AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು: ಸಹೋದರಿಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹಾಕಿದಕ್ಕೆ ಯುವಕನ ವಿರುದ್ಧ ಲವ್ ಜಿಹಾದ್ ಆರೋಪ, ಎಫ್​ಐಆರ್​ ದಾಖಲು

ತನ್ನ ಸಹೋದರಿಯ ಫೋಟೋವನ್ನು ಸೋಶಿಯಲ್ ಮೀಡಿಯಾಗೆ ಹಾಕಿದಕ್ಕೆ ಲವ್ ಜಿಹಾದ್ ಪಿತೂರಿ ಎಂದು ಯುವತಿಯ ಅಣ್ಣ ದೂರು ದಾಖಲಿಸಿದ್ದಾರೆ.

ಚಿಕ್ಕಮಗಳೂರು: ಸಹೋದರಿಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹಾಕಿದಕ್ಕೆ ಯುವಕನ ವಿರುದ್ಧ ಲವ್ ಜಿಹಾದ್ ಆರೋಪ, ಎಫ್​ಐಆರ್​ ದಾಖಲು
ಲವ್ ಜಿಹಾದ್ ಆರೋಪ
TV9 Web
| Edited By: ಆಯೇಷಾ ಬಾನು|

Updated on:Nov 19, 2022 | 1:33 PM

Share

ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಲವ್ ಜಿಹಾದ್ ಪಿತೂರಿ ಆರೋಪ ಕೇಳಿ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸಹೋದರಿಯ ಫೋಟೋ ಹಾಕಿದ ಆರೋಪಕ್ಕೆ ಸಂಬಂಧಿಸಿ ಕೊಪ್ಪ ತಾಲೂಕಿನ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಮೊಹಮ್ಮದ್​ ರೋಫ್​ ಎಂಬುವನ ವಿರುದ್ಧ FIR ದಾಖಲಾಗಿದೆ. ಯುವತಿಯ ಅಣ್ಣನ ದೂರಿನ ಮೇರೆಗೆ ಮೊಹಮ್ಮದ್​ ರೋಫ್, ಇನ್ಸ್​ಪೆಕ್ಟರ್​ ಜಾಕೀರ್​ ಹುಸೇನ್​​ ವಿರುದ್ಧವೂ ದೂರು ದಾಖಲಾಗಿದೆ.

ತನ್ನ ಸಹೋದರಿಯ ಫೋಟೋವನ್ನು ಸೋಶಿಯಲ್ ಮೀಡಿಯಾಗೆ ಹಾಕಿದಕ್ಕೆ ಲವ್ ಜಿಹಾದ್ ಪಿತೂರಿ ಎಂದು ಯುವತಿಯ ಅಣ್ಣ ದೂರು ದಾಖಲಿಸಿದ್ದಾರೆ. ಹಾಗೂ ದೂರು ನೀಡಿದರು ಕ್ರಮ ಕೈಗೊಂಡಿಲ್ಲವೆಂದು ಸೆನ್​ ಠಾಣೆ ಇನ್ಸ್​ಪೆಕ್ಟರ್​ ಜಾಕೀರ್ ಹುಸೇನ್ ಮೇಲೆಯೂ ದೂರು ದಾಖಲಿಸಿದ್ದಾರೆ. ಹಾಗೂ ಯುವತಿಯ ಸಹೋದರ ಎಸ್ಪಿಗೂ ಲಿಖಿತ ದೂರು ನೀಡಿದ್ದಾರೆ.

ಎಐಎಂಐಎಂ ರಾಜ್ಯಾಧ್ಯಕ್ಷರ ವಿರುದ್ಧ ಹಲ್ಲೆ ಆರೋಪ

ಹಜರತ್ ಸೈಯದ್ ಮುರ್ತುಜಾ ಖಾದ್ರಿ ದರ್ಗಾ ಕಮಿಟಿ ಹಣದ ಅವ್ಯವಹಾರದ ಬಗ್ಗೆ ಪ್ರಶ್ನಿಸಿದಕ್ಕೆ ಎಐಎಂಐಎಂ ರಾಜ್ಯಾಧ್ಯಕ್ಷರ ಉಸ್ಮಾನ್​​​ ಗಣಿ ಹಾಗೂ ಮಕ್ಕಳು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬಾಗಲಕೋಟೆ ಜಿಲ್ಲೆ ಇಳಗಲ್​ ನಗರದಲ್ಲಿ ಘಟನೆ ನಡೆದಿದೆ. ರಫಿಕ್​​ ನದಾಫ್​, ಶಾಮಿದ್​​​​ ರಷ್ಮಿ, ಜಬೇರ್​​ ಮೇಲೆ ಹಲ್ಲೆ ನಡೆದಿದೆ.

ದರ್ಗಾ ಕಮಿಟಿ ಹಣದ ಅವ್ಯವಹಾರದ ಬಗ್ಗೆ ಪ್ರಶ್ನಿಸಿದ್ದಕ್ಕೆ ಇಳಗಲ್​ ನಗರದ ಅಂಜುಮನ್​ ಕಾಂಪ್ಲೆಕ್ಸ್ ಬಳಿ ಉಸ್ಮಾನ್​​​ ಗಣಿ ಮತ್ತು ಆತನ ಮಕ್ಕಳಾದ ಆದಿಲ್​, ಫೈಸಲ್​​​​​​, ಸೋಹಿಲ್​​​, ಶೋಹಿಬ್​, ಶಬಾಜ್​​​​​, ಸ್ನೇಹಿತ ಶೊಯಿಬ್​​ ಸೇರಿ ರಫಿಕ್​​ ನದಾಫ್​, ಶಾಮಿದ್​​​​ ರಷ್ಮಿ, ಜಬೇರ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಿಂದೆ ದರ್ಗಾ ಕಮಿಟಿ ಅಧ್ಯಕ್ಷರಾಗಿದ್ದ ಉಸ್ಮಾನ್​​​ ಗಣಿ ಅಧ್ಯಕ್ಷರಾಗಿದ್ದಾಗ ಕಮಿಟಿ ಹಣ ದುರ್ಬಳಕೆ ಮಾಡಿದ್ದರಂತೆ. ಈ ಸಂಬಂಧ ಪ್ರಶ್ನಿಸಿದಕ್ಕೆ ಮೂವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಮೂವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Published On - 1:17 pm, Sat, 19 November 22

Follow Us
TV9 Web
TV9 Web

TV9 Kannada

Read More
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು