ಬೆಂಗಳೂರು: ಇಬ್ಬರು ಅಪರಿಚಿತ ವ್ಯಕ್ತಿಗಳ ನಡುವೆ ಗಲಾಟೆ ನಡೆದು, ಕೊಲೆ(Murder)ಯಲ್ಲಿ ಅಂತ್ಯವಾದ ಘಟನೆ ಮಲ್ಲೇಶ್ವರಂನ ಲಿಂಕ್ ರೋಡ್ ಸಿಗ್ನಲ್ ಬಳಿ ನಡೆದಿದೆ. ಇನ್ನು ಈ ಇಬ್ಬರು ರಸ್ತೆ ಬದಿಯಲ್ಲಿ ಚಿಂದಿ ಆಯುವ ಕೆಲಸ ಮಾಡುತ್ತಿದ್ದು, ನಿನ್ನೆ(ಜು.8) ಸಂಜೆ ಏಳು ವರೆ ಸುಮಾರಿಗೆ ಇಬ್ಬರು ಕುಡಿದು ಗಲಾಟೆ ಮಾಡಿಕೊಂಡು ಹೊಡೆದಾಡಿದ್ದಾರೆ. ಈ ವೇಳೆ ಓರ್ವನಿಗೆ ದೊಣ್ಣೆಯಿಂದ ಏಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಕುರಿತು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾದಗಿರಿ: ತಾಲೂಕಿನ ಯರಗೋಳ ಗ್ರಾಮದಲ್ಲಿ ತುಂಡಾದ ವಿದ್ಯುತ್ ತಂತಿ ನೆಲಕ್ಕೆ ಬಿದ್ದು ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಎರಡು ವಿದ್ಯುತ್ ವೈರ್ ತುಂಡಾಗಿ ಬಿದ್ದ ಹಿನ್ನಲೆ ಬೆಂಕಿ ಕಾಣಿಸಿಕೊಂಡಿದ್ದು, ಕೆಲಕ್ಷಣ ಜನರ ಆತಂಕಕ್ಕೊಳಗಾಗಿದ್ದರು. ಇನ್ನು ಅದೇ ವೇಳೆ ಆ ಮಾರ್ಗದಲ್ಲಿ ಸಾರಿಗೆ ಬಸ್ ಬಂದಿದೆ. ಬೆಂಕಿ ನೋಡಿದ ಚಾಲಕ ಕೂಡಲೇ ಬಸ್ ನಿಲ್ಲಿಸಿ, ಜೆಸ್ಕಾ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ವಿದ್ಯುತ್ ಸಂಪರ್ಕ ಕಡಿತ ಮಾಡಿಸಿದ ಹಿನ್ನಲೆ ದುರಂತವೊಂದು ತಪ್ಪಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ದುರಂತವೊಂದು ತಪ್ಪಿದೆ.
ಇದನ್ನೂ ಓದಿ:ಕೌಟುಂಬಿಕ ಕಲಹ, ಪತಿಗೆ ಹಣದ ದಾಹ; ಮಾರಕಾಸ್ತ್ರದಿಂದ ಹೊಡೆದು ಪತ್ನಿಯ ಕೊಲೆ, ಕತ್ತು ಹಿಸುಕಿ ಮಗುವಿನ ಹತ್ಯೆಗೆ ಯತ್ನ
ಇನ್ನು ನಿನ್ನೆ ಕೂಡ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ ಮತ್ತು ಮಗಳು ಸಾವನ್ನಪ್ಪಿದ ಘಟನೆ ನಡೆದಿತ್ತು. ಗ್ರಾಮದಲ್ಲಿರುವ ಜಮೀನಿಗೆ ನೀರು ಹಾಯಿಸಲು ಹೋಗಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಕೊನೆಯುಸಿರೆಳದಿದ್ದರು. ಬಳಿಕ ಸ್ಥಳೀಯರು ತಂದೆ ಮಗಳ ಶವವನ್ನು ಬಸವನಹಳ್ಳಿಗೆ ಸಾಗಿಸಿದ್ದರು. ಈ ಕುರಿತು ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ