AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೃತ ಚಂದ್ರಶೇಖರನ್ ಮನೆಗೆ ಭೇಟಿ ನೀಡಿ ಅವರ ಪತ್ನಿ ಮತ್ತು ಮಕ್ಕಳಿಗೆ ಸಾಂತ್ವನ ಹೇಳಿದ ಬಿವೈ ವಿಜಯೇಂದ್ರ

ಮೃತ ಚಂದ್ರಶೇಖರನ್ ಮನೆಗೆ ಭೇಟಿ ನೀಡಿ ಅವರ ಪತ್ನಿ ಮತ್ತು ಮಕ್ಕಳಿಗೆ ಸಾಂತ್ವನ ಹೇಳಿದ ಬಿವೈ ವಿಜಯೇಂದ್ರ

ಅರುಣ್​ ಕುಮಾರ್​ ಬೆಳ್ಳಿ
|

Updated on: May 30, 2024 | 12:03 PM

ಕವಿತಾ ತಮ್ಮ ಇಬ್ಬರು ಮಕ್ಳಳನ್ನು ಅವರಿಗೆ ಪರಿಚಯಿಸಿ; ಅತ್ಯಂತ ಪ್ರಾಮಾಣಿಕ, ನಿಷ್ಠಾವಂತ ಮತ್ತು ಭ್ರಷ್ಟರಲ್ಲದ ತಮ್ಮ ಪತಿಯನ್ನು ಮೇಲಧಿಕಾರಿಗಳು ಬಲಿಪಶು ಮಾಡಿದ್ದಾರೆ ಎಂದು ಹೇಳಿದರು. ಕವಿತಾ ಮತ್ತು ಅವರ ಮಕ್ಕಳಿಗೆ ಸಮಾಧಾನ ಹೇಳಿದ ವಿಜಯೇಂದ್ರ, ಅವರು ಅಧೀರರಾಗುವ ಅವಶ್ಯಕತೆಯಿಲ್ಲ, ಬಿಜೆಪಿ ಅವರೊಂದಿಗಿದೆ ಅಂತ ಭರವಸೆ ನೀಡಿದರು.

ಶಿವಮೊಗ್ಗ: ಮಾನಸಿಕ ಒತ್ತಡ ತಾಳಲಾರದೆ ಕಳೆದ ವಾರ ಆತ್ಮಹತ್ಯೆಯ ಮೂಲಕ ಮರಣವನ್ನಪ್ಪಿದ ವಾಲ್ಮೀಕಿ ಅಭಿವೃದ್ಧಿ ನಿಗಮ (Valmiki Development Board) ಮಂಡಳದಲ್ಲಿ ಅಧೀಕ್ಷಕರಾಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರನ್ (Chandrasekharan) ಅವರ ಮನೆಗೆ ಇಂದು ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಮತ್ತು ಸ್ಥಳೀಯ ಬಿಜೆಪಿ ಶಾಸಕ ಚನ್ನಬಸ್ಸಪ್ಪ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಗರದ ಕೆಂಚಪ್ಪ ಲೇಔಟ್ ನಲ್ಲಿರುವ ಮೃತ ಚಂದ್ರಶೇಖರನ್ ಅವರ ನಿವಾಸಕ್ಕೆ ವಿಜಯೇಂದ್ರ ಕೆಲ ಸ್ಥಳೀಯ ಕಾರ್ಯಕರ್ತರೊಡನೆ ಆಗಮಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ವಿಜಯೇಂದ್ರ ಜೊತೆ ಮಹಿಳಾ ಕಾರ್ಯಕರ್ತೆಯರು ಕೂಡ ಇದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷನ ಬಲಭಾಗದಲ್ಲಿ ಕೂರುವ ಚಂದ್ರಶೇಖರನ್ ಅವರ ಪತ್ನಿ ಕವಿತಾ ತಮ್ಮ ಇಬ್ಬರು ಮಕ್ಳಳನ್ನು ಅವರಿಗೆ ಪರಿಚಯಿಸಿ; ಅತ್ಯಂತ ಪ್ರಾಮಾಣಿಕ, ನಿಷ್ಠಾವಂತ ಮತ್ತು ಭ್ರಷ್ಟರಲ್ಲದ ತಮ್ಮ ಪತಿಯನ್ನು ಮೇಲಧಿಕಾರಿಗಳು ಬಲಿಪಶು ಮಾಡಿದ್ದಾರೆ ಎಂದು ಹೇಳಿದರು. ಕವಿತಾ ಮತ್ತು ಅವರ ಮಕ್ಕಳಿಗೆ ಸಮಾಧಾನ ಹೇಳಿದ ವಿಜಯೇಂದ್ರ, ಅವರು ಅಧೀರರಾಗುವ ಅವಶ್ಯಕತೆಯಿಲ್ಲ, ಬಿಜೆಪಿ ಅವರೊಂದಿಗಿದೆ ಅಂತ ಭರವಸೆ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:     ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಾಂತರ ರೂ ಹಣ ಗುಳಂ ಆರೋಪ, ಬ್ಯಾಂಕ್​ ಎಂಡಿ ಸೇರಿ ಹಲವರ ವಿರುದ್ಧ ಎಫ್​ಐಆರ್