ್ಯ ಸ್ಟಾರ್ ನವೀನ್ ಮನೆಯಲ್ಲಿ ಡ್ಯಾಗರ್ ಪತ್ತೆಯಾಗಿದ್ದು ಸಿಸಿಬಿ ದಾಳಿ ವೇಳೆ ಸ್ಟಾರ್ ನವೀನ್ ಎಸ್ಕೇಪ್ ಆಗಿದ್ದಾನೆ. ವಿಜಯನಗರ ಠಾಣಾ ವ್ಯಾಪ್ತಿಯಲ್ಲೂ ಸಿಸಿಬಿ ದಾಳಿ ನಡೆದಿ ಪರಿಶೀಲನೆ ನಡೆಸಿದೆ. ಈ ವೇಳೆ ವಿಜಯನಗರ ರೌಡಿಶೀಟರ್ ರಾಘವೇಂದ್ರ ಮನೆಯಲ್ಲಿ ಎರಡು ಲಾಂಗ್ಗಳು ಪತ್ತೆಯಾಗಿವೆ.
ಕಡಲೆಕಾಯಿ ಪರಿಷೆಯಲ್ಲಿ ದೇವರ ದರ್ಶನಕ್ಕೆ ಬಂದಿದ್ದ ರೌಡಿಶೀಟರ್ ಅರೆಸ್ಟ್
ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ ಕೊಲೆ, ಕೊಲೆ ಯತ್ನ ಸೇರಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ರೌಡಿಶೀಟರ್ ಪೃಥ್ವಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಡಲೆಕಾಯಿ ಪರಿಷೆಯಲ್ಲಿ ದೇವರ ದರ್ಶನಕ್ಕೆ ಬಂದಿದ್ದ ರೌಡಿಶೀಟರ್ ಪೃಥ್ವಿ ಹಾಗೂ ಆತನ ಸಹಚರ ಭೂಷಣ್ನನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:01 am, Wed, 23 November 22