ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ತಾಯಿ-ಮಗಳ ಜಗಳ: ಚಾಕು ಇರಿತದಲ್ಲಿ ಪುತ್ರಿ ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: Apr 29, 2024 | 10:36 PM

ಬೆಂಗಳೂರಿನ ಬನಶಂಕರಿಯ ಶಾಸ್ತ್ರಿನಗರದ 3ನೇ ಕ್ರಾಸ್​ನಲ್ಲಿ ಪಿಯು ಫಲಿತಾಂಶದ ವಿಚಾರವಾಗಿ ತಾಯಿ ಮತ್ತು ಮಗಳ ನಡುವೆ ವಾಗ್ವಾದ ಉಂಟಾಗಿದೆ. ಈ ವೇಳೆ ಪರಸ್ಪರ ಚಾಕು ಇರಿತದಲ್ಲಿ, ಪುತ್ರಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ತೀವ್ರ ರಕ್ತಸ್ರಾವವಾಗಿ ಸಾಹಿತಿ ಮೃತಪಟ್ಟಿದ್ದು, ತಾಯಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ತಾಯಿ-ಮಗಳ ಜಗಳ: ಚಾಕು ಇರಿತದಲ್ಲಿ ಪುತ್ರಿ ಸಾವು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಏಪ್ರಿಲ್​ 29: ಪಿಯು ಫಲಿತಾಂಶದ ವಿಚಾರವಾಗಿ ತಾಯಿ (Mother) ಮತ್ತು ಮಗಳ (daughter) ನಡುವೆ ವಾಗ್ವಾದ ಉಂಟಾಗಿದೆ. ಈ ವೇಳೆ ಪರಸ್ಪರ ಚಾಕು ಇರಿತದಲ್ಲಿ, ಪುತ್ರಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಬನಶಂಕರಿಯ ಶಾಸ್ತ್ರಿನಗರದ 3ನೇ ಕ್ರಾಸ್​ನಲ್ಲಿ ನಡೆದಿದೆ. ಸಾಹಿತಿ ಮೃತ ಪುತ್ರಿ, ಪದ್ಮಜಾ ತಾಯಿ. ದ್ವಿತೀಯ ಪಿಯುಸಿಯಲ್ಲಿ ಸಾಹಿತಿ ಪಾಸ್ ಆಗಿದ್ದಾಳೆ. ಆದರೆ ಕಡಿಮೆ ಅಂಕ ಬಂದಿದೆ ಎಂದು ಪುತ್ರಿ ಜತೆ ತಾಯಿ ಪದ್ಮಜಾ ವಾಗ್ವಾದ ಮಾಡಿದ್ದಾರೆ.

ವಾಗ್ವಾದ ತಾರಕಕ್ಕೇರಿ ತಾಯಿ, ಪುತ್ರಿ ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದು, ತೀವ್ರ ರಕ್ತಸ್ರಾವವಾಗಿ ಸಾಹಿತಿ ಮೃತಪಟ್ಟಿದ್ದು, ತಾಯಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ತಾಯಿ ಪದ್ಮಜಾಗೆ 4-5 ಕಡೆ ಸಾಹಿತಿ ಚಾಕು ಇರಿದಿದ್ದಾಳೆ. ಸದ್ಯ ಪದ್ಮಜಾ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಚಾಕುವಿನಿಂದ ಪತ್ನಿಯ ಕುತ್ತಿಗೆ ಕೊಯ್ದು ಕೊಲೆಗೈದ ಪತಿ

ಬೆಂಗಳೂರಿನ ಇಲಿಯಾಸ್ ನಗರದಲ್ಲಿ ಚಾಕುವಿನಿಂದ ಪತ್ನಿಯ ಕುತ್ತಿಗೆ ಕೊಯ್ದು ಪತಿ ಕೊಲೆಗೈದಿರುವಂತಹ ಘಟನೆ ನಡೆದಿದೆ. ಶಿಯಾಫತ್ ಉನ್ನೀಸಾ(43)ರನ್ನು ಪತಿ ನೂರುಲ್ಲಾ ಕೊಲೆ ಮಾಡಿದ್ದಾನೆ. 20 ವರ್ಷಗಳ ಹಿಂದೆ ಶಿಯಾಫತ್, ನೂರುಲ್ಲಾ ವಿವಾಹವಾಗಿದ್ದು, ದಂಪತಿಗೆ ಮೂವರು ಮಕ್ಕಳಿದ್ದಾರೆ.

ಇದನ್ನೂ ಓದಿ: ಕೊಟ್ಟ ಸಾಲ ಕೇಳಿದ್ದಕ್ಕೆ ಮಗುವನ್ನು ಕೊಂದ ದುರುಳರು: ಹಣ ಕೊಟ್ಟು ಮಗಳನ್ನ ಕಳೆದುಕೊಂಡ ತಂದೆ

ಇತ್ತೀಚೆಗೆ ವಿವಾಹ ವಿಚ್ಛೇದನಕ್ಕೆ ದಂಪತಿ ನಿರ್ಧರಿಸಿದ್ದರು. 5 ದಿನಗಳಿಂದ ಪತ್ನಿಯಿಂದ ಪತಿ ನೂರುಲ್ಲಾ ದೂರವಿದ್ದ. ಇಂದು ಶಿಯಾಫತ್ ಉನ್ನೀಸಾ ಮನೆ ಖಾಲಿ ಮಾಡುತ್ತಿದ್ದರು. ಏಕಾಏಕಿ ಮನೆಗೆ ಬಂದಿದ್ದ ನೂರುಲ್ಲಾನಿಂದ ಶಿಯಾಫತ್ ಕೊಲೆ ಮಾಡಲಾಗಿದೆ. ಪತ್ನಿ ಶಿಯಾಫತ್ ಕೊಂದು ಬಳಿಕ ನೂರುಲ್ಲಾ ಪೊಲೀಸರಿಗೆ ಶರಣಾಗಿದ್ದಾನೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹಿಟ್ ಅಂಡ್ ರನ್​ಗೆ ಬೈಕ್ ಸವಾರ ಬಲಿ

ಆನೇಕಲ್: ಹಿಟ್ ಅಂಡ್ ರನ್​​ಗೆ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಹೊರವಲಯ ಬನ್ನೇರುಘಟ್ಟ ರಸ್ತೆಯ ಸಕಲವಾರ ಸಮೀಪ ನಡೆದಿದೆ. ಪ್ರತಾಪ್(26) ಮೃತ ಬೈಕ್ ಸವಾರ. ಸ್ನೇಹಿತನ ಜೊತೆ ಬೈಕ್​ನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: Ramanagara: ಮೇಕೆದಾಟು ಸಂಗಮದಲ್ಲಿ ಈಜಲು ತೆರಳಿದ್ದ ಬೆಂಗಳೂರಿನ ಐವರು ವಿದ್ಯಾರ್ಥಿಗಳು ನೀರುಪಾಲು

ಹಿಂಬದಿಯಿಂದ ಬೈಕ್​ಗೆ ಅಪರಿಚಿತ ವಾಹ‌ನ ಡಿಕ್ಕಿ ಹೊಡೆದಿದೆ. ಮತ್ತೋರ್ವ ಬೈಕ್ ಸವಾರಿನಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.