ಕೊರಿಯರ್ ಏಜೆಂಟ್‌ ರೀತಿ ವೇಷ ಧರಿಸಿ ದರೋಡೆಗೆ ಯತ್ನಿಸಿದ ಮಹಿಳೆಯ ಬಂಧನ

|

Updated on: May 30, 2024 | 10:25 AM

ದೆಹಲಿಯ ದ್ವಾರಕಾ ಪ್ರದೇಶದ ಅಕ್ಕ-ಪಕ್ಕದಲ್ಲಿ ದರೋಡೆ ಮಾಡಲು ಕೊರಿಯರ್ ಏಜೆಂಟ್‌ನಂತೆ ವೇಷ ಧರಿಸಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ನಾಗರಿಕ ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ, ಈಕೆ ಇದೀಗ ಕೆಲಸ ಕಳೆದುಕೊಂಡಿದ್ದಾಳೆ. ಆಕೆಯ ಬಳಿಯಿದ್ದ ಕೊರಿಯರ್ ಬ್ಯಾಗ್, ಒಂದು ಟಾಯ್ ಗನ್, ಹ್ಯಾಂಡ್ ಗ್ಲೌಸ್, ಎರಡು ಹಗ್ಗಗಳು, ಒಂದು ಬ್ಯಾಗ್ ಹಾಗೂ ಹೆಲ್ಮೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಆಕೆ ಹಲವು ಅಘಾತಕಾರಿ ವಿಷಯಗಳನ್ನು ಹೇಳಿದ್ದಾಳೆ 

ಕೊರಿಯರ್ ಏಜೆಂಟ್‌ ರೀತಿ ವೇಷ ಧರಿಸಿ ದರೋಡೆಗೆ ಯತ್ನಿಸಿದ ಮಹಿಳೆಯ ಬಂಧನ
Follow us on

ದೆಹಲಿ, ಮೇ.30: ಮಹಿಳೆಯೊಬ್ಬಳು ದೆಹಲಿಯ ದ್ವಾರಕಾ ಪ್ರದೇಶದ ಅಕ್ಕ-ಪಕ್ಕದಲ್ಲಿ ದರೋಡೆ ಮಾಡಲು ಕೊರಿಯರ್ ಏಜೆಂಟ್‌ನಂತೆ ವೇಷ ಧರಿಸಿ ಸುತ್ತಾಡುತ್ತಿದ್ದಳು. ಇದೀಗ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ನಾಗರಿಕ ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ, ಈಕೆ ಇದೀಗ ಕೆಲಸ ಕಳೆದುಕೊಂಡಿದ್ದಾಳೆ. ಆಕೆಯ ಬಳಿಯಿದ್ದ ಕೊರಿಯರ್ ಬ್ಯಾಗ್, ಒಂದು ಟಾಯ್ ಗನ್, ಹ್ಯಾಂಡ್ ಗ್ಲೌಸ್, ಎರಡು ಹಗ್ಗಗಳು, ಒಂದು ಬ್ಯಾಗ್ ಹಾಗೂ ಹೆಲ್ಮೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಮೇ 23 ರಂದು ಚಾವ್ಲಾ ಪೊಲೀಸ್ ಠಾಣೆಯಲ್ಲಿ ಬೆಳಿಗ್ಗೆ 11:30 ರ ಸುಮಾರಿಗೆ ದರೋಡೆ ಯತ್ನದ ಬಗ್ಗೆ ದೂರು ಬಂದಿತ್ತು. ಮಹಿಳೆಯೊಬ್ಬರ ಮನೆಯಲ್ಲಿ ಒಂಟಿಯಾಗಿರುವಾಗ ಈಕೆ ಕೊರಿಯರ್ ಏಜೆಂಟ್ ವೇಷದಲ್ಲಿ ಹೋಗಿ ಡೆಲಿವರಿ ಪೇಪರ್‌ಗೆ ಸಹಿ ಹಾಕಲು ಪೆನ್ನನ್ನು ಕೇಳುತ್ತಾಳೆ. ಪೆನ್ನು ತರಲು ಮನೆಯೊಳಗೆ ಹೋದಾಗ ಈಕೆ, ಮನೆಯ ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋಗಿ ಏಕಾಏಕಿಯಾಗಿ ಹಿಂದೆಯಿಂದ ಹೋಗಿ ಗಟ್ಟಿಯಾಗಿ ಹಿಡಿದುಕೊಂಡು ಆಟಿಕೆ ಪಿಸ್ತೂಲ್‌ನಿಂದ ಮಹಿಳೆಗೆ ಈ ಕೊರಿಯರ್ ಏಜೆಂಟ್‌ನಂತೆ ವೇಷ ಧರಿಸಿಕೊಂಡು ಬಂದಿರುವ ಮಹಿಳೆ ಹೊಡೆಯುತ್ತಾಳೆ.

ಕೊರಿಯರ್ ಏಜೆಂಟ್‌ ಹೊಡೆದ ಹೊಡೆತಕ್ಕೆ ಮಹಿಳೆಯ ಮುಖದಲ್ಲಿ ರಕ್ತ ಸುರಿಯುತ್ತದೆ. ಮಹಿಳೆ ತನ್ನ ಸಹಾಯಕ್ಕೆ ಅಕ್ಕ-ಪಕ್ಕದ ಜನರನ್ನು ಕರೆಯುತ್ತಾಳೆ. ತಕ್ಷಣ ಸ್ಥಳೀಯರು ಮಹಿಳೆಯ ಮನೆಯ ಬಳಿ ಬರುತ್ತಾರೆ. ಇದನ್ನು ಕಂಡು ಕೊರಿಯರ್ ಏಜೆಂಟ್‌ ಅಲ್ಲಿಂದ ಓಡಿ ಹೋಗುತ್ತಾಳೆ. ಕೊರಿಯರ್ ಏಜೆಂಟ್‌ ಮುಖಕ್ಕೆ ಬಟ್ಟೆ, ಕೈಗೆ, ಹ್ಯಾಂಡ್ ಗ್ಲೌಸ್, ಹೆಲ್ಮೆಟ್‌ ಹಾಕಿಕೊಂಡಿದ್ದಳು ಎಂದು ಗಾಯಗೊಂಡಿರುವ ಮಹಿಳೆ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ತಂಡವು ಕೊರಿಯರ್ ಏಜೆಂಟ್​​ ವೇಷ ಧರಿಸಿರುವ ಮಹಿಳೆಯ ಪತ್ತೆ ಮಾಡಲು ಸೋಮೇಶ್ ವಿಹಾರ್‌ನಿಂದ ಚಾವ್ಲಾವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಮೇ 24 ರಂದು, ಸೋಮೇಶ್ ವಿಹಾರ್‌ನ ಖಾಲಿ ಮನೆಯಲ್ಲಿ ಇರುವುದನ್ನು ಪತ್ತೆ ಮಾಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಆಕೆಯನ್ನು ಬಂಧಿಸಿದ್ದಾರೆ. ಕೃತ್ಯವನ್ನು ಮಾಡಿದ ಮಹಿಳೆಯನ್ನು ರೇಖಾ ಎಂದು ಹೇಳಲಾಗಿದೆ.

ಬಂಧನದ ನಂತರ ಆಕೆಯನ್ನು ವಿಚಾರಣೆ ಮಾಡಲಾಗಿದೆ. ಈ ಸಮಯದಲ್ಲಿ ಆಕೆ ತಾನು ಸಿವಿಲ್ ಡಿಫೆನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೆ, ಆದರೆ ನನ್ನ ಕೆಲಸ ಹೋಗಿದೆ. ತನ್ನ ಮನೆಯ ಖರ್ಚು ಮತ್ತು ಬಾಡಿಗೆಯನ್ನು ನಿರ್ವಹಿಸಲು ಹೆಣಗಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಅದಕ್ಕಾಗಿ ಹೆಚ್ಚು ಸಂಪಾದನೆ ಹಾಗೂ ತಕ್ಷಣಕ್ಕೆ ಹಣ ಬೇಕಿದ್ದ ಕಾರಣ ಈ ಕೆಲಸ ಮಾಡಿದ್ದಾನೆ ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ:  ಹೆಂಡತಿ ಜತೆ ಜಗಳವಾಡಿ ಕೋಪದಲ್ಲಿ ಮನೆಯ 8 ಮಂದಿಯನ್ನು ಕೊಚ್ಚಿ ಕೊಂದ ವ್ಯಕ್ತಿ

ಈ ಹಿಂದೆ ಉದ್ಯಮಿ ಚಂದ್ರಕಾಂತ ಎಂಬ ವ್ಯಕ್ತಿಯ ಮನೆಯಲ್ಲಿ ಕನ್ನ ಹಾಕಲು ಮುಂದಾಗಿದ್ದಳು, ಹಾಗೂ ಆತನನ್ನು ಕೊಲೆ ಮಾಡಲು ಸಂಚ ರೂಪಿಸಿದ್ದಳು ಎಂದು ಹೇಳಲಾಗಿದೆ. ಮೇ 23 ರಂದು ರೇಖಾ ಕೊರಿಯರ್ ಏಜೆಂಟ್ ವೇಷ ಧರಿಸಿ ಬಟ್ಟೆ ಮತ್ತು ಹೆಲ್ಮೆಟ್ ನಿಂದ ಮುಖ ಮತ್ತು ತಲೆಯನ್ನು ಮುಚ್ಚಿಕೊಂಡು ಚಂದ್ರಕಾಂತ್​​​ ಮನೆಗೆ ಭೇಟಿ ನೀಡಿದ್ದಳು. ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಚಂದ್ರಕಾಂತ ಅವರ ಮನೆಗೆ ಬಂದು ಬಾಗಿಲು ಬಡಿದಿದ್ದಾಳೆ. ನಿಮಗೆ ಒಂದು ಕೋರಿಯರ್​​​ ಬಂದಿದೆ, ನೀವು ಈ ಕೋರಿಯರ್​​​ ಪೇಪರ್​​​ಗೆ ಸಹಿ ಹಾಕಲು ಹೇಳುತ್ತಾಳೆ. ಆದರೆ ನನ್ನ ಬಳಿ ಪೆನ್ನಿನಲ್ಲ ಸರ್​​​, ದಯವಿಟ್ಟು ಪೆನ್ನ್​​​​ ನೀಡಿ ಎಂದು ಕೇಳಿದ್ದಾಳೆ. ಚಂದ್ರಕಾಂತ ಪೆನ್ನು ತರಲು ತನ್ನ ಮನೆಯೊಳಗೆ ಹೋಗುತ್ತಿದ್ದಂತೆ ರೇಖಾ ಅವಳನ್ನು ಹಿಂಬಾಲಿಸಿ ಆಟಿಕೆ ಪಿಸ್ತೂಲ್‌ ಹೊಡೆದು ಹಲ್ಲೆ ನಡೆಸಿದ್ದಾಳೆ.

ಈ ವೇಳೆ ಚಂದ್ರಕಾಂತ್​​​​​ ಜೋರಾಗಿ ಬೊಬ್ಬೆ ಹೊಡೆಯುತ್ತಾನೆ. ಇದರಿಂದ ಭಯಗೊಂಡು ಕೋರಿಯರ್​​​ ಏಜೆಂಟ್​​ ಮಹಿಳೆ ಅಲ್ಲಿಂದ ಒಡಿ ಹೋಗುತ್ತಾಳೆ. ಇದರ ಜತೆಗೆ ಆಕೆ ತಾನು ಬಳಸಿದ್ದ ವಸ್ತುಗಳನ್ನು ಅಲ್ಲಿ ಬಿಟ್ಟು ಹೋಗುತ್ತಾಳೆ. ಇನ್ನು ಈ ಬಗ್ಗೆಯೂ ರೇಖಾ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ