ಮಂಡ್ಯ: ಎಣ್ಣೆ ನಶೆಯಲ್ಲಿ ಕಿರಿಕ್: ಅತ್ತಿಗೆ, ಅಣ್ಣನ ಮಗನನ್ನ ಕತ್ತರಿಸಿ ಕೊಂದ ಬಾಮೈದ

|

Updated on: Apr 28, 2023 | 7:34 AM

ಜಮೀನಿಗೆ ನೀರು ಹಾಯಿಸುವ ವಿಚಾರಕ್ಕೆ ಶುರುವಾದ ಕಿರಿಕ್, ಕೊಲೆಯಲ್ಲಿ ಅಂತ್ಯವಾಗಿದೆ. ಎಣ್ಣೆ ಏಟಲ್ಲಿ ಕಿರಿಕ್ ತೆಗೆದ ಬಾಮೈದ, ಅತ್ತಿಗೆ ಹಾಗೂ ಅಣ್ಣನ ಮಗನನ್ನ ಕತ್ತರಿಸಿ ಹಾಕಿದ್ದಾನೆ. ಅಷ್ಟಕ್ಕೂ ಅತ್ತಿಗೆ ಹಾಗೂ ಆಕೆಯ ಮಗನ ಮೇಲೆ ಪಾತಕಿಗೆ ಯಾಕಿಷ್ಟು ಕೋಪ? ಕೊಲೆಗೆ ಅಸಲಿಯತ್ತೇನು. ಇಲ್ಲಿದೆ ನೋಡಿ.

ಮಂಡ್ಯ: ಎಣ್ಣೆ ನಶೆಯಲ್ಲಿ ಕಿರಿಕ್: ಅತ್ತಿಗೆ, ಅಣ್ಣನ ಮಗನನ್ನ ಕತ್ತರಿಸಿ ಕೊಂದ ಬಾಮೈದ
ಮೃತ ತಾಯಿ, ಮಗ
Follow us on

ಮಂಡ್ಯ: ಜಿಲ್ಲೆಯ ಪಾಂಡವಪುರ(Pandavapura) ತಾಲುಕಿನ ಹೆಗಡಹಳ್ಳಿ ಭೀಕರ ಡಬಲ್ ಮರ್ಡರ್​ಗೆ ಸಾಕ್ಷಿಯಾಗಿದೆ. ಹೌದು ನಿನ್ನೆ(ಏ.27) ಮದ್ಯಾಹ್ನ ಶಾಂತಮ್ಮ ಹಾಗೂ ಯಶವಂತ್ ಎಂಬುವವರು ಗದ್ದೆಗೆ ನೀರು ಹಾಯಿಸಲು ತೆರಳಿದ್ದಾರೆ. ಇದೇ ವೇಳೆ ಗದ್ದೆ ಬಳಿ ಬಂದ ಮೈದುನ ಸತೀಶ್​ ಎಂಬಾತ ನೀರಿನ ವಿಚಾರಕ್ಕೆ ಕಿರಿಕ್ ತೆಗೆದಿದ್ದಾನೆ. ಶಾಂತಮ್ಮ ಹಾಗೂ ಸತೀಶ್​ನಿಗೂ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ, ರೊಚ್ಚಿಗೆದ್ದ ಸತೀಶ ಮಿಷನ್ ಮನೆಯಲ್ಲಿದ್ದ ಕುಡುಗೋಲು ತೆಗೆದುಕೊಂಡು ಬಂದು ಏಕಾಏಕಿ ದಾಳಿ ಮಾಡಿದ್ದಾನೆ.

ಹೌದು ಶಾಂತಮ್ಮಳ ತಲೆ ಎದೆ ಕತ್ತು ಹಾಗೂ ಹೊಟ್ಟೆ ಭಾಗಕ್ಕೆ ಮನಸೋ ಇಚ್ಛೆ ಕೊಚ್ಚಿ ಹಾಕಿದ್ದಾನೆ. ಕುಡುಗೋಲಿನ ಏಟಿಗೆ ಶಾಂತಮ್ಮ ಅರಚಾಡುತ್ತ ಕೆಳಗೆ ಬಿದ್ದು ಪ್ರಾಣ ಬಿಟ್ಟಿದ್ದಾಳೆ. ಅಮ್ಮನ ಚೀರಾಟ, ಕೂಗಾಟ ಕೇಳಿದ ಮಗ ಯಶವಂತ್ ಓಡೋಡಿ ಬಂದು, ತಾಯಿ ಸಹಾಯಕ್ಕೆ ಮುಂದಾಗಿದ್ದಾನೆ. ಈ ವೇಳೆ ಯಶವಂತ್ ಮೇಲೆಯೂ ದಾಳಿ ನಡೆಸಿದ ಸತೀಶ ಆತನನ್ನು ಕೊಚ್ಚಿ ಕೊಂದಿದ್ದಾನೆ.

ಇದನ್ನೂ ಓದಿ:ಮದ್ಯ ಸೇವಿಸಲು ಹಣ ನೀಡದ್ದಕ್ಕೆ ಕೊಲೆ: ಮದ್ಯವ್ಯಸನಿ ಪುತ್ರನಿಂದಲೇ ಘೋರ ಕೃತ್ಯ

ಕೊಲೆ ಮಾಡಿದ ಬಳಿಕ ಸಿದಾ ಮನೆಗೆ ಬಂದ ಸತೀಶ ಸ್ನಾನ ಮಾಡಿದ್ದಾನೆ. ಬಳಿಕ ತನ್ನ ಹೆಂಡತಿ ಮಕ್ಕಳನ್ನ ತವರು ಮನೆಗೆ ಕಳುಹಿಸಿದ್ದಾನೆ. ಆದಾದ ಬಳಿಕ ನೇರವಾಗಿ ಪಾಂಡವಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪಾಂಡವಪುರ ಪೊಲೀಸರು. ಆರೋಪಿಯನ್ನ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಅದೇನೆ ಹೇಳಿ ಕ್ಷುಲ್ಲಕ ಕಾರಣಕ್ಕೆ ಸ್ವಂತ ಅತ್ತಿಗೆ ಹಾಗೂ ಆಕೆಯ ಮಗನನ್ನ ಕೊಚ್ಚಿ ಕೊಂದಿದ್ದು ಮಾತ್ರ ನಿಜಕ್ಕೂ ದುರಂತವೇ ಸರಿ.

ವರದಿ: ಸೂರಜ್ ಪ್ರಸಾದ್ ಟಿವಿ9 ಮಂಡ್ಯ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ