ಎಲೆಕ್ಟ್ರಾನಿಕ್ ವಸ್ತು ರಿಪೇರಿಗೆ ಕರೆಯುವ ಮುನ್ನ ಎಚ್ಚರ; ಒಂದೊಮ್ಮೆ ಕರೆ ಮಾಡಿದರೆ ಮುಗಿತು ಕಥೆ

| Updated By: Rakesh Nayak Manchi

Updated on: Nov 19, 2022 | 9:53 AM

ನಿಮ್ಮ ಮನೆಯಲ್ಲಿ ಎಲೆಕ್ಟ್ರಾನಿಕ್ ವಸ್ತು ರಿಪೇರಿಗೆ ಬಂದಿದೆಯೇ? ಹಾಗಿದ್ದರೆ ಎಚ್ಚರವಾಗಿರಿ. ಆನ್​ಲೈನ್​ನಲ್ಲಿ ನಂಬರ್ ಪಡೆದು ರಿಪೇರಿಗೆ ಕರೆದರೆ ಮುಗಿತು ಕಥೆ.

ಎಲೆಕ್ಟ್ರಾನಿಕ್ ವಸ್ತು ರಿಪೇರಿಗೆ ಕರೆಯುವ ಮುನ್ನ ಎಚ್ಚರ; ಒಂದೊಮ್ಮೆ ಕರೆ ಮಾಡಿದರೆ ಮುಗಿತು ಕಥೆ
ಎಲೆಕ್ಟ್ರಾನಿಕ್ ವಸ್ತು ರಿಪೇರಿಗೆ ಕರೆಯುವ ಮುನ್ನ ಎಚ್ಚರ; ಒಂದೊಮ್ಮೆ ಕರೆ ಮಾಡಿದರೆ ಮುಗಿತು ಕಥೆ
Follow us on

ಬೆಂಗಳೂರು: ವಂಚಕರಿಗೆ ವಂಚನೆ ಮಾಡುವುದೊಂದೇ ಕೆಲಸ, ತಂತ್ರಜ್ಞಾನ ಮುಂದುವರಿದಂತೆ ಖದೀಮರು, ವಂಚಕರು, ಸೈಬರ್ ಅಪರಾಧಿಗಳು ಕೂಡ ಅಪ್​ಡೇಟ್ ಆಗುತ್ತಾರೆ. ಜನರಿಗೆ ಯಾವ ರೀತಿಯಲ್ಲಿ ವಂಚನೆ ಮಾಡಬಹುದು ಎಂಬುದನ್ನು ನಾನಾ ರೀತಿಯ ಉಪಾಯವನ್ನು ಕಂಡುಹಿಡಿಯುತ್ತಾರೆ. ಹೀಗಾಗಿ ಆನ್​ಲೈನ್​ನಲ್ಲಿ ಇರುವುದೆಲ್ಲವೂ ಸತ್ಯ ಎಂಬ ಮನಸ್ಥಿತಿಯನ್ನು ಹೊರಬರಬೇಕಿದೆ. ಇಲ್ಲವಾದರೆ ವಂಚಕರ ಮೋಸದ ಬಲೆಗೆ ಬಿದ್ದು ಇದ್ದ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಇಂತಹದ್ದೇ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬೆಂಗಳೂರಿನ ಈಶಾನ್ಯ ವಿಭಾಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ವಸ್ತುಗಳನ್ನು ರಿಪೇರಿ ಮಾಡುವ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದ ಅಬ್ದುಲ್ ಸುಭಾನ ಎಂಬಾತನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಬಂಧನದ ವೇಳೆ ಎರಡು ಮೊಬೈಲ್, 4 ಸಿಮ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಆನೆದಂತಗಳಿಂದ ಮಾಡಿದ್ದ ಪುರಾತನ ಕಾಲದ ವಸ್ತುಗಳ ಮಾರಾಟಕ್ಕೆ ಯತ್ನ, 6 ಜನರ ಬಂಧನ

ಎಲೆಕ್ಟ್ರಾನಿಕ್ ವಸ್ತುಗಳನ್ನು ರಿಪೇರಿ ಮಾಡಿಕೊಡಲಾಗುವುದು ಎಂದು ದೂರವಾಣಿ ಸಂಖ್ಯೆ ಸಹಿತ ಗೂಗಲ್​ನಲ್ಲಿ ಜಾಹೀರಾತು ನೀಡಲಾಗುತ್ತದೆ. ಈ ಜಾಹೀರಾತನ್ನು ನಂಬಿಕೊಂಡು ನೀಡುವ ದೂರವಾಣಿ ಕರೆ ಮಾಡಿದಾಗ ಅವರು ಮೋಸದ ಬಲೆಯನ್ನು ಬೀಸಲು ಆರಂಭಿಸುತ್ತಾರೆ. ಒಂದೊಮ್ಮೆ ನೀವು ಅವರು ಹೇಳಿದಾಗ ಕುಣಿದರೆ ಬ್ಯಾಂಕ್ ಅಕೌಂಟ್ ಖಾಲಿಯಾಗುವುದು ಖಂಡಿತ.

ಇದನ್ನೂ ಓದಿ: Hassan: ಮಕ್ಕಳನ್ನು ನೋಡಲು ಬಿಡದಿದ್ದಕ್ಕೆ ಮಡದಿ ಮಕ್ಕಳನ್ನೂ ಸೇರಿಸಿ ಮನೆಗೆ ಬೆಂಕಿ ಹಚ್ಚಿದ ಪಾಪಿ ಪತಿ

ನೀವು ಕರೆ ಮಾಡಿ ರಿಪೇರಿಗೆ ಆಹ್ವಾನಿಸಿದರೆ, ಸಾರ್ವಜನಿಕರಿಗೆ ತಿಳಿಯದ ವೈಜ್ಙಾನಿಕ ಹೆಸರಿನ ಉಪಕರಣ ಹಾಳಾಗಿದೆ ಎಂದು ಅವರು ಹೇಳುತ್ತಾರೆ. ಮಾತ್ರವಲ್ಲದೆ, ಅದಕ್ಕಾಗಿ 9 ರಿಂದ‌ 10 ಸಾವಿರ ಹಣ ಆಗುತ್ತದೆ ಎಂದು ಹೇಳಿ ಹಣವನ್ನು ಮುಂಗಡವಾಗಿ ಗೂಗಲ್ ಪೇ ಮಾಡಲು ಸೂಚಿಸುತ್ತಾರೆ. ನೀವು ಇವರನ್ನು ನಂಬಿ ಹಣವನ್ನು ಅವರಿಗೆ ಕಳುಹಿಸಿದರೆ ನಂತರದ ಒಂದೇ ನಿಮಿಷದಲ್ಲಿ ನಿಮ್ಮ ನಂಬರ್​ ಅನ್ನು ಬ್ಲಾಕ್ ಮಾಡಲಾಗುತ್ತದೆ. ಬಂಧಿತ ಆರೋಪಿ ಅಬ್ದುಲ್ ಮಾಡುತ್ತಿದ್ದ ವಂಚನೆಯೂ ಇದೇ ಆಗಿದೆ.

ಬಟ್ಟೆ ಅಂಗಡಿ ಮಾಲೀಕರಿಗೆ ವಂಚನೆ

ಬೆಂಗಳೂರು: ಗಾರ್ಮೆಂಟ್ಸ್​​​ ಕಂಪನಿಗಳಿಂದ ಬಟ್ಟೆ ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪಿಗಳನ್ನು ನಗರದ ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೋಲ್​ಸೇಲ್​ ಆಗಿ ಬಟ್ಟೆ ಕೊಡಿಸುವುದಾಗಿ ಹಲವು ಅಂಗಡಿ ಮಾಲೀಕರಿಗೆ ವಂಚಿಸಿದ್ದ ಆರೋಪಿಗಳು ವಿಮಲ್ ಮತ್ತು ಆಯುಷ್ ಬಂಧಿತ ಆರೋಪಿಗಳಾಗಿದ್ದಾರೆ. ಹೋಲ್​ಸೆಲ್​ ಆಗಿ ಬಟ್ಟೆ ಕೊಡಿಸುವ ನೆಪದಲ್ಲಿ ಆರೋಪಿಗಳು ಬಟ್ಟೆ ಅಂಗಡಿ ಮಾಲೀಕರಿಗೆ ಕೋಟಿ ಮೊತ್ತದಲ್ಲಿ ವಂಚನೆ ಮಾಡಿದ್ದಾರೆ. ಪುಣೆ, ದೆಹಲಿ, ಕರ್ನಾಟಕ ಸೇರಿ ಹಲವೆಡೆ ವಂಚನೆ ಎಸಗಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:42 am, Sat, 19 November 22