AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಸುಪ್ರೀಂಕೋರ್ಟ್​ನಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆ: ವಿಪಕ್ಷ ನಾಯಕರಿಗೆ ಸಿಎಂ ಪತ್ರ

ಸಿಎಂ ಬೊಮ್ಮಾಯಿ ವಿಧಾನಸಭೆಯ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಹಾಗೂ ಪರಿಷತ್ ವಿಪಕ್ಷನಾಯಕ ಹರಿಪ್ರಸಾದ್‌ಗೆ ಬರೆದ ಪತ್ರ ಬರೆದಿದ್ದಾರೆ.

ಇಂದು ಸುಪ್ರೀಂಕೋರ್ಟ್​ನಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆ: ವಿಪಕ್ಷ ನಾಯಕರಿಗೆ ಸಿಎಂ ಪತ್ರ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us
TV9 Web
| Updated By: ಆಯೇಷಾ ಬಾನು

Updated on:Nov 23, 2022 | 7:55 AM

ಬೆಂಗಳೂರು: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ(Karnataka Maharashtra Border Dispute) ಮತ್ತೆ ತಾರಕಕ್ಕೇರಿದೆ. ಸ್ವಾತಂತ್ರ್ಯ ನಂತರ ಶುರುವಾದ ಬೆಳಗಾವಿ ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಇಂದು ಸುಪ್ರೀಂಕೋರ್ಟ್(Supreme Court)ನಲ್ಲಿ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆ ವಿಪಕ್ಷನಾಯಕರಿಗೆ ಸಿಎಂ ಬೊಮ್ಮಾಯಿ(Basavaraj Bommai) ಪತ್ರ ಬರೆದಿದ್ದು ಸುಪ್ರೀಂ ಕೋರ್ಟ್ ವಿಚಾರಣೆಯ ಬಳಿಕ ಶೀಘ್ರ ಸಭೆ ನಿಗದಿಗೆ ಚಿಂತಿಸಿದ್ದಾರೆ. ಸಿಎಂ ಬೊಮ್ಮಾಯಿ ವಿಧಾನಸಭೆಯ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಹಾಗೂ ಪರಿಷತ್ ವಿಪಕ್ಷನಾಯಕ ಹರಿಪ್ರಸಾದ್‌ಗೆ ಬರೆದ ಪತ್ರದಲ್ಲಿ ಸರ್ಕಾರ ತೆಗೆದುಕೊಂಡ‌ ನಿಲುವು, ವಕೀಲರ ತಂಡ ರಚನೆ ಹಾಗೂ ಕೈಗೊಂಡ ಕ್ರಮ ಕುರಿತು ಪತ್ರದ ಮೂಲಕ ಲಿಖಿತ ಮಾಹಿತಿ ನೀಡಿದ್ದಾರೆ.

ಸತತ 18 ವರ್ಷಗಳ ಬಳಿಕ ಮತ್ತೆ ಕಾನೂನು ಸಮರ ಶುರುವಾಗಿದೆ. ಇಂದು ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಗಡಿ ತಗಾದೆಯ ವಿಚಾರಣೆ ನಡೆಯಲಿದೆ. ಅತ್ತ ಮಹಾರಾಷ್ಟ್ರ, ಇತ್ತ ಕರ್ನಾಟಕ ಎರಡೂ ರಾಜ್ಯಗಳು ಕಾನೂನು ರೀತಿಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ. ಕೋರ್ಟ್​ ಕಟೆಕಟೆಯಲ್ಲಿ ವಾದ ಮಂಡಿಸಲು ಸಜ್ಜಾಗಿವೆ.

ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಇಂದು, ನಿನ್ನೆಯದಲ್ಲ. 1956ರಿಂದಲೂ ಮಹಾರಾಷ್ಟ್ರ ಸರ್ಕಾರ ನಾಡದ್ರೋಹಿ ಎಂಇಎಸ್​ಗೆ ಪ್ರಚೋದನೆ ನೀಡುತ್ತಲೇ ಬಂದಿದೆ. ಬೆಳಗಾವಿ ಸೇರಿ ಕರ್ನಾಟಕದ 4 ಜಿಲ್ಲೆಯ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು 2004ರಲ್ಲಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದ ಅಂತಿಮ ವಿಚಾರಣೆ ಇಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಎರಡೂ ಸರ್ಕಾರಗಳ ವಾದ ಪ್ರತಿವಾದವನ್ನು ಇಂದು ಸುಪ್ರೀಂಕೋರ್ಟ್‌ ಆಲಿಸಲಿದೆ.

ಇದನ್ನೂ ಓದಿ: ಬೆಳಗಾವಿ ಗಡಿ ಸಮಸ್ಯೆಯ ಬಗ್ಗೆ ನಾಳೆ ಸುಪ್ರೀಂ ವಿಚಾರಣೆ ಸಾಧ್ಯತೆ; ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಗಡಿ ವಿವಾದದ ಬಗ್ಗೆ ಇಲ್ಲಿದೆ ಮಾಹಿತಿ

ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅಧಿಕಾರಕ್ಕೆ ಬರುತ್ತಿದ್ದಂತೆ ಬೆಳಗಾವಿ ಗಡಿ ಕ್ಯಾತೆ ಕೆಣಕಿದ್ರು. ಕಾನೂನು ಹೋರಾಟದ ಸುಳಿವು ನೀಡಿದ್ರು. ಇದೀಗ ಸುಪ್ರೀಂನಲ್ಲಿ ಇಂದು ವಿಚಾರಣೆ ಹಿನ್ನೆಲೆಯಲ್ಲಿ ಫುಲ್ ಅಲರ್ಟ್ ಆಗಿದ್ದಾರೆ. ಮೊನ್ನೆ ಮುಂಬೈನ ಸಹ್ಯಾದ್ರಿ ಅತಿಥಿ ಗೃಹದಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆಸಿ ಕಾನೂನು ಹೋರಾಟಕ್ಕೆ ಪಕ್ಕಾ ಪ್ಲ್ಯಾನ್ ಮಾಡಿದ್ದಾರೆ. ಸುಪ್ರೀಂನಲ್ಲಿ ಮಹಾರಾಷ್ಟ್ರ ಪರ ವಾದಿಸಲು ಕಾನೂನು ತಜ್ಞ ವೈದ್ಯನಾಥನ್​ರನ್ನ ನೇಮಿಸಿದ್ದಾರೆ.

ಇನ್ನು ಕರ್ನಾಟಕವೂ ಸಕಲ ಸಿದ್ಧತೆ ಮಾಡಿಕೊಂಡಿದೆ. ಕಾನೂನು ಹೋರಾಟದಲ್ಲಿ ಮಹಾರಾಷ್ಟ್ರಕ್ಕೆ ವಿರುದ್ಧ ವಾದ ಮಾಡಲು ಸಿದ್ದತೆ ಮಾಡಿಕೊಂಡಿದೆ. ಕಳೆದ ಸೋಮವಾರ ಸಿಎಂ ಬೊಮ್ಮಾಯಿ ತುರ್ತು ಸಭೆ ನಡೆಸಿದ್ರು. ಸಭೆಯಲ್ಲಿ ಕಾನೂನು ಹೋರಾಟದ ಕುರಿತು ಚರ್ಚೆ ನಡೆಸಿ ಗಡಿ ವಿವಾದ ಕುರಿತಂತೆ ರಾಜ್ಯದ ಪರ ಸಮರ್ಥವಾಗಿ ವಾದ ಮಂಡಿಸಲು ಬಲಿಷ್ಠ ಕಾನೂನು ತಂಡ ರಚಿಸಲಾಗಿದೆ. ಹಿರಿಯ ವಕೀಲರಾದ ಮುಕುಲ್‌ ರೋಹಟಗಿ, ಶಾಮ್‌ ದಿವಾನ್‌, ಉದಯ್‌ ಹೊಳ್ಳ ಹಾಗೂ ಮಾರುತಿ ಜಿರಲೆ ಅವರು ತಂಡದಲ್ಲಿದ್ದಾರೆ.

ಸಭೆ ಬಳಿಕ ಮಾತಾಡಿದ್ದ ಸಿಎಂ, ಮಹಾರಾಷ್ಟ್ರದ ಅರ್ಜಿಗೆ ಇನ್ನೂ ಮಾನ್ಯತೆ ಸಿಕ್ಕಿಲ್ಲ. ಸಿಗುವುದೂ ಇಲ್ಲ. ನಮ್ಮ ಗಡಿ ರಕ್ಷಣೆಗೆ ಎಲ್ಲ ಕ್ರಮ ಕೈಗೊಂಡಿದ್ದೇವೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ರು.

ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:55 am, Wed, 23 November 22

ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ