ಬೆಂಗಳೂರಿನಲ್ಲಿ ಸಂಶೋಧನಾ ವಿದ್ಯಾರ್ಥಿ ಕ್ಯಾಂಪಸ್​ ಕಟ್ಟಡದಿಂದ ಜಿಗಿದು ಆತ್ಮಹತ್ಯೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 01, 2023 | 8:40 PM

ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಶೋಧನಾ ವಿದ್ಯಾರ್ಥಿ(Student) ಐಐಎಸ್​ಸಿ ಕ್ಯಾಂಪಸ್​ನ ಕಟ್ಟಡದಿಂದ ಜಿಗಿದು ಇಂದು(ಡಿ.01) ಬೆಳಗಿನ ಜಾವ 7:10ರ ಸಂಧರ್ಭದಲ್ಲಿ ಆತ್ಮಹತ್ಯೆ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಸಂಶೋಧನಾ ವಿದ್ಯಾರ್ಥಿ ಕ್ಯಾಂಪಸ್​ ಕಟ್ಟಡದಿಂದ ಜಿಗಿದು ಆತ್ಮಹತ್ಯೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಡಿ.01: ಬೆಂಗಳೂರಿನಲ್ಲಿ ಸಂಶೋಧನಾ ವಿದ್ಯಾರ್ಥಿ(Student) ಐಐಎಸ್​ಸಿ ಕ್ಯಾಂಪಸ್​ನ ಕಟ್ಟಡದಿಂದ ಜಿಗಿದು ಇಂದು(ಡಿ.01) ಬೆಳಗಿನ ಜಾವ 7:10ರ ಸಂಧರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 2022ರ ಬ್ಯಾಚ್​ನ ಡೈಮಂಡ್ ಖುಷ್ವಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಇನ್ನು ಕೆಮಿಕಲ್ ಸೈನ್ಸ್ ವಿಭಾಗದಲ್ಲಿ ಸಂಶೋಧನೆ ಮಾಡುತ್ತಿದ್ದರು. ಆದರೆ, ದಿಢೀರ್​ ಖುಷ್ವಾ ಅವರು ಆತ್ಮಹತ್ಯೆಗೆ ಶರಣಾಗಿದ್ದು, ನಿಖರ ಕಾರಣ ತಿಳಿದುಬಂದಿಲ್ಲ.

ನೇಣು ಹಾಕಿಕೊಂಡು ಯುವಕ ಆತ್ಮಹತ್ಯೆ

ಹುಬ್ಬಳ್ಳಿ : ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ ನಗರದಲ್ಲಿನ ಕಾರವಾರ ರಸ್ತೆಯ ಮಾರ್ಗದಲ್ಲಿರುವ ಮನೆಯೊಂದರಲ್ಲಿ ನಡೆದಿದೆ. ಅಲೆನ್​​ ವಿನೋದ್​​​ ಭಸ್ನೆ(24) ಆತ್ಮಹತ್ಯೆ ಮಾಡಿಕೊಂಡ ರ್ದುದೈವಿ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಉಪನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು,  ಮೃತದೇಹವನ್ನು ಪೊಲೀಸರು, ಕಿಮ್ಸ್​​​ ಶವಗಾರಕ್ಕೆ ರವಾನಿಸಿದ್ದಾರೆ.

ಇದನ್ನೂ ಓದಿ:ಕಾರಿನಲ್ಲಿ ವೈದ್ಯನ ಶವ ಪತ್ತೆ: ಭ್ರೂಣ ಹತ್ಯೆ ಕೇಸ್​ನಲ್ಲಿ ಹೆಸರು ಕೇಳಿಬಂದ ಹಿನ್ನೆಲೆ ಆತ್ಮಹತ್ಯೆ ಶಂಕೆ

ಕಾರಿನಲ್ಲಿ ವೈದ್ಯನ ಶವ ಪತ್ತೆ

ಮಂಡ್ಯ: ತಾಲೂಕಿನ ಶಿವಳ್ಳಿಯಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಡಾ.ಸತೀಶ್ ಎಂಬುವವರು ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಆನೆಕಾಡು ಬಳಿ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಡಾ.ಸತೀಶ್(47)  ಮೃತ ರ್ದುದೈವಿ. ಹಲವು  ವರ್ಷಗಳಿಂದ ಶಿವಳ್ಳಿಯಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಡಾ.ಸತೀಶ್ ಅವರ ಹೆಸರು, ಇತ್ತೀಚಿಗೆ ಭ್ರೂಣ ಹತ್ಯೆ ಕೇಸ್​ನಲ್ಲಿ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಡಾ.ಸತೀಶ್​ನನ್ನು ವಿಚಾರಣೆಗೆ ಕರೆದಿದ್ದರು ಎನ್ನಲಾಗಿದೆ. ಹೀಗಾಗಿ ಕಾರಿನಲ್ಲಿಯೇ ಇಂಜೆಕ್ಷನ್​ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:29 pm, Fri, 1 December 23