ಬೆಂಗಳೂರು, ಜನವರಿ 25: ಡೇ ಕೇರ್ ಸೆಂಟರ್ (day care center) ನ 3ನೇ ಮಹಡಿಯಿಂದ ಬಿದ್ದು, ಗಂಭೀರ ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದೆ. ಕೇರಳ ಮೂಲದ ಟೆಕ್ಕಿ ದಂಪತಿ ಜಿಟೋ ಟಾಮಿ ಜೋಸೆಫ್, ಬಿನಿಟೋ ಥಾಮಸ್ ಪುತ್ರಿ ಜಿನಾ ಮೃತ ಮಗು. ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು. ಜನವರಿ 22 ರ ಮಧ್ಯಾಹ್ನ ಖಾಸಗಿ ಫ್ರೀ ಸ್ಕೂಲ್ (ನರ್ಸರಿ) ಮೂರನೇ ಮಹಡಿಯಿಂದ ಬಿದ್ದು ತಲೆಗೆ ತೀವ್ರ ಗಾಯವಾಗಿತ್ತು. ಹಾಗಾಗಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಬ್ಬಾಳ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಟಿವಿನೈನ್ನಲ್ಲಿ ವರದಿ ಬಿತ್ತರವಾದ ಬಳಿಕ ಅಲರ್ಟ್ ಆದ ಹೆಣ್ಣೂರು ಪೊಲೀಸರು, ಡೆಲ್ಲಿ ಫ್ರಿ ಸ್ಕೂಲ್(ನರ್ಸರಿ) ವಿರುದ್ದ ಎಫ್ಐಆರ್ ದಾಖಲು ಮಾಡಲು ಮುಂದಾಗಿದ್ದರು. ಮಗುವಿನ ತಂದೆ ಜಿಯೋ ಟಾಮಿ ಜೋಸೆಫ್ ಅವರು ‘ವಾಸ್ತವಾಂಶ ಮರೆಮಾಡಿ, ಸರಿಯಾದ ಮಾಹಿತಿ ನೀಡದೆ, ನಿರ್ಲಕ್ಷ್ಯ ವಹಿಸಿರುವ ಫ್ರೀ ಸ್ಕೂಲ್ ವಿರುದ್ದ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬೆಂಗಳೂರು: ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಎಳೆನಹಳ್ಳಿ ಸಮೀಪದ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನ 29ನೇ ಮಹಡಿಯಿಂದ ಸುಮಾರು 12 ವರ್ಷದ ಬಾಲಕಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆತಂಕಕಾರಿ ಘಟನೆ ನಿನ್ನೆ ಮುಂಜಾನೆ 4:30ರ ಸುಮಾರಿಗೆ ನಡೆದಿದೆ. 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಕುವಿರಾ ಮೃತ ಬಾಲಕಿ.
ಇದನ್ನೂ ಓದಿ: ದಾವಣಗೆರೆ: ಎರಡನೇ ಹೆಂಡತಿಗಾಗಿ ಮೊದಲ ಪತ್ನಿ ಕೊಂದು ಕೆರೆಗೆ ಎಸೆದ ಪತಿ; ಪೊಲೀಸ್ ಬಲೆಗೆ ಬಿದ್ದಿದ್ದೇಗೆ?
ನಿನ್ನೆ ಮುಂಜಾನೆ 5 ಗಂಟೆ ಸುಮಾರಿಗೆ ತಾನು ವಾಸವಿದ್ದ 29ನೇ ಮಹಡಿಯ ಬಾಲ್ಕನ್ನಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಿರುಚಿದ ಶಬ್ದ ಕೇಳಿ ಸೆಕ್ಯೂರಿಟಿ ಗಾರ್ಡ್ ಗಮನಿಸಿ ಅಪಾರ್ಟ್ಮೆಂಟ್ ಅಸೋಸಿಯೇಷನ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಹುಳಿಮಾವು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಮೃತಳ ತಂದೆ ಮಾಜಿ ಸಾಪ್ಟ್ ವೇರ್ ಉದ್ಯೋಗಿಯಾಗಿದ್ದು, ಸದ್ಯ ಶೇರು ಮಾರುಕಟ್ಟೆ ಬಿಸಿನೆಸ್ ಮಾಡುತ್ತಿದ್ದಾರೆ. ತಾಯಿ ಗೃಹಿಣಿಯಾಗಿದ್ದು, ನಿನ್ನೆ ಬೆಳಗ್ಗೆ 4:30 ರ ಸುಮಾರಿಗೆ ಎಚ್ಚರಗೊಂಡಿದ್ದ ಮಗಳನ್ನು ಪ್ರಶ್ನಿಸಿದ್ದಾರೆ. ಸೂಕ್ತ ಉತ್ತರ ನೀಡದೇ ಕೊಠಡಿಗೆ ಮರಳಿದ್ದಾಳೆ ಎನ್ನಲಾಗಿದೆ. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ: ಬೀದರ್: ಸ್ಕಾರ್ಪಿಯೋ ವಾಹನ ಡಿಕ್ಕಿ: ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು, ಪ್ರಕರಣ ದಾಖಲು
ಒಬ್ಬಳೇ ಮಗಳಾದ್ದರಿಂದ ಪೋಷಕರು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದರೆ ಬಾಲಕಿಗೆ ಕೋಪ ಕೊಂಚ ಜಾಸ್ತಿ ಇತ್ತು ಎನ್ನಲಾಗಿದೆ. ಬುದ್ಧಿ ಮಾತು ಹೇಳಿದರೆ ವಾದಿಸುತ್ತಿದ್ದಳು ಎನ್ನಲಾಗಿದೆ. ಪೋಷಕರು ಮಕ್ಕಳಿಗೆ ಬುದ್ಧಿ ಮಾತು ಹೇಳುವ ಎಚ್ಚರ ವಹಿಸಬೇಕಿದೆ.
ಇತ್ತೀಚೆಗೆ ಮಕ್ಕಳ ಮನಸ್ಸು ಸಂಕೀರ್ಣಗೊಳ್ಳುತ್ತಿದ್ದು, ಹೂವಿನಂತಹ ಮಕ್ಕಳ ಮನಸ್ಸುಗಳು ದುರ್ಬಲಗೊಳ್ಳುತ್ತಿದೆಯಾ ಎಂಬ ಪ್ರಶ್ನೆ ಮೂಡುತ್ತಿದೆ. ಅಲ್ಲದೆ ಮಕ್ಕಳ ಪಾಲನೆ ಪೋಷಣೆಯಲ್ಲಿ ಪೋಷಕರು ಎಡವುತ್ತಿದ್ದು, ಮಕ್ಕಳಿಗೆ ಬದುಕಿನ ನೈತಿಕ ಪಾಠ ಕಲಿಸುವುದರಲ್ಲಿ ವಿಫಲವಾಗುತ್ತಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.